ಯಾದಗಿರಿ:ಒಂದು ವಾರದಲ್ಲಿ ಸಿದ್ದರಾಮಯ್ಯ ರಾಜಿನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತೆ. ಸಿದ್ದರಾಮಯ್ಯ ಸರ್ಕಾರ ಇನ್ನೊಂದು ವಾರ ಇರೋದು ಕಷ್ಟ ಎಂದು ಯಾದಗಿರಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಾನು ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಅಂದಿದ್ರು, ಮೊನ್ನೆ ರಾತ್ರಿನೇ ಬಗ್ಗಿದ್ರಲ್ಲಾ ಎಂದಿರುವ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಮೊನ್ನೆ ರಾತ್ರಿನೇ ಜಗ್ಗಿದು ಆಯ್ತು.. ಬಗ್ಗಿದು ಆಯ್ತು..ಇನ್ನೆನೂ ಉಳಿದಿಲ್ಲ ಎಂದಿದ್ದಾರೆ.
ಈ ಸರ್ಕಾರ ರಾಜ್ಯದಲ್ಲಿ ಇರಲಿಕೆ ಸಾಧ್ಯವಿಲ್ಲ, ಯಾಕೆಂದರೆ ಇದು ಪಾಪದ ಸರ್ಕಾರ ಎಂದಿರುವ ಛಲವಾದಿ, ಜನರಿಗೆ ಸುಳ್ಳು ಹೇಳಿ, ವಂಚನೆ ಮಾಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದು. ಸಿದ್ದರಾಮಯ್ಯ ರಾಜಿನಾಮೆ ಕೊಟ್ಟರೇ ಸರ್ಕಾರ ಬಿದ್ದಂಗೆ ಅಲ್ವಾ ಎಂದಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲೇ ಸಿಎಂ ಸ್ಥಾನಕ್ಕಾಗಿ ಹತ್ತು ಜನ ಬಟ್ಟೆ ಹೊಲಿಸಿಕೊಂಡು ಕುಂತವರೆ. ಆದರೆ ಸಿಎಂ ಬದಲಾವಣೆ ಆದರೇ ದಲಿತರೇ ಸಿಎಂ ಆಗಬೇಕು ಎಂದು ಆಗ್ರಹ ಮಾಡಿದ್ದಾರೆ.
ಕಳೆದ 77 ವರ್ಷ ಜೈಲಿನಲ್ಲಿ ಇಟ್ಕೊಂಡಗೆ ಕಬ್ಜಾ ಮಾಡ್ಕೊಂಡು ದಲಿತರ ಮತ ಪಡೆದಿದ್ದೀರಿ. ದಲಿತರ ಮತ ಪಡೆದು ಅವರಿಗೆ ಅನ್ಯಾಯ ಮಾಡ್ತಿದ್ದೀರಿ. ದಲಿತರನ್ನ ಸಿಎಂ ಮಾಡಿ ಇಲ್ಲದೇ ಇದ್ದರೇ ಅವರ ಕೋಪಕ್ಕೆ ನೀವು ಗುರಿ ಆಗ್ತೀರಿ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯರನ್ನ ಕಾಗೆಗೆ ಹೋಲಿಸಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವರು ಕಪ್ಪು ಚುಕ್ಕೆ ತೋರಿಸಿ ಅಂತಿದ್ರಲ್ಲ, ಕಾಗೆಯಲ್ಲಿ ಕಪ್ಪು ಚುಕ್ಕೆ ಎಲ್ಲಿ ಹುಡುಕೋದು..? ನೀವು ಕಾಗಿನೇ ಆಗಿ ಕುಳಿತಿದ್ದೀರಿ, ನಿಮ್ಮಲ್ಲಿ ಕಪ್ಪು ಚುಕ್ಕೆ ಹುಡುಕೋದೆಲ್ಲಿ..!? ಎಂದು ಕುಟುಕಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ರಾಜಿನಾಮೆ ಒಂದೇ ಮಾರ್ಗ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಿಂದ ತುಂಬಿರುವ ಪಕ್ಷ. ಹೀಗಾಗಿ ಕಾಂಗ್ರೆಸ್ ಅಲ್ಪಾಯುಷ್ಯ ಸರ್ಕಾರ ಎಂದಿದ್ದಾರೆ.