• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಚಿಲುಮೆ ಮತದಾನ‌ ದತ್ತಾಂಶ ಕಳವು ಪ್ರಕರಣ : ಎಚ್ಚೆತ್ತ ಅಭ್ಯರ್ಥಿಗಳಿಂದ ಸರ್ವೇ ಕಾರ್ಯ.!!

ಕರ್ಣ by ಕರ್ಣ
November 20, 2022
in ಕರ್ನಾಟಕ
0
ಚಿಲುಮೆ ಮತದಾನ‌ ದತ್ತಾಂಶ ಕಳವು ಪ್ರಕರಣ : ಎಚ್ಚೆತ್ತ ಅಭ್ಯರ್ಥಿಗಳಿಂದ ಸರ್ವೇ ಕಾರ್ಯ.!!
Share on WhatsAppShare on FacebookShare on Telegram

ಚಿಲುಮೆ ಸಂಸ್ಥೆ ನಡೆಸಿದ ಅಕ್ರಮ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬೆಂಗಳೂರು ಬಿಬಿಎಂಪಿ ಚುನಾವಣೆ ನೆನೆಗುದಿಗೆ ಬಿದ್ದಿದ್ರೂ ಶೀಘ್ರವೇ ನಡೆಯುವ ನಿರೀಕ್ಷೆ ಇದೆ. ಈ ಮಧ್ಯೆ ಚಿಲುಮೆ ಸಂಸ್ಥೆಯ ಅಕ್ರಮಕ್ಕೆ ಬೆದರಿದ ಕಾರ್ಪೊರೇಟರ್ ಟಿಕೆಟ್ ಅಕಾಂಕ್ಷಿಗಳು ಸರ್ವೇ ಮಾಡಲು ಮುಂದಾಗಿದ್ದಾರೆ.

ADVERTISEMENT

ಚುನಾವಣಾ ಆಯೋಗದ ನಿಯಮ ಗಾಳಿಗೆ ತೂರಿದ ಚಿಲುಮೆ ಸಂಸ್ಥೆಗೆ ಸಂಕಷ್ಟ ಎದುರಾಗಿದೆ. ಒಂದೆಡೆ ಪೊಲೀಸರು ತೀರ್ವ ತನಿಖೆ ಕೈಗೆತ್ತಿಕೊಂಡಿದ್ದಾರೆ.‌ ಆದ್ರೆ ಇತ್ತ ಈ ಅದ್ವಾನದ ಬೆನ್ನಲ್ಲೇ ಬಿಬಿಎಂಪಿ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸರ್ವೇಗೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಆರುವರೆ ಲಕ್ಷ ಮತದಾರ ಪಟ್ಟಿ ಡಿಲೀಟ್ ಮಾಡಲಾಗಿದೆ. ಈ ಹಿನ್ನೆಲೆ ಚಿಲುಮೆ ಸಂಸ್ಥೆಯ ಗೋಲ್ ಮಾಲ್ ಗೆ ಬೆದರಿದ ಅಭ್ಯರ್ಥಿಗಳು ತಮ್ಮ ಏರಿಯಾದ ವೋಟರ್ ಲಿಸ್ಟ್ ಅನ್ನು ಮತ್ತೊಮ್ಮೆ ಪರಿಶೀಲನೆ ಮಾಡಲು ಮುಂದಾಗಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ವೋಟರ್ ಡಿಲೀಟ್ ಆದವರ ಪರಿಶೀಲನೆ ಮಾಡಲು ಮುಂದಾದ ಅಕಾಂಕ್ಷಿಗಳು.!!

ಇತ್ತೀಚಿಗಷ್ಟೆ ಮತದಾರರ ಪಟ್ಟಿ ಪರಿಷ್ಕರಣೆ ಆದವರ ಹೆಸರು ಡಿಲೀಟ್ ಆಗಿತ್ತು.‌ ಇದರಲ್ಲಿ ವಾರ್ಡ್ ಪುನರ್ ವಿಂಗಡಣೆಯೂ ಆಗಿರುವುದರಿಂದ ಕೆಲವು ಭಾಗದಲ್ಲಿ ಹೊಸ ವಾರ್ಡ್ ಗಳಿಗೆ ಮತದಾರರು ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆಯಾ ವಾರ್ಡ್, ಏರಿಯಾದಲ್ಲಿ ಮತದಾರರ ಪಟ್ಟಿ ಪುನರ್ ಪರಿಶೀಲನೆಗೆ ‌ಮುಂದಾಗಿದ್ದು ಸದ್ಯಕ್ಕೆ ಇದೀಗ ಎರಡು ವಿಧಾನಸಭಾ ಕ್ಷೇತ್ರ, 20ಕ್ಕೂ ಹೆಚ್ಛು ವಾರ್ಡ್ ಗಳಲ್ಲಿ ಪರಿಶೀಲನೆ ನಡೆಸಲು ಈ ಭಾಗದ ಆಕಾಂಕ್ಷಿಗಳು ಮುಂದಾಗಿದ್ದಾರೆ.

ತಮ್ಮ ಮತದಾರರ ಪಟ್ಟಿ ಪರಿಶೀಲಿಸಲು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈ ನಾಯಕರ ಓಡಾಟ ನಡೆಸುತ್ತಿದ್ದಾರೆ. ಶಾಸಕ ದಿನೇಶ್ ಗುಂಡೂರಾವ್ ಸೂಚನೆ ಮೇರೆಗೆ ಸ್ಥಳೀಯ ನಾಯಕರ ಮೂಲಕ ಮತದಾರ ಪಟ್ಟಿಯಲ್ಲಿ ಡಿಲೀಟ್ ಆದವರ ಪರಿಶೀಲನಾ‌ ಸರ್ವೆ ನಡೆಯುತ್ತಿದೆ. ಈ ವೇಳೆ ವಿನಾ ಕಾರಣ ಪಟ್ಟಿಯಿಂದ ಕಾಂಗ್ರೆಸ್ ಮತದಾರರ ಹೆಸರು ಕಿತ್ತು ಹಾಕಿರುವುದು ದೃಢ ಅಗಿದೆಯಂತೆ.

ಅದೇ ರೀತಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿಯೂ ಪರಿಶೀಲಿಸಲಾಗುತ್ತಿದ್ದು, ಮಾಜಿ ಮೇಯರ್ ಗಂಗಾಂಬಿಕೆ ವಾರ್ಡ್ ಸೇರಿದಂತೆ ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಮೂಲಕ ಮತದಾರ ಡಿಲೀಟ್ ಆದ ಮಾಹಿತಿ ಕಲೆಹಾಕಲಾಗುತ್ತಿದೆ.‌ ಹೀಗೆ ಮತದಾರ ಹೆಸರು ಡಿಲೀಟ್ ಆದ ಮಾಹಿತಿ ಪಡೆದು, ಎಲ್ಲಾ ಪರಿಶೀಲನೆ ಬಳಿಕ ಬಿಬಿಎಂಪಿ, ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಕೈ ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Previous Post

Voter Data Theft : ಬಿಜೆಪಿ ಸರ್ಕಾರ ಬಂದ ಮೇಲೆ ದಂಧೆ ರಾಜ್ಯವಾಗಿದೆ. | Pratidhvani |

Next Post

AMIR KHAN | ಅಮೀರ್‌ ಖಾನ್‌ ಮಗಳ ಕೈ ಹಿಡಿದ ವರ ಯಾರು ಗೊತ್ತಾ ..!

Related Posts

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..
Top Story

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

by ಪ್ರತಿಧ್ವನಿ
May 23, 2026
0

ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ...

Read moreDetails
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

May 23, 2026
“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

May 23, 2026
ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

May 23, 2026
Next Post
AMIR KHAN | ಅಮೀರ್‌ ಖಾನ್‌ ಮಗಳ ಕೈ ಹಿಡಿದ ವರ ಯಾರು ಗೊತ್ತಾ ..!

AMIR KHAN | ಅಮೀರ್‌ ಖಾನ್‌ ಮಗಳ ಕೈ ಹಿಡಿದ ವರ ಯಾರು ಗೊತ್ತಾ ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!