• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಕೇಂದ್ರ ಸರ್ಕಾರ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ- ಸಿಎಂ ಸಿದ್ದರಾಮಯ್ಯ

ಪ್ರತಿಧ್ವನಿ by ಪ್ರತಿಧ್ವನಿ
February 23, 2026
in Uncategorized
0
ಕೇಂದ್ರ ಸರ್ಕಾರ  ಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ- ಸಿಎಂ ಸಿದ್ದರಾಮಯ್ಯ
Share on WhatsAppShare on FacebookShare on Telegram
ADVERTISEMENT

ಚಿಕ್ಕಬಳ್ಳಾಪುರ: ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Siddaramaiah : ಕೂಲಿ ಕಾರ್ಮಿಕರ ಸೂಚ್ಯವಾಗಿ ತಲೆಗೆ ಟವಲ್ ಸುತ್ತಿಕೊಂಡ Siddaramaiah #pratidhvani

ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ದೇಶಾದ್ಯಂತ ‘ಮನರೇಗಾವನ್ನು ಉಳಿಸಿ’ ಅಭಿಯಾನ ಪ್ರಾರಂಭಿಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಭಾಜಪ ಸರ್ಕಾರ ಮನರೇಗಾವನ್ನು ರದ್ದುಪಡಿಸಿ, ವಿಬಿ ಜಿರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದೆ. ಮನರೇಗಾದ ರದ್ದು ಅಗತ್ಯವಿರಲಿಲ್ಲ ಎಂದರು.

DK Shivkumar : ಡಿಕೆಶಿ ನೋಡಿದ ನೋಟಕ್ಕೆ ಬೆದರಿ ಪಕ್ಕದಿಂದ ದೂರ ಸರಿದ ಪ್ರದೀಪ್‌ ಈಶ್ವರ್ #pratidhvani

ಕೂಲಿಕಾರರು, ಆದಿವಾಸಿಗಳು, ಸಣ್ಣ ರೈತರಿಗೆ, ಮಹಿಳೆಯರಿಗೆ ಉದ್ಯೋಗದ ಅನುಕೂಲ ಕಲ್ಪಿಸುವ ದಿಸೆಯಲ್ಲಿ 2005ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಈ ಕಾಯ್ದೆ ಜಾರಿಯಾಯಿತು. ಇದೇ ಕಾಯ್ದೆಯಲ್ಲದೇ, ಶಿಕ್ಷಣ, ಆಹಾರ, ಮಾಹಿತಿ ಹಕ್ಕು ಸೇರಿದಂತೆ ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಆದರೆ ಈ ಎಲ್ಲಾ ಜನಪರ ಕಾಯ್ದೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮೋದಿಯವರ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದರು.

ಸದನದಲ್ಲಿ ಕೇವಲ 8 ಗಂಟೆಗಳ ಕಾಲ ಚರ್ಚೆ ಮಾಡಿದ ಕೇಂದ್ರ ಸರ್ಕಾರ, ನಂತರ ಹೊಸ ಕಾಯ್ದೆಯನ್ನು ಜಾರಿಗೆ ತಂದರು. ನರೇಗಾದಿಂದ 12.16 ಕೋಟಿ ಜನರು ಕೆಲಸ ಪಡೆಯುತ್ತಿದ್ದರು. ಇದರಲ್ಲಿ ಸುಮಾರು 53 % ಉದ್ಯೋಗ ಪಡೆಯುತ್ತಿದ್ದರು. ಅಲ್ಲದೇ ಪರಿಶಿಷ್ಟ ಜಾತಿಯ 17% ಮತ್ತು ಪರಿಶಿಷ್ಟ ವರ್ಗದ 11 % ಜನರು ಉದ್ಯೋಗ ಪಡೆಯುತ್ತಿದ್ದರು. ಈ ಎಲ್ಲಾ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದರು.

ಚಿಕ್ಕಬಳ್ಳಾಪುರದಲ್ಲಿ ಮನ್​ರೇಗಾ ಬಚಾವ್ ಆಂದೋಲನ ಸಮಾವೇಶ ವೇದಿಕೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟ Siddaramaiah

ಮನರೇಗಾ ಕಾಯ್ದೆಗೆ ಗ್ರಾಮೀಣಾಭಿವೃದ್ಧಿಯ ಕನಸು ಕಂಡಿದ್ದ ಮಹಾತ್ಮಾಗಾಂಧಿಯವರ ಹೆಸರನ್ನು ಇಡಲಾಗಿತ್ತು. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮನರೇಗಾಗೆ ಶಕ್ತಿ ತುಂಬಿತ್ತು. 100 ದಿನಗಳ ಉದ್ಯೋಗದ ಖಾತ್ರಿ ನೀಡುತ್ತಿದ್ದ ಮನರೇಗಾ ಕಾಯ್ದೆಯಡಿ, ಕೂಲಿಕಾರರು ತಮ್ಮ ಸ್ಥಳೀಯ ಮಟ್ಟದಲ್ಲಿಯೇ ಕೆಲಸ ಮಾಡಬಹುದಿತ್ತು. ಗ್ರಾಮಪಂಚಾಯತಿ ಮತ್ತು ಗ್ರಾಮಸಭೆಗಳು ನಿರ್ಧರಿಸುವ ಅಧಿಕಾರವಿತ್ತು. ಆದರೀಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಲಿದೆ. ಕೇಂದ್ರದ ಅನುದಾನ , ಅನುಮತಿ ಇಲ್ಲದೇ , ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕೆಲಸವಾಗಲು ಸಾಧ್ಯ. ಆದ್ದರಿಂದ ಮನರೇಗಾ ವನ್ನು ಮುಂದುವರೆಸಬೇಕೆಂಬುದು ಕಾಂಗ್ರೆಸ್ ಸರ್ಕಾರದ ಒತ್ತಾಯವಾಗಿದೆ. ಮನರೇಗಾದಲ್ಲಿ 100 ದಿನ ಭತ್ಯೆಯನ್ನು ತಪ್ಪದೇ ಕೊಡಲಾಗುತ್ತಿತ್ತು. ಹೊಸ ಕಾಯ್ದೆಯಂತೆ ಕೇಂದ್ರ 60% ಅನುದಾನ ಮತ್ತು ರಾಜ್ಯಗಳು 40% ಅನುದಾನ ಕೊಡಬೇಕಾಗಿದೆ. ರಾಜ್ಯದ ಹಿತವನ್ನು ಕಾಪಾಡುವಲ್ಲಿ ಕೇಂದ್ರ ಸೋತಿದೆ. ಅದ್ದರಿಂದ ವಿಬಿಜಿರಾಮ್ ಜಿ ರದ್ದುಪಡಿಸಿ, ಮನರೇಗಾವನ್ನು ಮರುಸ್ಥಾಪಿಸಲು ದೇಶಾದ್ಯಂತ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ ಎಂದರು.

G.D.Harish Gowda | JDS 12 ಶಾಸಕರು ಕಾಂಗ್ರೆಸ್ ಗೆ, ಡಿಕೆಶಿಗೆ ಜೆಡಿಎಸ್ ಶಾಸಕ G.D.ಹರೀಶ್ ಗೌಡ ಖಡಕ್ ಟಾಂಗ್

ಬೇಡಿಕೆ ಈಡೇರುವವರೆಗೂ ಹೋರಾಟ

ವಿಬಿಜಿರಾಮ್ ಜಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಮನರೇಗಾವನ್ನು ಮರು ಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ಪಂಚಾಯತ್ ಸ್ವಯಂ ಆಡಳಿತದ ಹಕ್ಕು ಮರುಸ್ಥಾಪನೆ, ದಿನಕ್ಕೆ 400 ರೂ.ಗಳ ಕನಿಷ್ಠ ವೇತನವನ್ನು ದೇಶಾದ್ಯಂತ ನೀಡಬೇಕು. ಈ ಬೇಡಿಕೆಗಳು ಈಡೇರುವವರೆಗೆ ನಮ್ಮ ಆಂದೋಲನ ನಿಲ್ಲುವುದಿಲ್ಲ ಎಂದರು. ರೈತವಿರೋಧಿ ಕಾಯ್ದೆಗಳನ್ನು ಹೋರಾಟದ ಫಲವಾಗಿ ರದ್ದುಗೊಳಿಸಲಾಯಿತು. ಅದೇ ರೀತಿಯಲ್ಲಿ ಈ ಹೋರಾಟ ನಿಲ್ಲುವುದಿಲ್ಲ. ಈ ಹೋರಾಟಕ್ಕೆ ರಾಜ್ಯದ ಜನರೆಲ್ಲರೂ ನಮ್ಮ ಜೊತೆಯಾಗಬೇಕು. ಹಳ್ಳಿಗಾಡಿನ ಜನರಿಗೆ ಅನುಕೂಲ ಕಲ್ಪಿಸುವ ಮನರೇಗಾ ಯೋಜನೆಯ ಮರುಸ್ಥಾಪಿಸುವ ಕಾಂಗ್ರೆಸ್‌ನ ಸಾರ್ಥಕ ಉದ್ದೇಶಕ್ಕೆ ಜನರು ಬೆಂಬಲಿಸಬೇಕು ಎಂದು ಸಿಎಂ ಆಗ್ರಹಿಸಿದರು.

Siddaramaiah : ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್‌..! #byvijayendra #bsyediyurappa
Tags: CM SiddaramaiahDCM DK ShivakumarKarnatakaKarnataka PoliticsMGNREGAPoliticsVB-G RAM G 2025vb-g ram-g
Previous Post

ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ : ಹೈಕಮಾಂಡ್‌ಗೆ “ಕೈ” ಶಾಸಕರು ಪತ್ರ ಬರೆದಿದ್ದೇಕೆ..?

Next Post

“ವಾಹನ ಸವಾರರ ಜೊತೆ ಸಾರಿಗೆ ಇಲಾಖೆಯ ಅಧಿಕಾರಿಗಳ ದುರ್ನಡತೆ ನಿಲ್ಲಲಿ”

Related Posts

‘ವಿಐಪಿ ಸಂಸ್ಕೃತಿಗೆ ಗುಡ್‌ಬೈ’ : ಸಿಎಂ ವಿಜಯ್‌ರಿಂದ ಸರ್ಕಾರಿ ಕಚೇರಿಗಳಲ್ಲಿ ಈ  ಪದ್ಧತಿಗೆ ತೆರೆ
Uncategorized

‘ವಿಐಪಿ ಸಂಸ್ಕೃತಿಗೆ ಗುಡ್‌ಬೈ’ : ಸಿಎಂ ವಿಜಯ್‌ರಿಂದ ಸರ್ಕಾರಿ ಕಚೇರಿಗಳಲ್ಲಿ ಈ  ಪದ್ಧತಿಗೆ ತೆರೆ

by ಪ್ರತಿಧ್ವನಿ
May 16, 2026
0

ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗೆ ಚಾಲನೆ ನೀಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರ ಕುರ್ಚಿಗಳಿಗೆ ಬಿಳಿ...

Read moreDetails
BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

May 15, 2026
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

May 14, 2026
ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

May 14, 2026
Next Post
“ವಾಹನ ಸವಾರರ ಜೊತೆ ಸಾರಿಗೆ ಇಲಾಖೆಯ ಅಧಿಕಾರಿಗಳ ದುರ್ನಡತೆ ನಿಲ್ಲಲಿ”

"ವಾಹನ ಸವಾರರ ಜೊತೆ ಸಾರಿಗೆ ಇಲಾಖೆಯ ಅಧಿಕಾರಿಗಳ ದುರ್ನಡತೆ ನಿಲ್ಲಲಿ"

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada