
ಸ್ಯಾಂಡಲ್ವುಡ್ ನಲ್ಲಿ ಕಾಸ್ಟಿಂಗ್ ಕೌಚ್ ನಡೀತಿದೆ ಅನ್ನೋ ವಿಚಾರ ಸಾಕಷ್ಟು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಅನೇಕರು ಇದರ ಪರ ಧ್ವನಿ ಎತ್ತುತ್ತಲೇ ಇದ್ದಾರೆ. ಈಗ ಇದೇ ವಿಚಾರವಾಗಿ ನಟ ಚೇತನ್ ಅಹಿಂಸಾ ಮತ್ತೆ ಧ್ವನಿ ಎತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಚೇತನ್ ಪೋಸ್ಟ್ ನಲ್ಲಿ ಏನಿದೆ..?
ಕೆ. ಹೇಮಾ ಸಮಿತಿಯ 235 ಪುಟಗಳ ವರದಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಅತಿರೇಕದ ಲೈಂಗಿಕ ಶೋಷಣೆ ಮತ್ತು ‘ಕಾಸ್ಟಿಂಗ್ ಕೌಚ್’ ಒಂದು ಸ್ಥೂಲ ವಾಸ್ತವವಾಗಿದೆ ಎಂದು ಬಹಿರಂಗಪಡಿಸುತ್ತದೆ.ನಮ್ಮ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಮತ್ತು ಮೀಟೂ ಆಕ್ಟಿವಿಸಂ (2018) ಕನ್ನಡ ಚಲನಚಿತ್ರೋದ್ಯಮವು ಇದಕ್ಕಿಂತ ಭಿನ್ನವಾಗಿಲ್ಲ ಎಂಬುದನ್ನು ತೋರಿಸುತ್ತದೆ.ಕನ್ನಡ ಚಲನಚಿತ್ರ ರಂಗದಲ್ಲಿರೋ ಲೈಂಗಿಕ ದೌರ್ಜನ್ಯವನ್ನು ನಿರ್ಮೂಲನೆ ಮಾಡಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಲಿ ಅಂದಿದ್ದಾರೆ.

ಈ ಮೂಲಕ ಸರ್ಕಾರ ನೇರವಾಗಿ ಚಿತ್ರೋದ್ಯಮದಲ್ಲಿ ನಡೀತಿರೋ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನ ನಿಯಂತ್ರಣ ಮಾಡಲಿ ಅಂತ ಒತ್ತಾಯಿಸಿದ್ದಾರೆ.