ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಶ್ರಾವಣ ಮಾಸದ ಸಮಾಪ್ತಿ ಹಿನ್ನೆಲೆ ಐತಿಹಾಸಿಕ ಶಿವನ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿ 22 ಶಿವಲಿಂಗಗಳ (Shiva Lingala)ಪ್ರತಿಷ್ಠಾಪನೆ ಮಾಡಲಾಗಿದೆ.ನಾರಾಯಣಪುರ (Narayanpur)ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ರುದ್ರಪೂಜೆ ನಡೆಸಿ, ಶಿವಲಿಂಗಗಳಿಗೆ ವಿಶೇಷ ಆರಾಧನೆ ಮಾಡಲಾಯ್ತು. ದೇವಸ್ಥಾನದಲ್ಲಿ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಕಲ್ಯಾಣದ ಚಾಲುಕ್ಯರ ಆರನೇ ವಿಕ್ರಮಾದಿತ್ಯ ಸ್ಥಾಪಿಸಿದ ಈ ದೇವಾಲಯಕ್ಕೆ ಅಸಂಖ್ಯಾತ ಭಕ್ತರಿದ್ದಾರೆ.ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಅನ್ನದಾಸೋಹ, ರುದ್ರ ಪೂಜೆ, ಅಭಿಷೇಕ ಸೇರಿದಂತೆ ವಿಶಿಷ್ಟ ಪೂಜೆ ನೆರವೇರಿಸಿ ಭಕ್ತರು ಶಿವಧ್ಯಾನದಲ್ಲಿ ಮಿಂದೆದ್ದರು.
ನಾಳೆ ನಾತಾಯಣಪುರದಲ್ಲಿ ಶಿವಪೂಜೆ ನೆರವೇರಲಿದ್ದು, ಡೊಳ್ಳು ಕುಣಿತ, ಭಜನಾ ಪದ, ಸಾಂಸ್ಕೃತಿಕ ನೃತ್ಯ, ಶಿವನಾಮ ಜಪದೊಂದಿಗೆ ಭಕ್ತರ ಸಮ್ಮುಖದಲ್ಲಿ ನಾರಾಯಣಪುರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶಿವನ ಭವ್ಯ ಮೆರವಣಿಗೆ ಸಾಗಲಿದೆ.