
ಎರಡು ವರ್ಷದ ಹಿಂದೆ ಅಪರ್ಣಾಗೆ ಕ್ಯಾನ್ಸರ್ ಇದೆ ಅನ್ನೋದು ಗೊತ್ತಾಯ್ತು. ಕ್ಯಾನ್ಸರ್ ಇದೆ ಅನ್ನೋದು ಗೊತ್ತಾದಾಗ ಕ್ಯಾನ್ಸರ್ 4ನೇ ಸ್ಟೇಜ್‌ನಲ್ಲಿ ಇದ್ದಾಗ ನಮಗೆ ಗೊತ್ತಾಗಿದ್ದು. ಫೆಬ್ರವರಿ ತನಕ ಅಪರ್ಣಾ ಛಲದಿಂದ ಹೋರಾಡಿದಳು. ಬದುಕುವುದು ಕಷ್ಟ ಎಂದು ವೈದ್ಯರು ಹೇಳಿಬಿಟ್ಟರು. ಆದರೂ ಕ್ಯಾನ್ಸರ್ ವಿರುದ್ಧ ಅಪರ್ಣಾ ಹೋರಾಟ ಮಾಡಿದಳು.

ನಾವಿಬ್ಬರೂ ಜಂಟಿಯಾಗಿ ಕ್ಯಾನ್ಸರ್ ವಿರುದ್ಧ ಸೋಲು ಕಂಡಿದ್ದೇವೆ. ಅವಳ ಕಡೆಯ ಆಸೆ ಮಾಧ್ಯಮಗಳ ಮುಂದೆ ಎಲ್ಲವನ್ನು ಹೇಳಿಕೊಳ್ಳಲು ಕೇಳಿಕೊಂಡಿದ್ದಳು. ಬರುವ ಅಕ್ಟೋಬರ್‌ಗೆ 58 ವರ್ಷ ಪೂರ್ಣ ಆಗ್ತಿತ್ತು. ರಾತ್ರಿ 9.30ರ ಸುಮಾರಿಗೆ ಅಪರ್ಣಾ ನಮ್ಮನ್ನು ಅಗಲಿದ್ದಾಳೆ.

ಬೆಳಗ್ಗೆ 7.30 ಹೊತ್ತಿಗೆ ಮನೆಗೆ ಕರೆದುಕೊಂಡು ಬರುತ್ತೇವೆ. ಅಂತಿಮ ದರ್ಶನಕ್ಕೆ ಮನೆಯ ಬಳಿ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ. ಅಪರ್ಣಾ ಸಾವಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕನ್ನಡದ ಹಿರಿಯ ನಿರ್ಮಾಪಕ ಟಿ .ಎನ್ ಸೀತಾರಾಮ್, ಗಿರಿಜಾ ಲೋಕೇಶ್, ,ಮಂಡ್ಯ ರಮೇಶ್, ಶ್ವೇತಾ ಚಂಗಪ್ಪ ಸೇರಿದಂತೆ ಅಪರ್ಣಾ ಜೊತೆಗೆ ವೇದಿಕೆ ಹಂಚಿಕೊಂಡಿರುವ ಹಲವಾರು ನಟ, ನಟಿಯರು ಹಾಗು ಕನ್ನಡದ ಹಿರಿಯ ಪತ್ರಕರ್ತರು ಅಪರ್ಣಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.