ಹಲವು ದಿನಗಳಿಂದ ವಿವಾದಕ್ಕೆ ಈಡಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ಈಗ ತಾರ್ಕಿಕ ಅಂತ್ಯ ಕಾಣುವ ಸ್ಥಿತಿಯಲ್ಲಿದೆ. ಯಾಕಂದ್ರೆ ದಾಖಲೆ ನೀಡಲು ಬಿಬಿಎಂಪಿ ನೀಡಿದ್ದ ಸಮಯವಕಾಶ ಇಂದಿಗೆ ಮುಗಿದಿದೆ. ಹೀಗಾಗಿ ಪಾಲಿಕೆ ಈ ಆಸ್ತಿ ತಮ್ಮದೇ ಅಂತ ಘೋಷಿಸುವ ಚಿಂತನೆ ನಡೆಸಿದೆ.
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ತಾರ್ಕಿಕ ಅಂತ್ಯಕ್ಕೆ.!?
ಈ ಮೊದಲು ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತಡ ಆಗಸ್ಟ್ 3ರ ಒಳಗಾಗಿ ವಕ್ಫ್ ಬೋರ್ಡ್ ಅಥವಾ ಯಾರೇ ಮೈದಾನದ ದಾಖಲೆ ನೀಡಲು ಕಾಲವಕಾಶ ನೀಡಿತ್ತು. ಈ ಮದ್ಯೆ ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡು ಚಾಮರಾಜಪೇಟೆ ನಾಗರೀಕರು ಬಂದ್ ಆಚರಣೆ ಮಾಡುವ ಮಟ್ಟಕ್ಕೆ ಬೆಳೆದಿತ್ತು. ಅಲ್ಲದೆ ಸ್ಥಳೀಯ ಶಾಸಕರು, ಸಂಸದರೇ ಈ ಪ್ರಕರಣದಲ್ಲಿ ಮುಖಾಮುಖಿಯಾಗಿ ವಾಗ್ವಾದಕ್ಕೆ ಇಳಿದಿದ್ರು. ಇದೀಗ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಕೊನೆಗಾಣುವ ಲಕ್ಷಣಗಳು ಗೋಚರವಾಗಿದೆ.
ಇಂದಿಗೆ ಬಿಬಿಎಂಪಿ ಕೊಟ್ಟ ಡೈಡ್ ಲೈನ್ ಫಿನಿಶ್.. ಹಾಗಿದ್ರೆ ಈದ್ಗಾ ಮೈದಾನ ಯಾರದ್ದು.!?
ವಕ್ಫ್ ಬೋರ್ಡ್ ಈವರೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಹಾಗೂ ಹಲವು ವರ್ಷಗಳ ಹಿಂದಿನ ತೆರಿಗೆ ಕಟ್ಟಿರುವ ಬಿಲ್ ಮಾತ್ರ ಹಾಜರುಪಡಿಸಿದೆ. ಇದರ ಹೊರತಾಗಿ ಬೇರೆ ಯಾವುದೇ ದಾಖಲೆ ವಕ್ಫ್ ಬೋರ್ಡ್ ನಿಂದ ಸಲ್ಲಿಕೆಯಾಗಿಲ್ಲ. ಈ ವಿಚಾರ ಬಿಬಿಎಂಪಿ ಇನ್ ಹೌಸ್ ಪ್ರೊಸೀಡಿಂಗ್ಸ್ ಕೂಡ ನಡೀತಿದ್ದು ಸಮರ್ಪಕ ದಾಖಲೆ ಸಲ್ಲಿಕೆಯಾಗಿಲ್ಲ. ಹೀಗಾಗಿ ಚಾಮರಾಜಪೇಟೆ ಈದ್ಗಾ ಮೈದಾನ ಬಿಬಿಎಂಪಿಯದ್ದೇ ಎಂದು ಬಹುತೇಕ ಸಾಬೀತು ಆಗಿದೆ. ಇದೇ ವಿಚಾರ ಮುಂದಿಟ್ಟು ಆಸ್ತಿ ಪಾಲಿಕೆಯದ್ದು ಎಂದು ಘೋಷಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಲಯ ಜಂಟಿ ಆಯುಕ್ತರು ಸಂಪೂರ್ಣ ಸ್ವತಂತ್ರರು ಎಂದು ಇದು ಪಾಲಿಕೆಯದ್ದೇ ಆಸ್ತಿ ಎಂದು ಘೋಷಿಸುವ ಮುನ್ಸೂಚನೆ ನೀಡಿದ್ದಾರೆ.

ವಿವಾದಿತ ಮೈದಾನದಲ್ಲಿ ಆಗಸ್ಟ್ 15 ಕ್ಕೆ ಧ್ವಜಾರೋಹಣ ಮಾಡಲು ಅವಕಾಶ ಕೋರಿ ಮನವಿ
ಈ ವಿವಾದಿತ ಮೈದಾನ ಬಿಬಿಎಂಪಿ ಆಟದ ಮೈದಾನ ಎಂದು ಘೋಷಿಸುವಂತೆ ಹೋರಾಟಕ್ಕೆ ಇಳಿದಿದ್ದೇ ಚಾಮರಾಜಪೇಟೆ ನಾಗರೀಕ ಒಕ್ಕೂಟ ವೇದಿಕೆ. ಇವರು ಈಗ ಆಗಸ್ಟ್ 15ಕ್ಕೆ ಧ್ವಜಾರೋಹಣ ಮಾಡಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದಾರೆ. ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೂ ಮನವಿ ನೀಡಲಾಗಿದೆಯಾದರೂ ಈ ವರೆಗೆ ಅನಿಮತಿ ಸಿಗಲಿಲ್ಲ. ಅದಕ್ಕೂ ಮುನ್ನ ಆಗಸ್ಟ್ 7ರಂದು ವಿವಾದ ಮೈದಾನದಲ್ಲಿ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ‘ರಕ್ತ ಕೊಟ್ಟೆವು, ಮೈದಾನ ಬಿಟ್ಟು ಕೊಡೆವು’ ಅಭಿಯಾನಕ್ಕೆ ಒಕ್ಕೂಟ ವೇದಿಕೆ ಚಾಲನೆ ನೀಡುತ್ತಿದೆ. ಈ ಬಗ್ಗೆ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ, ಅಧಿಕೃತವಾಗಿ ಮೈದಾನದ ಪಾಲಿಕೆಯದ್ದು ಎಂದು ಘೋಷಣೆಯಾಗುವವರೆಗೆ ಹೋರಾಟ ನಿಲ್ಲಲ್ಲ. ಬಿಬಿಎಂಪಿ ಚೀಫ್ ಕಮಿಷನರ್ ಮೈದಾನ ಪಾಲಿಕೆಯದ್ದು ಎಂದು ಘೋಷಿಸಿದರೆ ಮಾತ್ರ ಹೋರಾಟ ವಾಪಾಸ್. ಅದುವರೆಗೂ ಯಾವುದೇ ಕಾರಣಕ್ಕೆ ನಾವು ಬಿಡಲ್ಲ ಅಂತ ಹೇಳಿದ್ದಾರೆ.
ಇನ್ನು ಬಿಬಿಎಂಪಿ ಚೀಫ್ ಕಮಿಷನರ್ ಕೂಡ ಈ ಬಗ್ಗೆ ವಲಯ ಜಂಟಿ ಆಯುಕ್ತರು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು ಎಂದಿರುವುದು ಈ ಪ್ರಕರಣ ಬಹುತೇಕ ಅಂತ್ಯಕ್ಕೆ ತಲುಪಿದೆ ಎಂಬ ನಿದರ್ಶನ ಎನ್ನಲಾಗಿದೆ. ಆದಷ್ಟು ಬೇಗ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಒಂದು ಸ್ಪಷ್ಟತೆ ಕಂಡುಕೊಂಡು ಈ ವಿವಾದಕ್ಕೆ ಇತಿಶ್ರೀ ಹಾಡಲಿ ಎಂಬುವುದೇ ನಮ್ಮ ಆಶಯ.