
ರಾಜ್ಯಪಾಲರನ್ನು ಭೇಟಿಯಾಗಿ ಮುಡಾ ಹಗರಣ ಮತ್ತು ಇತರ ಹಗರಣಗಳ ಬಗ್ಗೆ ದೂರು ಸಲ್ಲಿಸಿ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳಿದರು. ಮುಡಾದಲ್ಲಿ ನಡೆದಿರೋದು ದೊಡ್ಡ ಹಗರಣ, ನಿವೇಶನಗಳಿಗಾಗಿ 86,000 ಅರ್ಜಿ ಸಲ್ಲಿಸಿದ್ದರೂ ಕೇವಲ ಸಿದ್ದರಾಮಯ್ಯ ಕುಟುಂಬಕ್ಕೆ ಮಾತ್ರ ಹೇಗೆ 14 ಸೈಟುಗಳನ್ನು ನೀಡಲಾಯಿತು? 3.16 ಎಕರೆ ಜಮೀನು 4 ದಲಿತ ಸಹೋದರರಿಗೆ ಸೇರಿದ್ದು, ಕ್ರಯ ಪತ್ರದಲ್ಲಿ ಕೇವಲ ಒಬ್ಬನ ಸಹಿ ಮಾತ್ರ ಇದೆ. ಆದರೆ ಈ ಸಹೋದರರು ಈಗ ರಾಷ್ಟ್ರೀಯ ಪರಿಶಿಷ್ಟ ಜಾತಿ/ ಪಂಗಡ ನಿಗಮಕ್ಕೆ ಪತ್ರ ಬರೆದಿದ್ದಾರೆ ಎಂದು ಅಶೋಕ ಹೇಳಿದರು. ವಿರೋಧ ಪಕ್ಷಗಳಿಗೆ ಸದನದಲ್ಲಿ ಪ್ರಶ್ನೆ ಕೇಳುವ, ಸಂವೈಧಾನಿಕ ಅಧಿಕಾರವಿದೆ. ಆದರೆ ಸ್ಪೀಕರ್ ಅವರನ್ನು ತಮ್ಮ ಕಡೆ ವಾಲಿಸಿಕೊಂಡಿರುವ ಸಿದ್ದರಾಮಯ್ಯ ನಮ್ಮ ಹಕ್ಕು ಮತ್ತು ಅಧಿಕಾರಗಳನ್ನು ಮೊಟಕುಗೊಳಿಸಿದ್ದಾರೆ. ಮುಖ್ಯಮಂತ್ರಿಯ ವಿರುದ್ಧ ಮಾಡಿರುವ ಅರೋಪಗಳಿಗೆ ಇವತ್ತು ನಾವೆಲ್ಲಿ ದಾಖಲೆಗಳನ್ನು ಸದನದ ಮುಂದೆ ಇಡುತ್ತೇವೆಯೋ ಅಂತ ಹೆದರಿ ಹೇಡಿಯಂತೆ ಸದನದಿಂದ ಪಲಾಯನಗೈದಿದ್ದಾರೆ ಎಂದು ಅಶೋಕ ಹೇಳಿದರು. ಎರಡೂ ವಾರ ಕಾಲದ ಅಧಿವೇಶನದಲ್ಲಿ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿರೋದು ಜಗಜ್ಜಾಹಿರಾಗಿದೆ ಮುಖ್ಯಮಂತ್ರಿಗಳೇ ಲೂಟಿ ಮಾಡಿರೋದು ಗೊತ್ತಾಗಿದೆ ವಾಲ್ಮೀಕಿ ಹಗರಣದಲ್ಲಿ ಮಂತ್ರಿಯಾಗಿದ್ದವರು ಜೈಲಿಗೆ ಹೋಗಿದ್ದಾರೆ ಒಬ್ಬ ಶಾಸಕ ಜೈಲಿಗೆ ಹೋಗಲಿಕ್ಕಿದ್ದಾರೆ.

ಮೂಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಸಂವಿಧಾನ ರಕ್ಷಣೆ ಮಾಡ್ತೇನೆ ಎಂದಿದ್ಧ ಸಿದ್ದರಾಮಯ್ಯ ಸಂವಿಧಾನ ಭಕ್ಷಣೆ ಮಾಡಿದ್ದಾರೆ ನಮ್ಮ ಹತ್ತಿರ ದಾಖಲೆಗಳು ಇದ್ದಾವೆ ನಾವು ಚರ್ಚೆಗೆ ಅವಕಾಶ ಕೇಳಿದ್ರೆ ಅವರು ಕೊಟ್ಟಿಲ್ಲ 85ಸಾವಿರ ಜನ ಕಾಯ್ತಾ ಇದ್ರೂ ಸಹ ಸಿದ್ದರಾಮಯ್ಯನವರ ಕುಟುಂಬಕ್ಕೆ ಸೈಟ್ ಹಂಚಿಕೆ ಯಾಗಿದೆ ಎಲ್ಲಾ ಹಗರಣವೂ ದಲಿತರಿಗೆ ಸೇರಿದ್ದು. ಹಗರಣದ ಮೂಲಕ ದಲಿತರಿಗೆ ಮೋಸ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲೇಬೇಕು NDA ಮೂಲಕ ನಾವು ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ ಸಕಾರಾತ್ಮಕವಾಗಿ ರಾಜ್ಯಪಾಲರು ಸ್ಪಂದಿಸಿದ್ದಾರೆ.
ಸದನದಲ್ಲೇ ಹೇಳಿದ್ರೆ ನಾವು ಕೌಂಟರ್ ಮಾಡ್ತದ್ವೀ ವಿಜಯೇಂದ್ರ…
ಸಿಬಿಐ ಇಡಿ ತನಿಖೆ ಮಾಡ್ತಾ ಇದ್ರೂ ಶಾಸಕರು ಸಚಿವರು ಧರಣಿ ಮಾಡಿದ್ರು ಇಡಿ ಅಧಿಕಾರಿಗಳ ಮೇಲೆ FIR ಹಾಕಿಸಿದ್ರು ನ್ಯಾಯಾಲಯದ FIR ಗೆ ಸ್ಟೇ ಕೊಟ್ಟಿದೆ ಮೂಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯ ಹೆದರಿದ್ದಾರೆ ಸಿಎಂ ಎದುರಿಸುತ್ತಾರೆ ಎಂದ್ಕೊಂಡಿದ್ದೆವು ಆದರೆ ಅವರು ಫಲಾಯನ ಮಾಡಿದ್ದಾರೆ ಮೂಡಾ ಹಗರಣದ ಕುರಿತು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಅವರು ಸಿಎಂ ಕರೆದು ವಿವರಣೆ ಕೇಳಿದ್ದಾರೆ ನಾವು ಕಾದು ನೋಡ್ತೇವೆ ನಂತರ ನಮ್ಮ ಹೋರಾಟದ ಬಗ್ಗೆ ತಿಳಿಸ್ತೇವೆ

ಸಿಟಿ ರವಿ ಹೇಳಿಕೆ
ಮೂಡಾ ಹಗರಣದಲ್ಲಿ ಮುಖ್ಯ ಮಂತ್ರಿ ಸ್ವಜನಪಕ್ಷಪಾತ ಮಾಡಿದ್ದಾರೆ ಅವರು ತಪ್ಪು ಮಾಡಿರೋ ಕಾರಣಕ್ಕೆ ಹೆದರಿದ್ದಾರೆ ಇಲ್ಲದೇ ಹೋದರೆ ಅವರು ಉತ್ತರ ಕೊಡ್ತಾ ಇದ್ರು ಪ್ರಜಾಪ್ರಭುತ್ವದಲ್ಲಿ ಸಧನಕ್ಕಿಂತ ದೊಡ್ಡದು ಯಾವುದಿದೆ ಹೇಳಿ ಅಲ್ಲೇ ಅವರು ಉತ್ತರ ಕೊಡಬೇಕಿತ್ತು ಎಂದು ವಿಪಕ್ಷನಾಯಕರು ಕಿಡಿ ಕಾರಿದರು.