SCO ವೇದಿಕೆಯ ಮೂಲಕ ಈಗಾಗಲೇ ಭಾರತ (india), ರಷ್ಯಾ (Russia)ಮತ್ತು ಚೀನಾ (China) ಒಟ್ಟಾಗಿ ವಿಶ್ವದ ದೊಡ್ಡಣ ಅಮೆರಿಕಾಗೆ ಪರೋಕ್ಷ ಸಂದೇಶ ರವಾನಿಸಿದ್ದು, ಈ ಬೆನ್ನಲ್ಲೇ ಇಂದು (ಸೆ.3) ಚೀನಾ ವಿಮೋಚನಾ ದಿನಾಚರಣೆಯಲ್ಲಿ ಶಕ್ತಿ ಪ್ರದರ್ಶನ ನಡೆಸಲಾಗಿದೆ.ಇಂದು ನಡೆಯುತ್ತಿರೋ ವಿಮೋಚನಾ ದಿನಾಚರಣೆಯಲ್ಲಿ ಡ್ರ್ಯಾಗನ್ ರಾಷ್ಟ್ರ ಚೀನಾ ಅಮೆರಿಕಾಗೆ ನೇರ ಸಂದೇಶ ರವಾನೆ ಮಾಡಿದೆ.

ಹೀಗಾಗಿ ಚೀನಾ ತನ್ನಲ್ಲಿರುವ ಅತ್ಯಾಧುನಿಕ ಯುದ್ದ ಶಸ್ತ್ರಾಸ್ತಗಳು ಮತ್ತು ಕ್ಷಿಪಣಿಗಳನ್ನ ಪರೇಡ್ ನಲ್ಲಿ ತಂದು ಇಡೀ ವಿಶ್ವದ ಮುಂದೆ ಪ್ರದರ್ಶಿಸಿದೆ. DF-5C ಇಂಟರ್ಕಾಂಟಿನೆಂಟಲ್ ಸ್ಟ್ರಾಟೆಜಿಕ್ ನ್ಯೂಕ್ಲಿಯರ್ ಕ್ಷಿಪಣಿಯನ್ನ ಚೀನಾ ಪ್ರದರ್ಶನ ಮಾಡಿದೆ. ತಜ್ಞರ ಪ್ರಕಾರ, ಈ ಕ್ಷಿಪಣಿ 20,000 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದ್ದುವಿವಿಧ ಉಡಾವಣಾ ವಿಧಾನಗಳನ್ನು ಹೊಂದಿದೆ.

ಇದರಿಂದಾಗಿ DF-5C ವಿರುದ್ಧ ರಕ್ಷಣೆ ಹೆಚ್ಚು ಕಷ್ಟಕರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಉತ್ತರ ಕೊರಿಯಾ ಕಿಮ್ ಜಾಂಗ್ ಉನ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಭಾಗಿಯಾಗಿದ್ದು, ಅಮೆರಿಕಾಗೆ ನೇರ ಎಚ್ಚರಿಕೆ ರವಾನೆ ಮಾಡಿದಂತಿದೆ.