ದೇಶದಲ್ಲಿ ಕರೋನ 2ನೇ ಅಲೆಯು ಇಳಿಕೆಯತ್ತ ಸಾಗುತ್ತಿದ್ದಂತೆ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗಿತ್ತು. ಆದರೆ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರೋದಿಲ್ಲ. ಟಾರ್ಗೆಟ್ ಕೂಡ ಅಲ್ಲ ಎಂಬುದಾಗಿ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ನಡೆಸಿದ ಸಂಶೋಧನಾ ವರದಿಯಲ್ಲಿ ತಿಳಿದು ಬಂದಿದೆ.

ಏಮ್ಸ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಮಕ್ಕಳ ಮೇಲೆ 3ನೇ ಅಲೆಯ ಪ್ರಭಾವ ಕುರಿತಂತೆ ಸಂಶೋಧನೆ ನಡೆಸಿದ್ದು, ಮಕ್ಕಳಲ್ಲಿ ಇರುವಂತ ಸೆರೋ ಪಾಸಿಟಿವಿಟಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಇದು ಮಕ್ಕಳಲ್ಲಿ ಹೆಚ್ಚಾಗಿರೋದ್ರಿಂಗಾಗಿ, ಕೊರೋನ 3ನೇ ಅಲೆಯಲ್ಲಿ ಸೋಂಕು ಮಕ್ಕಳಿಗೆ ತಗುಲಿದರು, ಮಕ್ಕಳ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂಬುದಾಗಿ ವರದಿಯಲ್ಲಿ ತಿಳಿಸಿದೆ.
ಮಾರ್ಚ್ 15 ರಿಂದ ಜೂನ್ 10ರವರೆಗೆ ಈ ಸಂಸೋಧನೆಯನ್ನು ನಡೆಸಲಾಗಿದ್ದು, ಈ ಸಂಶೋಧನೆಗಾಗಿ ದೇಶದ 5 ರಾಜ್ಯಗಳಲ್ಲಿನ 4,509 ಮಕ್ಕಳನ್ನು ಸರ್ವೆಗೆ ಒಳಪಡಿಸಲಾಗಿದೆ. ಇದರಲ್ಲಿ 700 ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಾಗಿದ್ದರೇ, 3,809 ಮಕ್ಕಳು 18 ವರ್ಷದವರಾಗಿದ್ದಾರೆ. ಸಂಶೋಧಕರ ಪ್ರಕಾರ ಎಲಿಸಾ ಕಿಟ್ ಬಳಸಿದ್ದು ಈ ಸಂಶೋಧನೆಯನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಮಕ್ಕಳ ಮೇಲೆ ಸೋಂಕು ಹೆಚ್ಚು ಪರಿಣಾಮ ಬೀರೋದಿಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ.
WHO ಮತ್ತು ಏಮ್ಸ್ ನಡೆಸುತ್ತಿರುವ ಸಿರೊ ಸಮೀಕ್ಷೆಯ ಪ್ರಮುಖ ಮಧ್ಯಂತರ ಸಂಶೋಧನೆಗಳು ಇಲ್ಲಿವೆ:
ಎರಡನೇ ಅಲೆಯ ಹೊಡೆತಕ್ಕೆ ಮುಂಚೆಯೇ ದಕ್ಷಿಣ ದೆಹಲಿಯ ಜನನಿಬಿಡ ಪುನರ್ವಸತಿ ಪ್ರದೇಶದಲ್ಲಿ ಸೆರೋಪ್ರೆವೆಲೆನ್ಸ್ (ಜನಸಂಖ್ಯೆಯಲ್ಲಿ ರೋಗಕಾರಕದ ಮಟ್ಟ) ಶೇಕಡಾ 74.7 ರಷ್ಟಿತ್ತು ಎಂದು ಅಧ್ಯಯನವು ಕಂಡುಹಿಡಿದಿದೆ.

ಅದೇ ರೀತಿ, ಫರಿದಾಬಾದ್ (ಎನ್‌ಸಿಆರ್) ಮಕ್ಕಳಲ್ಲಿ ಸೆರೋಪ್ರೆವೆಲೆನ್ಸ್ ಶೇಕಡಾ 59.3 ರಷ್ಟಿತ್ತು.
ಎರಡನೇ ಅಲೆಯ ನಂತರ ದೆಹಲಿ ಮತ್ತು ಫರಿದಾಬಾದ್‌ನಲ್ಲಿ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದರೆ ಹೆಚ್ಚಿನ ಸೆರೊಪ್ರೆವೆಲೆನ್ಸ್ ಇರುವುದು ಕಾಣಬಹುದು ಎಂದು ಅಧ್ಯಯನದ ಸಂಶೋಧನೆಗಳು ಸೂಚಿಸುತ್ತವೆ.
ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸೆರೋಪ್ರೆವೆಲೆನ್ಸ್ ಶೇಕಡಾ 87.9 ಎಂದು ಕಂಡುಬಂದಿದೆ.

“ಒಟ್ಟಾರೆಯಾಗಿ, ಸಮೀಕ್ಷೆಯ ಪ್ರಕಾರ ಗ್ರಾಮೀಣ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು (ಶೇಕಡಾ 62.3) ಹಿಂದಿನ ಸೋಂಕಿನ ಪುರಾವೆಗಳನ್ನು ತೋರಿಸಿದೆ” ಎಂದು ಅಧ್ಯಯನದ ಆರಂಭಿಕ ಸಂಶೋಧನೆಗಳು ಬಹಿರಂಗಪಡಿಸಿದೆ.
ತ್ರಿಪುರದಲ್ಲಿ ಶೇಕಡಾ 51.9 ರಷ್ಟು ಮಕ್ಕಳಲ್ಲಿ ಸಿರೊಪ್ರೆವಲೆನ್ಸ್ ಕಡಿಮೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಏಮ್ಸ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಒಂದು ನಿಟ್ಟುಸಿರು ಬಿಡುವಂತ ವರದಿಯನ್ನು ನೀಡಿದರು ಸಹ ಮುಂಜಾಗ್ರತೆ ಕ್ರಮವನ್ನು ಪ್ರತಿಯೊಬ್ಬರೂ ಅನುಸರುಸಬೇಕು.
ಮೈಸೂರಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆಯನ್ನು ಪ್ರಾಯೋಗಿಕ ಪರೀಕ್ಷೆ:
ದೇಶಾದ್ಯಂತ ಆಯ್ದ ಕೆಲ ಜಿಲ್ಲೆಗಳಲ್ಲಿ 2 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಕೊವಿಡ್ ಲಸಿಕೆಯನ್ನು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಮೈಸೂರಿನ ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿಯೂ ಪರೀಕ್ಷೆ ನಡೆಸಲಾಗುತ್ತಿದೆ.

ಇದರ ಭಾಗವಾಗಿ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್ ವಿ ರಾಜೀವ್ ಪುತ್ರಿ ನವ್ಯಾ ಪ್ರಾಯೋಗಿಕವಾಗಿ ಮಕ್ಕಳ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ.




