ಕಳೆದ ವಾರ ಲೋಕಸಭೆ (Loksabha) ಮತ್ತು ರಾಜ್ಯಸಭೆಯಲ್ಲಿ (Rajya sabha) ಅಂಗೀಕಾರಗೊಂಡ ವಕ್ಛ್ ತಿದ್ದುಪಡಿ ಕಾಯ್ದೆಯನ್ನು (Waqf amendment act) ದೇಶದಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇಂದಿನಿಂದಲೇ (ಏ.8) ದೇಶಾದ್ಯಂತ ತಿದ್ದುಪಡಿ ಕಾಯಿದೆ ಜಾರಿಗೆ ತರುವಂತೆ ಅಧಿಸೂಚನೆ ಹೊರಡಿಸಲಾಗಿದ್ದು, ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಕಾಯಿದೆಗೆ ಸಹಿ ಹಾಕಿದ್ದಾರೆ.

ಈ ಕುರಿತು ನಿಯಮಗಳನ್ನು ರೂಪಿಸಿ ಜಾರಿಗೆ ತರಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದು ವಕ್ಛ್ ಮಂಡಳಿಯ ಏಕಪಕ್ಷೀಯ ನಿರ್ಧಾರಕ್ಕೆ ಬ್ರೇಕ್ ಹಾಕುವ ಕಾಯ್ದೆ ಇದಾಗಿದ್ದು, ಹಿಂದೂ, ಕ್ರಿಶ್ಚಿಯನ್ ಭೂಮಿಯನ್ನು ವಕ್ಛ್ ಬೋರ್ಡ್ ಅತಿಕ್ರಮಿಸಿದಂತೆ ಕಾಯ್ದೆ ಜಾರಿ ಮಾಡಲಾಗಿದೆ.