ನಮ್ಮ ದೇಶದಲ್ಲಿ ಹೆಚ್ಚು ಜನ ತಮ್ಮ ದಿನವನ್ನು ಪ್ರಾರಂಭಿಸುವುದು ಕಾಫಿ ಅಥವಾ ಟೀಯನ್ನ ಸೇವಿಸುವುದರ ಮುಖಾಂತರ. ಕೆಲವೊಬ್ಬರಿಗೆ ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಆಗಲೇಬೇಕು, ಇಲ್ಲವಾದಲ್ಲಿ ಇನ್ನು ಕೆಲವರಿಗೆ ಮುಖ ತೊಳೆದ ನಂತರ ಕಾಫಿ ಹಾಗೂ ಟೀಯನ್ನು ಕುಡಿಯುವಂತಹ ಅಭ್ಯಾಸವಿರುತ್ತದೆ. ಟೀ ಕಾಫಿ ಮತ್ತು ಟೀ ಗೆ ಸಾಕಷ್ಟು ಜನ ಎಡಿಕ್ಟ್ ಆಗಿರುತ್ತಾರೆ. ಕಾಫಿ ಟೀ ಕುಡಿಯದಿದ್ದರೆ ಆಕ್ಟಿವ್ ಆಗಿ ಇರೋದಿಕ್ಕೆ ಆಗಲ್ಲ ಅನ್ನುವವರ ಮಾತು ಕೂಡ ಕೇಳಿದ್ದೀವಿ.
![](https://pratidhvani.com/wp-content/uploads/2024/06/IMG_7960.jpeg)
ಇನ್ನು ಕೆಲವರಿದ್ದಾರೆ ತಾವು ಕಾಫಿ-ಟೀ ಕುಡಿಯುವುದಲ್ಲದೆ , ಮಕ್ಕಳಿಗೂ ಕೂಡ ಈ ಕಾಫಿ ಟೀ ಅಭ್ಯಾಸವನ್ನು ಮಾಡಿರುತ್ತಾರೆ, ಕೆಲವೊಬ್ಬರು ತಮ್ಮ ಮಕ್ಕಳು ಊಟ ತಿಂಡಿ ಮಾಡ್ತಿದ್ರು, ಒಂದು ಲೋಟ ಕಾಫಿ ಹಾಗೂ ಒಂದು ಪ್ಯಾಕ್ ಬಿಸ್ಕೆಟ್ ಅನ್ನು ಕೊಟ್ಟು ತಮ್ಮ ಮಕ್ಕಳ ಬ್ರೇಕ್ ಫಾಸ್ಟ್ ನ ಮುಗಿಸುವ ಅಂತವರು ಇದ್ದಾರೆ. ಆದರೆ ಮಕ್ಕಳಿಗೆ ಕಾಫಿ ಟೀ ಕುಡಿಸುವುದರಿಂದ ಸಾಕಷ್ಟು ಅನಾರೋಗ್ಯಗಳಿಗೆ ನಾವೇ ಈಡು ಮಾಡಿ ಕೊಟ್ಟಾಗೆ ಆಗುತ್ತದೆ. ಕಾಫಿ ಟೀ ಇಂದ ನಮ್ಮ ಮಕ್ಕಳಿಗೆ ನಾವೇ ಅಪಾಯವನ್ನು ತಂದುಕೊಡುತ್ತೇವೆ.ಹಾಗಾದ್ರೆ ಇದರಿಂದ ಏನೆಲ್ಲ ಆರೋಗ್ಯ ಸಮಸ್ಯೆಗಳು ಎದುರಾಗುತ್ತೆ ಅನ್ನೋದ್ರ ಮಾಹಿತಿ ಇಲ್ಲಿದೆ.
![](https://pratidhvani.com/wp-content/uploads/2024/06/IMG_7962.jpeg)
ಎಲ್ಲರಿಗೂ ಗೊತ್ತಿರುವ ಹಾಗೆ ಕಾಫಿ ಮತ್ತು ಟೀಯಲ್ಲಿ ಸಾಮಾನ್ಯವಾಗಿ ಟ್ಯಾನಿನ್ ಮತ್ತು ಕೆಫಿನ್ ಅಂಶವನ್ನು ಬೆರೆಸಿರುತ್ತಾರೆ. ಇದು ಮಕ್ಕಳಿಗೆ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ ಈ ಕಾಫಿ ಟೀ ಅಭ್ಯಾಸದಿಂದ ಮಕ್ಕಳಿಗೆ ಹೆಚ್ಚಾಗಿ ಹೊಟ್ಟೆ ನೋವು ಹಾಗೂ ಕಿರಿಕಿರಿ, ವಾಕರಿಕೆ ಪಿತ್ತ ಶುರುವಾಗುತ್ತದೆ.
![](https://pratidhvani.com/wp-content/uploads/2024/06/IMG_7961.jpeg)
ಮಾತ್ರವಲ್ಲದೇ ಮಕ್ಕಳು ಹೆಚ್ಚಾಗಿ ಕಾಫಿ ಟೀಯನ್ನು ಸೇವಿಸುವುದರಿಂದ ಅವರ ನೆನಪಿನ ಶಕ್ತಿ ಕಡಿಮೆಯಾಗುತ್ತದೆ ಹಾಗೂ ಕಾನ್ಸಂಟ್ರೇಶನ್ ಕಡಿಮೆಯಾಗುತ್ತದೆ.ಇದಲ್ಲದ ಮುಖ್ಯವಾಗಿ ಹೃದಯ ಬಡಿತ ಹೆಚ್ಚಾಗುತ್ತದೆ. ಹಾಗೂ ದೊಡ್ಡವರಾಗ್ತಾ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಎದುರಾಗುತ್ತವೆ.
![](https://pratidhvani.com/wp-content/uploads/2024/06/IMG_7964.jpeg)
ಕಾಫಿ ಟೀ ಮಾತ್ರವಲ್ಲದೆ ಕೆಫಿನ್ ಅಂಶ ಯಾವ ಪಾನೀಯದಲ್ಲಿ ಹೊಂದಿರುತ್ತದೆ, ಅದು ದೇಹದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ.
![](https://pratidhvani.com/wp-content/uploads/2024/06/IMG_7965.jpeg)
ಇನ್ನೂ ಕಾಫಿ ಟೀ ಸೇವಿಸುವುದರಿಂದ ಮಕ್ಕಳ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ, ಕಬ್ಬಿನಾಂಶದ ಕೊರತೆ ಉಂಟಾಗುತ್ತದೆ. ಇದರ ಜೊತೆಗೆ ಮೂಳೆಗಳು ಕೂಡ ದುರ್ಬಳಗೊಳ್ಳಲುತ್ತದೆ. ಇನ್ನು ನಿದ್ರೆಯ ಕೊರತೆ ಡಯಾಬಿಟೀಸ್ ನಿರ್ಜಲೀಕರಣ ಹಾಗೂ ಹೊಟ್ಟೆಗೆ ಸಂಬಂಧಿಸಿದ ಹಲವಾರು ಕಾಯಿಲೆಗಳನ್ನು ಎದುರಿಸುವಂತೆ ಆಗುತ್ತದೆ.
![](https://pratidhvani.com/wp-content/uploads/2024/06/IMG_7963.jpeg)
ಕಾಫಿ ಟೀ ಬದಲು ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಹಾಲನ್ನ ಕುಡಿಸುವುದು ಉತ್ತಮ. ಇಲ್ಲವಾದಲ್ಲಿ ಡ್ರೈ ಫ್ರೂಟ್ಸ್ ಶೇಕ್ ಕೂಡಿಸುವುದರಿಂದ ಪ್ರೋಟೀನ್ ಅಂಶ ಹೆಚ್ಚು ಸಿಗ್ಗುತ್ತದೆ. ದೇಹದ ತೂಕ ಹೆಚ್ಚಾಗುತ್ತದೆ ಹಾಗೂ ಶಕ್ತಿಶಾಲಿಯಾಗಿ ಮಕ್ಕಳು ಬೆಳೆಯುತ್ತಾರೆ.