ಚಾಮರಾಜನಗರ : ಮೇ.17: ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಬಿಜೆಪಿಯೊಳಗೆ ಮಡುಗಟ್ಟಿದ್ದ ಅಸಮಾಧಾನ, ಆಕ್ರೋಶ ಸ್ಪೋಟಗೊಳ್ಳತೊಡಗಿದೆ. ಬಿಜೆಪಿಯ ಘಟಾನುಘಟಿ ನಾಯಕರೇ ಈ ಚುನಾವಣೆಯಲ್ಲಿ ಸೋತಿದ್ದಾರೆ. ಅವರಲ್ಲಿ ವಿ.ಸೋಮಣ್ಣ ಕೂಡ ಒಬ್ಬರು. ಚಾಮರಾಜನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಜತೆ ಇಂದು ವಿ.ಸೋಮಣ್ಣ ಕೃತಜ್ಞತಾ ಸಭೆ ನಡೆಸಿದ್ದು, ಈ ವೇಳೆ ಸೋಮಣ್ಣ ಬೆಂಬಲಿಗರು ಗಲಾಟೆ ಮಾಡಿದ್ದಾರೆ.


ಕಾರ್ಯಕರ್ತರನ್ನು ಸಮಾಧಾನಪಡಿಸಿ ಭಾಷಣ ಆರಂಭಿಸಿದ ವಿ.ಸೋಮಣ್ಣ, ಪಕ್ಷ ದ್ರೋಹ ಮಾಡಿದ ಆ ನನ್ನ ಮಕ್ಕಳಿಗೆ ಜೋಡಲ್ಲಿ ಹೊಡೆಯಿರಿ. ನಾನೇನು ದಡ್ಡ ಅಲ್ಲ, 45 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಇಲ್ಲಿರುವ ಒಬ್ಬೊಬ್ಬರು 10 ವೋಟು ಹಾಕಿಸಿದ್ದರೆ ಸಾಕಿತ್ತು. ಆ ಯಾರೋ ಒಬ್ಬನಿಗಾಗಿ ನನ್ನನ್ನು ಸೋಲಿಸಿದ್ದೀರಿ ಎಂದು ಪರೋಕ್ಷವಾಗಿ ಕೆಆರ್‌ಡಿಎಲ್‌ನ ಮಾಜಿ ಅಧ್ಯಕ್ಷ ರುದ್ರೇಶ್ ವಿರುದ್ಧ ಹರಿಹಾಯ್ದರು.