2019 ರಲ್ಲಿ ಮಿಸ್ ಯೂಎಸ್ ಎ ಆಗಿ ಆಯ್ಕೆಯಾಗಿದ್ದ ಚೆಸ್ಲಿ ಕ್ರಿಸ್ಟ್ ನಿನ್ನೆ ನ್ಯೂಯಾರ್ಕ್ ನ 60 ಅಂತಸ್ತಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ 2021 ರ ಮಿಸ್ ಯೂನಿವರ್ಸ್ ಭಾರತದ ಹರ್ನಾಜ್ ಕೌರ್ ಸಂಧು ಕಂಬನಿ ಮಿಡಿದಿದ್ದಾರೆ.
ಮಾಜಿ ಮಿಸ್ ಯುಎಸ್ಎ ಬಿರುದು ಪಡೆದಿದ್ದ ಚೆಸ್ಲಿ ಕ್ರಿಸ್ಟ್ ನ್ಯೂಯಾರ್ಕ್ ನ ಮ್ಯಾನ್ಹಟ್ಟನ್ನ 60 ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿನ 9ನೇ ಫ್ಲೋರ್ನಲ್ಲಿ ವಾಸವಾಗಿದ್ದರು. ಭಾನುವಾರ ಮುಂಜಾನೆ ಅಪಾರ್ಟ್ಮೆಂಟ್ನ ಎದುರಿನ ರಸ್ತೆಯಲ್ಲಿ ಅವರ ಶವ ಪತ್ತೆಯಾಗಿದ್ದಾರೆ. ಭಾನುವಾರ ಮುಂಜಾನೆ 7ಗಂಟೆ ಹೊತ್ತಿಗೆ ಚೆಸ್ಲಿ ಕ್ರಿಸ್ಟ್ 29ನೇ ಫ್ಲೋರ್ನಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.
![](https://pratidhvani.com/wp-content/uploads/2022/01/c6654d6a-0aa9-443b-817f-b4a792a65744_1920x1080-1024x576.jpg)
ಸಾವಿಗೂ ಕೆಲವೇ ಗಂಟೆ ಮೊದಲು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ ಕ್ರಿಸ್ಟ್, ಈ ದಿನ ನಿಮಗೆ ಶಾಂತಿ ಮತ್ತು ವಿಶ್ರಾಂತಿಯನ್ನು ತರಲಿ ಎಂದು ಪೋಸ್ಟ್ ಹಾಕಿದ್ದರು. ಕ್ರಿಸ್ಟ್ ಸಾವಿಗೆ ನಿಜವಾದ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.