• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬದಲಾವಣೆ ಜಗದ ನಿಯಮ

ಪ್ರತಿಧ್ವನಿ by ಪ್ರತಿಧ್ವನಿ
September 23, 2025
in Top Story, ಕರ್ನಾಟಕ, ಜೀವನದ ಶೈಲಿ
0
ಬದಲಾವಣೆ ಜಗದ ನಿಯಮ
Share on WhatsAppShare on FacebookShare on Telegram

ಬದುಕೇ ಹಾಗೆ ಎಲ್ಲವನ್ನು ಬದಲಿಸಿಬಿಡುತ್ತದೆ. ನಿನ್ನೆ ಇದ್ದದ್ದು ಇವತ್ತು ಇಲ್ಲ, ಇವತ್ತು ಇದ್ದದು ನಾಳೆ ಇರಲ್ಲ, ನಾಳೆ ಬರುವಂತದ್ದು ಮುಂದೊಂದು ದಿನಕ್ಕೆ ಇರುವುದಿಲ್ಲ, ಮತ್ತೆ ಬದಲಾಗಿರುತ್ತದೆ. ನಿನ್ನೆಯ ವಿಚಾರ ಮಾಯವಾಗಿ ಇಂದಿನ ವಿಚಾರ ಪ್ರತಿದ್ವನಿಸುತ್ತಿರುತ್ತದೆ. ಎಲ್ಲವೂ ನಮ್ಮ ಅವಶ್ಯಕತೆ-ಅನಿವಾರ‍್ಯಕ್ಕೆ ತಕ್ಕಹಾಗೆ. ಜೀವನ ಶೈಲಿ ಬದಲಾಗಿದೆ, ನೋಡುವ ನೋಟ ಬದಲಾಗಿದೆ, ನಮ್ಮ ಯೋಚನಾ ಲಹರಿ ಬದಲಾಗಿದೆ, ಊಟ ಆಟ ಪಾಟ ಎಲ್ಲವೂ ಬದಲಾಗಿದೆ, ಅಡುಗೆ ಬದಲಾಗಿದೆ, ಅಡುಗೆಯಲ್ಲಿನ ವೈವಿದ್ಯತೆ ಬದಲಾಗಿದೆ, ಅಡುಗೆಗೆ ಬಳಸುವ ಪದರ್ಥಾಗಳು ಬದಲಾಗಿದೆ. ಅಷ್ಠೆ ಯಾಕೆ, ಕುಡಿಯುವ ನೀರು ಕೂಡ ಬದಲಾಗಿದೆ, ಇಷ್ಟೆಲ್ಲಾ ಬದಲಾವಣೆಗೆ ಕಾರಣ ಕಣ್ಣಿಗೆ ಕಾಣದ ಕೊರೋನಾ ವೈರಾಣು.

ADVERTISEMENT

ಅಬ್ಬಾ ಎಶ್ಟೆಲ್ಲಾ ಬದಲಾವಣೆ. ಕೆಲವರ ಜೀವನ ಶೈಲಿ ಬದಲಾದರೆ ಇನ್ನೂ ಕೆಲವರ ಜೀವನದ ದಿಕ್ಕೇ ಬದಲಾಗಿದೆ, ಇದರಿಂದಾಗಿ ಹಲವು ವರ‍್ಗಗಳು ಹುಟ್ಟಿಕೊಂಡಿವೆ.
ಯಾವುದೇ ಕೊರೋನಾ ಬರಲಿ ಬಿಡಲಿ ತಮ್ಮ ಕೆಲಸ ಮಾಡಿಕೊಂಡು (ಆನ್ಲೈನ್) ಆದಾಯ ಗಳಿಸಿಕೊಂಡು ಇರುವುದನ್ನೇ ಅನುಸರಿಸಿಕೊಂಡು ಬದುಕುತ್ತಿರುವವರು.

Mysuru Dasara 2025: Banu mustaq ಮಾತುಗಳು ವಿರೋಧಿಗಳಿಗೆ ಕಣ್ತೆರೆಸುತ್ತೆ ಎಂದ CM Siddaramaiah

ಇರುವ ವ್ಯವಹಾರ ಅತವಾ ಕೆಲಸ ಕಳೆದುಕೊಂಡು ಉಳಿತಾಯ ಕರಗಿಸಿಕೊಳ್ಳುತ್ತಿರುವವರು. ಮೂರನೇ ವರ‍್ಗ – ಯಾವುದೇ ಬೇರೆ ದಾರಿಯಿಲ್ಲದೆ ತಮ್ಮನ್ನು ತಾವು ಅಪಾಯಕ್ಕೆ (risk) ಮೈಯೊಡ್ಡಿಕೊಂಡು ಜೀವನದ ಬಂಡಿ ಸಾಗಿಸಲು ಹೊರಗಡೆ ಬಂದು ದುಡಿಯುತ್ತಿರುವವರು.

ಸಮಾನವಾಗಿ ಕಂಡಿರುವ ಬದಲಾವಣೆಯೆಂದರೆ ಆಹಾರ, ಆಹಾರ ಕ್ರಮ. ಒಂದು ಕಾಲದಲ್ಲಿ ನಿಂಬೆಯ ರಸ ಕುಡಿಯುತ್ತಿದ್ದ ನಾವು, ಕ್ರಮೇಣ ನಿಂಬೆರಸದಲ್ಲಿ ಹೋಟೆಲ್ಗಳಲ್ಲಿ ಊಟದ ನಂತರ ಕೈ ತೊಳೆಯುತ್ತಿದ್ದೆವು (finger bowl). ಆದರೆ ಕಾಲಚಕ್ರ ಮತ್ತೆ ಉರುಳಿ ಮತ್ತದೇ ನಿಂಬೆಯ ರಸವನ್ನು ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯುತ್ತಿದ್ದೇವೆ. ಅದರ ಉಪಯೋಗ ಎಲ್ಲಿ ಎಂಬುದನ್ನು ಅರಿತುಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದೇವೆ. ಇದಲ್ಲವೇ ಬದಲಾವಣೆಯೆಂದರೆ. ಹೋಟೆಲ್ ಗಳಿಗೆ ಮೊದಲಿನಶ್ಟು ವ್ಯಾಪಾರವಿಲ್ಲ. ಮನೆಯಲ್ಲೇ ಮಾಡಿದ ಅಡುಗೆ ಶ್ರೇಶ್ಟ ಮತ್ತು ಸುರಕ್ಶಿತ ಎಂಬ ಸತ್ಯವನ್ನು ಜನರು ಅರಿತಿದ್ದಾರೆ. ಮನೆಯಲ್ಲೇ ಸಮಯಕ್ಕೆ ಸರಿಯಾಗಿ ಬಿಸಿಬಿಸಿಯಾದ ಆಹಾರವನ್ನು ತಯಾರಿಸಿ ಸೇವಿಸುತ್ತಿದ್ದಾರೆ. ಇವೆಲ್ಲ ಕೆಲವು ಉದಾಹರಣೆ ಗಳು. ಇಂತಹ ಹಲವಾರು ಸಂಗತಿಗಳಿವೆ.

ಆರೋಗ್ಯಕ್ಕೆ ಉತ್ತಮವಾದ ಆಂಟಿ-ಆಕ್ಸಿಡೆಂಟ್ಗಳ ಮತ್ತು ರೋಗನಿರೋದಕ ಶಕ್ತಿಯ ಬಂಡಾರವಾಗಿರುವ ಮಸಾಲಾ ಪದಾರ‍್ತಗಳ ಕಶಾಯವನ್ನು ಮೂಸಿ ಕೂಡ ನೋಡದ ನಾವು ಇಂದು, ಬೆಳಿಗ್ಗೆ ಸಂಜೆ ಕಶಾಯದ ಮೊರೆ ಹೋಗಿದ್ದೇವೆ. ಮಸಾಲ ಪದಾರ‍್ತಗಳ ಮಾರಾಟ ಮತ್ತು ಬಳಕೆ ಹೆಚ್ಚಾಗಿದೆ. ಮಸಾಲ ಪದಾರ‍್ತಗಳ ರಪ್ತು ಮಾರಾಟ ಹೆಚ್ಚಾಗಿದೆ. ಬಾರತದಲ್ಲಿ ಮಸಾಲ ಪದಾರ‍್ತಗಳ ಬಳಕೆ ಮೊದಲಿನಿಂದಲೂ ಹೆಚ್ಚಾಗಿದ್ದರೂ ಕೂಡ ಈಗ ಅದರ ಬಳಕೆ ದ್ವಿಗುಣಗೊಂಡಿದೆ. ಎಂತಹ ಚಳಿಗಾಲದಲ್ಲೂ ಕೂಡ ಬಿಸಿನೀರು ಬಳಸದ ಜನ ಈಗ ಬಿಸಿ ನೀರಿನ ಮಹತ್ವ ಅರಿಯುತ್ತಿದ್ದಾರೆ. ಹಣ್ಣು ತರಕಾರಿ ಸೊಪ್ಪುಗಳ‌ ಸೇವನೆ ಜನರಲ್ಲಿ ಹೆಚ್ಚಾಗಿದೆ. ವಿಟಮಿನ್ ಮತ್ತು ಕನಿಜಾಂಶಗಳ ಮಹತ್ವ ನಿದಾನವಾಗಿ ಎಲ್ಲರ ಮನಮುಟ್ಟುತ್ತದೆ. ಇಂತಹ ಬದಲಾವಣೆಗಳು ನಿಜಕ್ಕೂ ಸ್ವಾಗತಾರ‍್ಹ. ಆದರೆ ವೈರಾಣು ಇದಕ್ಕೆಲ್ಲಾ ಕಾರಣವಾಗಿರುವುದು ಬೇಸರದ ಸಂಗತಿ.

ನಮ್ಮದೇ ಪ್ರಾಚೀನ ಕಾಲದ ಆಯುರ‍್ವೇದ ಮತ್ತು ಆಯುರ‍್ವೇದ ಉತ್ಪನ್ನಗಳನ್ನು ಕಡೆಗಣಿಸಿದ ನಾವುಗಳು ಇಂದು ಆಯುರ‍್ವೇದ ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದೇವೆ. ಚವನಪ್ರಾಶ್ ಜೇನುತುಪ್ಪದ ಮಾರಾಟ ಹೆಚ್ಚಾಗಿದೆ. ರೋಗನಿರೋದಕ ಶಕ್ತಿ ಹೆಚ್ಚು ಮಾಡುವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೊರಗಿನ ಶತ್ರುವಿಗೆ ಹೊರಗಿನ ಔಶದಿಗಿಂತ ಹೆಚ್ಚಾಗಿ ಒಳಗಿನ ಔಶದಿ ಕೆಲಸ ಚೆನ್ನಾಗಿ ಮಾಡುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳುತ್ತಿದ್ದಾರೆ. ಕಾಲಕ್ಕೆ ತಕ್ಕ ಹಾಗೆ ಪರಿಸ್ತಿತಿಗೆ ಹೊಂದಿಕೊಳ್ಳುವ ಬದಲಾವಣೆ ಅವಶ್ಯಕವೇ. ಆದರೆ ಅದರಿಂದ ಬಂಡವಾಳ ಗಿಟ್ಟಿಸಿಕೊಳ್ಳುವವರು ಯಾರು ಎಂಬುದು ಪ್ರಶ್ನೆಯಶ್ಟೇ! ಜನರು ಎಲ್ಲಾ ಆಹಾರದಲ್ಲೂ ರೋಗನಿರೋದಕ ಶಕ್ತಿ ಹುಡುಕುವ ಪ್ರಯತ್ನದಲ್ಲಿದ್ದಾರೆ. ಇದನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಿರುವವರು ಕೆಲವು ಕಂಪನಿಗಳು. ನಿನ್ನೆ ಮೊನ್ನೆಯ ತನಕ ಹೇಳದ ಅತವಾ ಇಲ್ಲದ ರೋಗನಿರೋದಕ ಶಕ್ತಿ ಹೆಸರನ್ನು ತಮ್ಮ ಉತ್ಪನ್ನಗಳ ಜೊತೆ ಸೇರಿಸಿಕೊಂಡು ಜಾಹೀರಾತು ನೀಡುತ್ತಿದ್ದಾರೆ!

ಒಟ್ಟಿನಲ್ಲಿ, ಬದಲಾವಣೆ ಜಗದ ನಿಯಮ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಬದಲಾವಣೆಯೊಂದೇ ಶಾಶ್ವತ. ಈ ಬದಲಾವಣೆ ಬದುಕಿನ ಬೇರನ್ನು ಗಟ್ಟಿಗೊಳಿಸಲಿ ಎಂದು ಆಶಿಸೋಣ.

ನವೀನ ಹೆಚ್ ಎ
ಹನುಮನಹಳ್ಳಿ
ಕೆ ಆರ್ ನಗರ

Tags: can international law change worldchange is the law of the worldif you could change one law what would it beinternational law change the worldlaw change the world
Previous Post

ಯ್ಯೂಟುಬ್ ಸ್ಟಾರ್ ಮುಕಳೆಪ್ಪನ ಲವ್ ಜಿಹಾದ್ ಪ್ರಕರಣ; ಮಾಹಿತಿ ನೀಡಿದ ಪೊಲೀಸ್ ಕಮೀಷನ್

Next Post

ಕಾಂಗ್ರೆಸ್ ಶಾಸಕ ನಂಜೇಗೌಡ ಕ್ರೇಜ್‌ ನೋಡಿ..!

Related Posts

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ
Serial

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

by ಪ್ರತಿಧ್ವನಿ
October 13, 2025
0

ಸಾಮಾಜಿಕ  ಅನ್ಯಾಯ ದೌರ್ಜನ್ಯ ತಾರತಮ್ಯಗಳಿಗೆ ಸ್ಪಂದಿಸುವುದು ನಾಗರಿಕತೆಯ ಲಕ್ಷಣ ನಾ ದಿವಾಕರ  ಜಗತ್ತಿನ ಇತಿಹಾಸದಲ್ಲಿ ಸಂಭವಿಸಿರುವ ಬಹುತೇಕ ವಿಪ್ಲವಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಆಯಾ ಸಮಾಜಗಳಲ್ಲಿ ಕ್ರಿಯಾಶೀಲವಾಗಿ,...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post

ಕಾಂಗ್ರೆಸ್ ಶಾಸಕ ನಂಜೇಗೌಡ ಕ್ರೇಜ್‌ ನೋಡಿ..!

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada