ದೇಶದಲ್ಲಿ ದಿನದಿಂದ ದಿನಕ್ಕೆ ಕಲ್ಲಿದ್ದಲ ಕೊರತೆ ಜಾಸ್ತಿಯಾಗುತ್ತಿದ್ದು ಈ ಕುರಿತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮೋದಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಚಿದಂಬರಂ, ಸರ್ಕಾರ ಪ್ಯಾಸೆಂಜರ್ ರೈಲುಗಳ ಓಡಾಟವನ್ನು ನಿಲ್ಲಿಸಲು ಸರಿಯಾದ ಕಾರಣ ಕಂಡುಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮುಂದುವರೆದು, ಸಮೃದ್ಧ ಕಲ್ಲಿದ್ದಲು, ದೊಡ್ಡ ರೈಲ್ವೆ ಜಾಲ, ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗದ ಸಾಮರ್ಥ್ಯ ಆದರು ದೇಶದಲ್ಲಿ ತೀವ್ರ ವಿದ್ಯುತ್ ಕೊರತೆ ಇದಕ್ಕೆ ಮೋದಿ ಸರ್ಕಾರವನ್ನು ದೂಷಿಸಲಾಗುವುದಿಲ್ಲ ಇದಕ್ಕೆಲ್ಲ 60 ವರ್ಷಗಳ ಕಾಂಗ್ರೆಸ್ ಆಡಳಿತವೇ ಕಾರಣ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ಕಲ್ಲಿದ್ದಲು ರೈಲ್ವೆ ಹಾಗು ವಿದ್ಯುತ್ ಸಚಿವಾಲಯಗಳಲ್ಲಿ ಯಾವುದೇ ಅಸಮರ್ಥತೆಯಿಲ್ಲ ಆದರೆ,ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಮಂತ್ರಿಗಳ ಮೇಲೆ ಆರೋಪವಿದೆ ಎಂದು ಕಿಡಿಕಾರಿದ್ದಾರೆ.
ಸರ್ಕಾರ ಪೂರ್ಣಪ್ರಮಾಣದ ಪರಿಹಾರವನ್ನು ಕಂಡುಕೊಂಡಿದೆ ಪ್ಯಾಸೆಂಜರ್ ರೈಲುಗಳನ್ನು ರದ್ದುಪಡಿಸಿ ಕಲ್ಲಿದ್ದಲು ಗಣಿಗಳನ್ನು ಓಡಿಸಲು ಮುಂದಾಗಿದೆ ಎಂದು ಸರಣಿ ಟ್ವೀಟ್ಗಳನ್ನು ಮಾಡಿ ಕಿಡಿಕಾರಿದ್ದಾರೆ.