ಉಡುಪಿಯ ಪಡುಬಿದ್ರೆ ಬಳಿ 10 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ಪರಿಸರ ಹಾನಿ ಮಾಡಿದ್ದಕ್ಕಾಗಿ ಗೌತಮ್ ಆದಾನಿ ಗ್ರೂಪ್ ಗೆ ಚೆನ್ನೈನ ಹಸಿರುಪೀಠ 52 ಕೋಟಿ ರೂ. ದಂಡ ವಿಧಿಸಿದೆ.
ಗೌತಮ್ ಆದಾನಿ ಗ್ರೂಪ್ ಒಡೆತನದಲ್ಲಿ ಕಾರ್ಯಚರಿಸುತ್ತಿರುವ ಉಡುಪಿಯ ಪಡುಬಿದ್ರೆ ಸಮೀಪ ಎಲ್ಲೂರು ಗ್ರಾಮದಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರದಿಂದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಪರಿಸರಕ್ಕೆ ಧಕ್ಕೆ ಬಂದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.
2005ರಿಂದ ಕಾರ್ಯಚರಿಸುತ್ತಿರುವ ಉಷ್ಣವಿದ್ಯುತ್ ಸ್ಥಾವರದಿಂದ ಪರಿಸರ ಹಾನಿ ಕುರಿತು ಹೋರಾಟ ನಡೆಸಿಕೊಂಡು ಬರುತ್ತಿರುವ ಬಾಲಕೃಷ್ಣ ಶೆಟ್ಟಿ ನೇತೃತ್ವದ ನಂದಕೂರು ಜನಜಾಗೃತಿ ಸಮಿತಿ ಅರ್ಜಿಯ ವಿಚಾರಣೆ ನಡೆಸಿದ ಚೆನ್ನೈನ ಹಸಿರುಪೀಠ ಮಂಗಳವಾರ ಈ ತೀರ್ಪು ನೀಡಿದೆ.

ಪರಿಸರ ಹಾನಿಗಾಗಿ ಪರಿಹಾರ ನೀಡುವಂತೆ ಹಸಿರುಪೀಠ ಆದೇಶಿದ್ದು, ಹಸಿರುಪೀಠ ನೇಮಿಸಿದ್ದ ಮತ್ತೊಂದು ಸಮಿತಿ ಸೇರಿದಂತೆ ಒಟ್ಟಾರೆ 79 ಕೋಟಿ ರೂ. ಪರಿಹಾರ ನೀಡಬೇಕಿದೆ.