ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ವಿರುದ್ಧ ಒತ್ತುವರಿ ಆರೋಪ ಹೊರಿಸಿ ಸರ್ವೇ (Survey) ಮಾಡ್ತಾ ಇದ್ದಾರೆ ಎಂಬ ಹೆಚ್ಡಿಕೆ ಆರೋಪದ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಚಲುವರಾಯಸ್ವಾಮಿ (Cheluvaraya swamy) ರಿಯಾಕ್ಟ್ ಮಾಡಿದ್ದಾರೆ.

ಅಧಿಕಾರ ದುರ್ಬಳಕೆಯಿಂದ ಕುಮಾರಸ್ವಾಮಿ (HD Kumaraswamy) ಅವರು ಒತ್ತುವರಿ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಅವರ ವಿರುದ್ಧ ಯಾಕೆ ಅಧಿಕಾರ ದುರುಪಯೋಗ ಮಾಡಲು ಹೋಗುತ್ತೆ..? ಕೋರ್ಟ್ ಆದೇಶದಂತೆ ಸರ್ವೇ ಮಾಡ್ತಾರೆ. ಇದ್ರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಹೇಳಿದೆ.
ಈ ಬಗ್ಗೆ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೋಗಿದ್ದು, ಸರ್ಕಾರದ ಇಲಾಖೆಗೆ ಇಷ್ಟು ದಿನಗಳಲ್ಲಿ ಸರ್ವೇ ಮಾಡಬೇಕು ಅಂತ ಹೇಳಿ ಕೋರ್ಟ್ ಆದೇಶ ನೀಡಿದೆ. ಹಾಗಿದ್ರೆ ಕೋರ್ಟ್ ಆದೇಶ ಮಾಡಬಾರದ್ದು ಅಂತನಾ ಇವರ ಲೆಕ್ಕ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.