ನಟ ಚೇತನ್ 4 ದಿನಗಳ ಹಿಂದೆ ಮಾಡಿದ ಟ್ವೀಟ್ಗಳ ಕುರಿತಾಗಿ ಅಂತರ್ಜಾಲದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಮೊದಲ ಟ್ವೀಟ್ನಲ್ಲಿ ಅವರು ಸಿದ್ದರಾಮಯ್ಯರ ಬಗ್ಗೆ ಗೌರವ ಇಟ್ಟುಕೊಂಡೇ, ಅವರು ಕೂಡ ಜಾತಿವಾದಿಯಾಗಿದ್ಗದು ಬ್ರಾಹ್ಮಣ್ಯ ಬೆಳೆಸಿದರು ಎಂದು ಟೀಕಿಸಿದ್ದರು.
ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದ ದಿಮೇಶ್ ಅಮಿನಮಟ್ಟು ಜಾತ್ಯಾತೀತತೆ ಮತ್ತ ಜಾತಿವಾದಗಳನ್ನು ಅರ್ಥೈಸಿಕೊಳ್ಳುವ ಇಂದಿನ ಅಗತ್ಯತೆ ಬಗ್ಗೆ ವಿವರ ನೀಡಿದ್ದರು. ‘ಪ್ರತಿಧ್ವನಿ’ ಜೊತೆ ಮಾತನಾಡಿದ ಅವರು, ‘ಚೇತನ್ ಸಿದ್ದರಾಮಯ್ಯ ಆಡಳಿತ ಕುರಿತಂತೆ ಇನ್ನಷ್ಟು ತಿಳಿದುಕೊಳ್ಳುವ ಅಗತ್ಯವಿದೆ’. ಎಂದರು.
ಆರಂಭದಲ್ಲಿ ಸಿದ್ದರಾಮಯ್ಯ ತಮ್ಮ ಜಾತಿಯ ಒಬ್ಬ ಶಾಸಕನಿಗೂ ಸಚಿವ ಹುದ್ದ ನೀಡಿರಲಿಲ್ಲ. ವಿಸ್ತರಣೆಯಲ್ಲಿ ಬಾಗಲಕೋಟೆ ಶಾಸಕ ಕುರುಬ ಸಮುದಾಯದ ಹುಲ್ಲಪ್ಪ ಮೇಟಿಯವರಿಗೆ ಅವರ ಅನುಭವದ ಆಧಾರದಲ್ಲಿ ಸಚಿವ ಹುದ್ದೆ ನೀಡಿದರು. ಸಿದ್ದರಾಮಯ್ಯ ಹತ್ತಿರದ ಪ್ರಮುಖ ಅಧಿಕಾರಿಗಳು ಎಸ್ಸಿ, ಎಸ್ಟಿ ಜನಾಂಗದವರೇ ಹೆಚ್ಚಾಗಿದ್ದರು. ತನ್ನ ಜಾತಿಯನ್ನು ತೆಗಳುವ ಮೂಲಕವೇ ಜಾತ್ಯಾತೀತರಾಗಲು ಸಾಧ್ಯವಿಲ್ಲ. ಹಾ್ಯೇ ತನ್ನ ಜಾತಿಯನ್ನು ಓಲೈಕೆ ಮಾಡುವುದರಿಂದಲೂ ಸೆಕ್ಯುಲರ್ ಆಗಲು ಸಾಧ್ಯವಿಲ್ಲ. ಜಾತಿ ಎಂಬುದು ನಮ್ಮ ಸಮಾಜದಲ್ಲಿನ ವಾಸ್ತವ. ಅದನ್ನು ಒಪ್ಪಿಕೊಂಡೇ ಮುಂದುವರೆಯಬೇಕು, ಎಲ್ಲ ದಮನಿತರಿಗೂ ನ್ಯಾಯ ಒದಗಿಸಬೇಕು’’ ಎಂದರು.
‘ನಾನು ಸ್ನೇಹಿತ ಚೇತನ್ ಅವರ ಮೊದಲ ಟ್ವೀಟ್ಗಷ್ಟೇ ಪ್ರತಿಕ್ರಿಯೆ ನೀಡಿದ್ದೇನೆ. ಕಾಂಗ್ರೆಸ್ ಮತ್ತು ಬ್ರಾಹ್ಮಣ್ಯ ಕುರಿತ ಟ್ವೀಟ್ಗಳಿಗೆ ಪ್ರತಿಕ್ರಿಯೆ ಬರೆದಿಲ್ಲ’ ಎನ್ನುವ ಮಟ್ಟು, ಕಾಂಗ್ರೆಸ್ ತೊಡೆದು ಹಾಕಿದ ನಂತರ ಬಿಜೆಪಿ ನಿರ್ಮೂಲನೆ ಸಾಧ್ಯ ಎನ್ನುವ ಚೇತನ್ ಮಾತನ್ನು ಒಪ್ಪುವುದಿಲ್ಲ.
ಹಿಂದೆ ಸ್ವರಾಜ್ಯ ಪಕ್ಷದ ಮುಖ್ಯಸ್ಥ ಮತ್ತು ರಾಜಕೀಯ ಚಿಂತಕ ಯೋಗೇಂದ್ರ ವಯಾದವ್ ಕಾಂಗ್ರೆಸ್ ಮಸ್ಟ್ ಡೈ ಎಂಬ ಲೇಖನ ಬರೆದಾಗಲೂ ಕೆಲವರು ವಿರೋಧಿಸಿದ್ದರು ಎಂಬುದನ್ನು ಗಮನಿಸಿ.
ಚಿಣತಕರು ಮತ್ತು ಅಂಕಣಕಾರರಾದ ಶಿವಸುಂದರ್ ಮತ್ತು ಎ. ನಾರಾಯಣ್ ಅವರು, ಕಾಂಗ್ರಸಲ್ಲಿರುವ ಬ್ರಾಹ್ಮಣ್ಯವನ್ನು ಒಪ್ಪಿಕೊಳ್ಳುತ್ತಲೇ, ಸೆಕ್ಯುಲರ್ ಸಿದ್ದಾಂತವನ್ನು ಆಚರಣೆಗೆ ತರುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದರು.
ಈ ಮಧ್ಯೆ ಕ್ಲಬ್ಹೌಸ್ನಲ್ಲಿ ನಡೆದ ಚರ್ಚೆಯಲ್ಲಿ ಕೆಲವು ಪ್ರಗತಿಪರರು ಸಿದ್ದರಾಮಯ್ಯ ಪರ ಬಹಿಸಿ ಚೇತನ್ ವಿರುದ್ಧ ದಾಳಿಯನ್ನೂ ಮಾಡಿದರು. ಈ ಚರ್ಚೆಯಲ್ಲಿದ್ದ ಕೆ.ಎಸ್ ನಂದಕುಮಾರ್ ಬರೆಯುತ್ತಾರೆ:
ಸಿದ್ದರಾಮಯ್ಯ ಬ್ರಾಹ್ಮಣ್ಯವನ್ನು ಬೇರೂರಿಸುವ ಜಾತಿ ನಾಯಕ ಎಂದ ನಟ ಚೇತನ್!
‘ಪ್ರಗತಿಪರತೆ ಎಂದರೆ ಸಿದ್ದರಾಮಯ್ಯ ರನ್ನು ಬೆಂಬಲಿಸೋದು ಅನ್ನೋ ರೀತಿ ಮಾತಾಡುತ್ತಿರುವುದು ಬಹಳ ಅಪಾಯಕಾರಿಯಾದುದು. ಅದು ಹಾಗಲ್ಲ ಹೀಗೆ.. ಸದ್ಯದ ಪರಿಸ್ಥಿತಿಯಲ್ಲಿ.. ..ಇರೋದರಲ್ಲಿ ….ಎಂದೆಲ್ಲಾ ಉರುಳಾಡೋದರಿಂದ ವಾಸ್ತವ ಬದಲಾಗದು.. ಸಮರ್ಥನೆಗಳಿಗೆ ಬಲ ಸಿಗದು…..
ಸಿದ್ದರಾಮಯ್ಯರನ್ನು ಪ್ರಶ್ನಿಸಿದರೆ, ಟೀಕಿಸಿದರೆ ಪ್ರಗತಿ ವಿರೋಧಿ, ಬಿಜೆಪಿ ಪರ ಅನ್ನೋ ರೀತಿ ಮಾಡುತ್ತಿರುವ ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡಿರುವ ಹಲವರು ತಾವಾಗೇ ಬೆತ್ತಲಾಗುತ್ತಿದ್ದಾರೆ ಎನಿಸುತ್ತಿದೆ……’
ಬ್ರಾಹ್ಮಣ್ಯ ಮತ್ತು ಬುದ್ಧ ಧರ್ಮದ ನಡುವಿನ ಸಂಘರ್ಷಕ್ಕೆ ಸುಧೀರ್ಘ ಇತಿಹಾಸವಿದೆ – ಚೇತನ್ ಅಹಿಂಸಾ
ಚೇತನ್ ಅಂತಹ ಯುವಕರು ಮಾತನಾಡಿದಾಗ ಅದು ಯುವ ಸಮೂಹದಲ್ಲಿ ಚರ್ಚೆಗೆ ಕಾರಣವಾಗಬಲ್ಲದು ಎಂಬುದನ್ನು ಮರೆಯದಿರೋಣ. ಈ ಕುರಿತು ಮಾತನಾಡಿದ ಕಮ್ಯುನಿಸ್ಟ್ ಹಿನ್ನೆಲೆಯ ಭೀಮನಗೌಡ ಕಾಶಿರೆಡ್ಡಿ, ‘ದೇಶದಲ್ಲಿ ಬ್ರಾಹ್ಣಣೇತರ ಪ್ರಧಾನಿಗಳನ್ನು ಕೆಳಗಿಳಿಸಲು ಕಾಂಗ್ರೆಸ್ನ ಬ್ರಾಹ್ಮಣ್ಯ ಕೆಲಸ ಮಾಡಿತು. ಮೊರಾರ್ಜಿ ದೇಸಾಯಿ, ಚರಣಸಿಂಗ್, ವಿಪಿ. ಸಿಂಗ್, ಚಂದ್ರಶೇಖರ್, ದೇವೆಗೌಡ, ಗುಜ್ರಾಲ್ ಇವರನ್ನೆಲ್ಲ ಪ್ರಧಾನಿ ಹುದ್ಎಯಿಂದ ಇಳಿಸಿದ್ದು ಕಾಂಗ್ರೆಸ್ ಅಲ್ಲವೇ? ಆದರೆ ಅಲ್ಪ ಬಹುಮತದ ವಾಜಪೇಯಿ ಸರ್ಕಾರವನ್ನು ಉರುಳಿಸುವ ಯಾವ ಯತ್ನವನ್ನೂ ಕಾಂಗ್ರೆಸ್ ಮಾಡಲೇ ಇಲ್ಲಅಲ್ಲವೇ?ಬಾಬರಿ ಮಸೀದಿ ಉರುಳಲು ಕೂಡ ಕಾಂಗ್ರೆಸ್ ಕಾರಣ. ಹೀಗಾಗಿ ಕಾಂಗ್ರೆಸ್ನಲ್ಲಿರುವ ಬ್ರಾಹ್ಮಣ್ಯದ ಬಗ್ಗೆ ಚೇತನ್ ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದಾರೆ’ ಎಂದರು.
ಕಾಂಗ್ರೆಸ್ ಮತ್ತು RSS ಒಂದಕ್ಕೊಂದು ಬೆಸೆದುಕೊಂಡಿದೆ, ನಾವು ಎರಡನ್ನೂ ಸೋಲಿಸಬೇಕು -ನಟ ಚೇತನ್
ಈ ಕುರಿತು ನಮ್ಮ ಜೊತೆ ಮಾತನಾಡಿದ ಚೇತನ್, ನಾನು ನನ್ನ ವಿಚಾರಗಳಿಗೆ ಬದ್ಧವಾಗಿದ್ದೇನೆ’ ಎಂದು ಸಮರ್ಥಿಸಿಕೊಂಡರು. ಈ ಕುರಿತಾಗಿ ವ್ಯಾಪಕ ಚರ್ಚೆ ನಡೆದರೆ ಯುವ ಜನಾಂಗಕ್ಕೆ ಒಂದಿಷ್ಟು ಅರಿವು ಮೂಡಿಸಬಹುದು.