ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star darshan) ತಮ್ಮ ಅಭಿಮಾನಿಗಳಿಗೆ ಬಿಗ್ ನ್ಯೂಸ್ ಕೊಟ್ಟಿದ್ದಾರೆ. ಕಾಟೇರ(Katera )ದೊಡ್ಡ ಯಶಸ್ಸಿನ ನಂತರ ದರ್ಶನ್ ನಟನೆಯ ಮುಂದಿನ ಸಿನಿಮಾ ಡೆವಿಲ್ (Devil) ಯಾವ ಹಂತದಲ್ಲಿದೆ ,ಯಾವಾಗ ಬಿಡುಗಡೆಯಾಗಬಹುದು ಎಂಬ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ . ನಲ್ಮೆಯ ಸೆಲೆಬ್ರೆಟಿಗಳಿಗೆ ಮತ್ತು ಕನ್ನಡ ಸಿನಿಪ್ರಿಯರಿಗೆ ನಮಸ್ಕಾರ .ನನ್ನ ನಟನೆಯ ಡೆವಿಲ್ ಸಿನಿಮಾ 2024ರ ಕ್ರಿಸ್ಮಸ್ ಗೆ (Christmas) ತೆರೆಗೆ ಬರಲಿದೆ ಕನ್ನಡ ಸಿನಿಮಾಗಳ ಮೇಲಿನ ನಿಮ್ಮ ಪ್ರೀತಿ ಹೀಗೆ ಮುಂದುವರೆಯಲಿ ಎಂದು ಪೋಸ್ಟರ್ ಒಂದನ್ನ ಹಂಚಿಕೊಂದಿದ್ದಾರೆ.
ಆ ಮೂಲಕ ವರ್ಷಾಂತ್ಯಕ್ಕೆ ಕನ್ನಡ ಸಿನಿ ಅಭಿಮಾನಿಗಳಿಗೆ ಮತ್ತೊಂದು ಧಮಾಕೇದಾರ್ ಸಿದ್ಧವಾಗಿತ್ತು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ ಡೆವಿಲ್ ಸಿನಿಮಾದಲ್ಲಿ ನಟ ದರ್ಶನ್ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು ಮಿಲನ ಪ್ರಕಾಶ್ (Milana prakash) ನಿರ್ದೇಶನವಿದ್ದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.




