ಚಂಡೀಗಢ ವಿಶ್ವವಿದ್ಯಾಲಯ ಹಾಸ್ಟೇಲ್ ನ ಯುವತಿಯರ ವೀಡಿಯೋ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಮೂವರು ಮಹಿಳೆಯರ ವಿಶೇಷ ತನಿಖಾ ರಚಿಸಲಾಗಿದೆ.
ಐಪಿಎಸ್ ಅಧಿಕಾರಿ ಗುರುಪ್ರೀತ್ ಸಿಂಗ್ ನೇತೃತ್ವದ ಮೂವರು ಮಹಿಳೆಯರನ್ನೊಳಗೊಂಡ ತನಿಖಾ ತಂಡವನ್ನು ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಡಿಜಿಪಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ವೀಡಿಯೋ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಮುಂಭಾಗ ವಿದ್ಯಾರ್ಥಿನಿಯರ ಪ್ರತಿಭಟನೆ ಹಿನ್ನೆಲೆಯಲ್ಲಿ 6 ದಿನಗಳ ಕಾಲ ತರಗತಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ವಿಶ್ವವಿದ್ಯಾಲಯ 6 ದಿನಗಳ ಅಂದರೆ ಮುಂಬರುವ ಶನಿವಾರದವರೆಗೂ ಮುಚ್ಚಲು ಆದೇಶಿಸಲಾಗಿದೆ. ಈ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ವಿವಿ ಆಡಳಿತ ಮಂಡಳಿ ನಿರ್ಧರಿಸಿದೆ.
ಘಟನೆಗೆ ಸಂಬಂಧಿಸಿ ಈಗಾಗಲೇ ವೀಡಿಯೊ ಸೋರಿಕೆ ಮಾಡಿದ ಯುವತಿ, ಆಕೆಯ ಗೆಳೆಯ ಹಾಗೂ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ವಿವಿಯ ಇಬ್ಬರು ವಾರ್ಡನ್ ಗಳನ್ನು ಅಮಾನತುಗೊಳಿಸಲಾಗಿದೆ.












