
ಚನ್ನಪಟ್ಟಣ ಬೈ ಎಲೆಕ್ಷನ್ (Channapatna Bi election) ಅಖಾಡ ದಿನೇ ದಿನೇ ರಂಗೇರಿದ್ದು, ಸಿಪಿ ಯೋಗೇಶ್ವರ್ (Cp Yogeshwar) ಮತ್ತು ನಿಖಿಲ್ ಕುಮಾರಸ್ವಾಮಿ (Nikhil kumaraswamy) ನಡುವಿನ ಜಿದ್ದಾ ಜಿದ್ದಿಗೆ ಕ್ಷೇತ್ರ ಸಾಕ್ಷಿಯಾಗಿದ್ದು, ಈಗಾಗಲೇ ಬಾಜಿ ಕಟ್ಟುವ ಭರಾಟೆ ಕೂಡ ಜೋರಾಗಿದೆ.
ಈ ಮಧ್ಯೆ ಕ್ಷೇತ್ರದ ಮತದಾರರ ಅಭಿಪ್ರಾಯ ಕೂಡ ಭಿನ್ನವಾಗಿದ್ದು, ಚನ್ನಪಟ್ಟಣ ಕ್ಷೇತ್ರದ ಹಿರಿಯ ಮತದಾರರೊಬ್ಬರು ಸ್ವತಃ ತಾವೇ ಸಮೀಕ್ಷೆ ನಡೆಸಿದ್ದು, ವರದಿ ಏನು ಹೇಳುತ್ತೆ ಎಣಬುದನ್ನು ಸೂಕ್ತ ಅಂಕಿ ಅಂಶಗಳ ಮೂಳಕ ಪ್ರಸ್ತುತ ಪಡಿಸಿದ್ದು, ವ್ಯಾಪಕ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ಈ ಹಿರಿಯ ನಾಗರಿಕ, ಜಾತಿ ಆಧರಾದ ಮೇಲೆ ವೋಟ್‌ಗಳನ್ನ ಡಿವೈಡ್ ಮಾಡಿ ಯಾರಿಗೆ ಎಷ್ಟು ಮತ ಬರಬಹುದು ಎಂಬ ಲೆಕ್ಕಾಚಾರ ಹಾಕಿ, ಕೊನೆಗೆ ಗೆಲುವು ಯಾರಿಗೆ ಎಂಬುದನ್ನ ಕಡ್ಡಿ ಮುರಿದಂತೆ ಹೇಳಿದ್ದಾರೆ. ಅವರ ವಿಶ್ಲೇಷಣೆ ಹೀಗಿದೆ ನೋಡಿ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ 1 ಲಕ್ಷದ 5 ಸಾವಿರ ವೋಟ್ ಗಳಿದ್ದು ಈ ಪೈಕಿ 90 ಸಾವಿರ ವೋಟಿಂಗ್ ನಡೆದರೆ, ಆ ಪೈಕಿ ಕಾಂಗ್ರೆಸ್ ಗೆ 45 ಸಾವಿರ ಮತ್ತು ಜೆಡಿಎಸ್ ಪಕ್ಷಕ್ಕೆ 45 ಸಾವಿರ ವೋಟ್ ಬರಬಹುದು.

ಇನ್ನು ಈ ಕ್ಷೇತ್ರದಲ್ಲಿ ಎಸ್ ಸಿ ಸಮುದಾಯದ 40 ಸಾವಿರ ವೋಟ್‌ಗಳೀದ್ದು, ಈ ಪೈಕಿ 32 ಸಾವಿರ ವೋಟಿಂಗ್ ಆಗುತ್ತೆ ಎಂಬು ಭಾವಿಸಿದ್ರೆ, 22 ಸಾವಿರ ಕಾಂಗ್ರೆಸ್ ಗೆ ಮತ್ತು 10 ಸಾವಿರ ಮತಗಳು ಜೆಡಿಎಸ್ ಪಾಲಾಗಲಿದೆ.
ಇನ್ನು ಚನ್ನಪಟ್ಟಣದಲ್ಲಿ ಒಟ್ಟು ಮುಸ್ಲಿಂ ಸುಮದಾಯದ 30 ಸಾವಿರ ವೋಟ್ ಗಳಿದ್ದು ಈ ಪೈಕಿ 24 ಸಾವಿರ ವೋಟ್ ಆಗುತ್ತೆ . ಇದ್ರಲ್ಲಿ 21 ಸಾವಿರ ಮತಗಳು ಕಾಂಗ್ರೆಸ್ ಮತ್ತು 3 ಸಾವಿರ ಮತಗಳು ಜೆಡಿಎಸ್ ಗೆ.

ಕುರುಬರು 10 ಸಾವಿರ ವೋಟಗಳ ಪೈಕಿ 7 ಸಾವಿರ ಓಟ್ ಕಾಂಗ್ರೆಸ್ ಪಾಲಾದ್ರೆ, 3 ಸಾವಿರ ವೋಟು ಜೆಡಿಎಸ್ ಗೆ ಬರಬಹುದು. ಇನ್ನುಳಿದಂತೆ ಬೆಸ್ತರು ತಿಗಳರು ಸೇರಿ ಕಾಂಗ್ರೆಸ್ ಗೆ 15 ಸಾವಿರ ವೋಟ್ ಬರುತ್ತೆ.
ಅಂತಿಮವಾಗಿ ಬ್ರಾಹ್ಮಣರು, ಲಿಂಗಾಯತರು, ಆಚಾರ್ಯರು, ದೇವಂಗ ಸೇರಿದಂತೆ 18 ಸಾವಿರ ವೋಟು – ಕಾಂಗ್ರೆಸ್ 10 ಸಾವಿರ – ಜೆಡಿಎಸ್ 8 ಸಾವಿರ ಮತ ಪಡೆಯಲಿದ್ದು, ಈ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ 1 ಲಕ್ಷದ 5 ಸಾವಿರ ಮತ ಗಳಿಸಿದ್ರೆ, ನಿಖಲ್ ಗೆ 69 ಸಾವಿರ ಮತಗಳು ಸಿಗಲಿವೆ. ಈ ಮೂಲಕ ಭಾರೀ ಅಂತರದಲ್ಲಿ ಯೋಗೇಶ್ವರ್ ಗೆಲ್ಲಲಿದ್ದಾರೆ ಎಂಬ ವಿಶ್ಲೇಶಣೆ ನೀಡಿದ್ದಾರೆ.










