ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ (Electronic city) ಲ್ಲಿ ನಡೆದ ರೇವ್ ಪಾರ್ಟಿಗೆ (Rev party) ಐವರು ಆರೋಪಿಗಳನ್ನ ಬಂಧಿಸಿ ಅವ್ರನ್ನ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಈ ಐವರಲ್ಲಿ ಮೂವರು ಡ್ರಗ್ ಪೆಡ್ಲರ್‌ಗಳನ್ನ (Drug pedlers) ಪಡೆಯಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ಸಿದ್ದಿಕ್, ರಣಧೀರ್, ರಾಜ್ ಭಾವ ಈ ಮೂವರು ಪ್ರತಿಷ್ಟಿತ ರೇವ್ ಪಾರ್ಟಿಗಳಿಗೆ ಡ್ರಗ್ಸ್ ಸಪ್ಪೆ (Drug supply). ಹೀಗಾಗಿ ಇವ್ರನ್ನ ಕಸ್ಟಡಿಗೆ ಪಡೆದು, ಹೆಚ್ಚಿನ ತನಿಖೆ ನಡೆಸೋಕೆ ಪೊಲೀಸರು ಮುಂದಾಗಿದ್ದಾರೆ.
ಅಷ್ಟೇ ಅಲ್ಲದೇ ಈ ಹಿಂದೆ ಎಲ್ಲೆಲ್ಲಿ ಈ ಪೆಡ್ಡರ್‌ಗಳು ಇಂಥ ರೇವ್ ಪಾರ್ಟಿಗಳನ್ನ ಆಯೋಜನೆ ಮಾಡಿದ್ದರು, ಆ ಪಾರ್ಟಿಗಳಿಗೆ ಯಾರೆಲ್ಲಾ ಬಂದಿದ್ರು, ಇವರ ಜೊತೆಗೆ ಯಾವೆಲ್ಲಾ ಸೆಲೆಬ್ರೆಟಿಗಳು (Celebrities) ರೇವ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ರು ಎಂಬ ಮಾಹಿತಿಯನ್ನೂ ಕಲೆಹಾಕಲು ಮುಂದಾಗಿದ್ದು, ಕೇಸ್ ಗಂಭೀರತೆ ಪಡೆದುಕೊಳ್ಳೋ ಸಾಧ್ಯತೆಯಿದೆ.