ಪೇಜಾವರ ಶ್ರೀಗಳ ಕುರಿತಯ ಹೇಳಿಕೆಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಕ್ಷೆಮೆಯಾಚಿಸಿದರು ಪೋಲಿಸ್ ದೂರುಗಳನ್ನು ನೀಡುವ ಮೂಲಜ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟ ಚೇತನ್ ಇಂದು ಶನಿವಾರ ಬೆಳಿಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಟ ಚೇತನ್, ಹಂಸಲೇಖ ಅವರು ಕ್ಷೆಮೆಯಾಚಿಸಿ ಒಂದು ವಾರ ಕಳೆದರು ಈ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಗುಂಪುಗಳು ಅವರ ಮೇಲೆ ಪೋಲಿಸ್ ದೂರು ನೀಡುವ ಮೂಲಕ ಕಿರುಕುಳ ನೀಡುತ್ತಲೇ ಇವೆ ಎಂದು ದೂರಿದ್ದಾರೆ.
ಸಮಾನತೆ ಬಯಸುವ ಅದಕ್ಕಾಗಿ ಹೋರಾಟ ಮಾಡುವ ನಮ್ಮನ್ನು ಈ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಸಂಸ್ಥೆ ತಮ್ಮ ಅಧೀನದಲ್ಲಿಯೇ ಮುಂದುವರೆಸಲು ಬಯಸುತ್ತದೆ. ನಾವು ಹಂಸಲೇಖ ಅವರ ಜೊತೆ ನಿಲ್ಲಬೇಕು ಎಂದು ಹೇಳಿದ್ದಾರೆ.
ಕಳೆದ ವಾರ ಮೈಸೂರಿನ ಕಾರ್ಯಕ್ರಮ ಒಂದರಲ್ಲಿ ದಲಿತರ ಮತ್ತು ಬಲಿತರ ನಡುವಿನ ವ್ಯತ್ಯಾಸ ಮತ್ತವ ಊಟದ ಪದ್ಧತಿ ಬಗ್ಗೆ ಮಾತಾಡಿರುವುದೇ ತಪ್ಪು ಎಂದು ಕೆಲ ವ್ಯಕ್ತಿಗಳು ಸಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದರು. ಕ್ಷಮೆ ಕೇಳಿದ ನಂತರವು ಅವರ ವಿರುದ್ಧ ದೂರು ದಾಖಲಾಗುತ್ತಿದ್ದೆ.