ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆ ಎದುರಾಗುವ ಹಿನ್ನೆಲೆ.
ಬಿಜೆಪಿ-ಜೆಡಿಎಸ್ ಸಮನ್ವಯತೆ ಬಗ್ಗೆ ಸಮಿತಿ ರಚಿಸಿ ಚರ್ಚೆ.
ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಬಿಟ್ಟುಕೊಡಬಾರದು ಎಂಬ ರಾಜಕೀಯ ಲೆಕ್ಕಾಚಾರ ಹಿನ್ನೆಲೆ.
ಸಮನ್ವಯ ಸಮಿತಿ ರಚನೆ ಮಾಡಿಕೊಂಡು ಉಪ-ಚುನಾವಣೆ ಎದುರಿಸಲು ಕಸರತ್ತು.

ಅಷ್ಟಕ್ಕೂ ಸಮನ್ವಯ ಸಮಿತಿ ಹೇಗಿರಲಿದೆ?
ಇದರಲ್ಲಿ ಚರ್ಚೆಯಾಗುವ ಅಂಶಗಳು ಏನು?
ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.

- ಸದ್ಯದಲ್ಲೇ ಎದುರಾಗಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆ.
- ಈ ಉಪ-ಚುನಾವಣೆಗಳ ಪೈಕಿ ಚನ್ನಪಟ್ಟಣ ಮೂರು ಪಕ್ಷಗಳಿಗೂ ಪ್ರತಿಷ್ಠೆ.
- ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದು, ಸದ್ಯ ರಾಜೀನಾಮೆ ನೀಡಿರುವ ಕ್ಷೇತ್ರ.
- ಈಗ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆ ಎದುರಿಸಲು ಸನ್ನದ್ಧು.
- ಇತ್ತ ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸೋಲುಂಡ ಬಳಿಕ ಖುದ್ದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಆಖಾಡಕ್ಕೆ ಎಂಟ್ರಿ.
- ಈಗಾಗಲೇ ಮೂರು ಬಾರಿ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸಭೆಗಳು, ಟೆಂಪಲ್ ರನ್ ನಡೆಸಿರುವ ಡಿಕೆಶಿ.
- ಚನ್ನಪಟ್ಟಣ ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಡಿಕೆಶಿ.
- ಈ ಮೂಲಕ ಒಕ್ಕಲಿಗ ಸಮುದಾಯದ ನಾಯಕರಾಗಿ ಹೊರಹೊಮ್ಮಲು ವೇದಿಕೆ ಸೃಷ್ಟಿಸಿಕೊಳ್ಳುತ್ತಿರುವ ಡಿಕೆಶಿ.
- ಡಿಕೆಶಿ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ-ಜೆಡಿಎಸ್ ರಣತಂತ್ರ.
- ಕ್ಷೇತ್ರದಲ್ಲಿ ಎರಡು ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಪ- ಚುನಾವಣೆ ಎದುರಿಸಲು ಕಸರತ್ತು.
ಹೀಗಾಗಿ ಸಮನ್ವಯ ಸಮಿತಿ ರಚನೆ ಮಾಡಿಕೊಳ್ಳಲು ಮುಂದಾದ ಬಿಜೆಪಿ-ಜೆಡಿಎಸ್ ನಾಯಕರು.
