ಇತ್ತೀಚಿಗೆ ದೇಶಾದ್ಯಂತ ಎಲೆಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಾರಿಗೆ ಇಲಾಖೆ ಹೊಸ ವಾಹನಗನ್ನು ಉತ್ಪಾದನೆ ಹಾಗೂ ಮಾರುಕಟ್ಟೆಗೆ ಪರಿಚಯಿಸದಂತೆ ವಾಹನ ತಯಾರಕ ಕಂಪನಿಗಳಿಗೆ ಆದೇಶಿಸಿದೆ.
ಈ ಕುರಿತು ಸಭೆ ಸೇರಿದ ಅಧಿಕಾರಿಗಳು ಹಾಗೂ ವಾಹನ ತಯಾರಕ ಕಂಪನಿಗಳ ಮುಖ್ಯಸ್ಥರು ಅಗ್ನಿ ಅವಘಡಗಳ ಕುರಿತು ತನಿಖಾ ವರದಿ ಸರ್ಕಾರದ ಕೈ ಸೇರುವವರೆಗು ಯಾವುದೇ ತರಹದ ಕಾರ್ಯಾಚರಣೆಗೆ ಕೈಹಾಕದಂತೆ ಅಧಿಕಾರಿಗಳು ಮೌಖಿಕವಾಗಿ ಸೂಚಿಸಿದ್ದಾರೆ.
ಒಂದು ವೇಳೆ ತಯಾರಿಸಿರುವ ಒಂದು ಬ್ಯಾಚ್ ವಾಹನಗಳಲ್ಲಿ ಯಾವುದಾದರು ಒಂದು ವಾಹನದಲ್ಲಿ ಬೆಂಕಿ ಕಾಣಿಸಿಕೊಂಡರು ಸಹ ಇಡೀ ಬ್ಯಾಚ್ ಅನ್ನು ಹಿಂಪಡೆಯುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ತನಿಖಾ ವರದಿಯ ಆಧಾರದ ಮೇಲೆ ಎಲೆಟ್ರಿಕ್ ವಾಹನಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸುವವರೆಗು ಯಾವುದೇ ಹೊಸ ವಾಹನಗಳನ್ನು ಮಾರುಕಟ್ಟಗೆ ಪರಿಚಯಿಸದಂತೆ ಆದೇಶಿಸಲಾಗಿದೆ ಎಂದು ಕೇಂದ್ರ ಸಾರಿಗೆ ಇಲಾಖೆಯತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ವಾಹನಗಳಲ್ಲಿ ಯಾಕೆ ಬೆಂಕಿ ಕಾಣಿಸಿಕೊಳ್ಳುತ್ತಿದೆ ತಯಾರಕರ ತಪ್ಪ ಅಥವಾ ವಾಹನ ಮಾಲೀಕರ ತಪ್ಪಾ ಎಂಬುದನ್ನು ಅರಿಯಲು ಸರ್ಕಾರ ಬಯಸಿದೆ ಎಂದು ಹೇಳಿದ್ದಾರೆ.
ಕಂಪನಿಗಳು ಸಚಿವಾಲಯದ ಮನವಿಗೆ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಮತ್ತು ತನಿಖೆ ಮುಗಿಯುವವರೆಗೂ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿವೆ ಎಂದು ತಿಳಿಸಿದ್ದಾರೆ.
ಸಚಿವಾಲಯವು ವಾಹನ ತಯಾರಕ ಕಂಪನಿಗಳಿಗೆ ಗ್ರಾಹಕರಿಗೆ ಅಗ್ನಿ ಅವಘಾಡ ಹಾಗು ರಸ್ತೆ ಸುರಕ್ಷತೆ ಬಗ್ಗೆ ಗ್ರಹಕರಲ್ಲಿ ಅರಿವು ಮೂಡಿಸುವಂತೆ ಈ ವೇಳೆ ಸೂಚಿಸಿದೆ.
ಈಗಾಗಲೇ ಕೇಂದ್ರದಿಂದ ನಿಯೋಜನೆಗೊಂಡಿರುವ ಅಧಿಕಾರಿಗಳ ತಂಡ ಈಗಾಗಲೇ ಒಂದು ಸುತ್ತು ದ್ವಿಚಕ್ರವಾಹನ ತಯಾರಿಕ ಕಂಪನಿಗಳಿಗೆ ಭೇಟಿ ನೀಡಿ ವಾಹನ ತಯಾರಿಕೆ ಕಂಪನಿಗಳ ಅಧಿಕಾರಿಗಳ ಬಳಿ ತಯಾರಿಕಾ ಹಾಗೂ ಅಗ್ನಿ ಅವಘಡದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿದು ಬಂದಿದೆ.