ರೆಬೆಲ್ ಸ್ಟಾರ್ ಅಂಬರೀಶ್ (Rebel star Ambareesh) ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಹೌದು ಅಂಬಿ ಕುಟುಂಬಕ್ಕೆ ಎಂಟ್ರಿ ಕೊಟ್ಟಿರುವ ಮರಿ ಅಂಬರೀಶ್, ಮೊಮ್ಮಗನ ನಾಮಕರಣ ಇಂದು ಬೆಂಗಳೂರಿನ (Bengaluru ) ಪ್ರತಿಷ್ಟಿತ ಹೋಟೆಲ್‌ನಲ್ಲಿ ನಡೆಯಲಿದ್ದು ಹಲವಾರು ಗಣ್ಯರು, ನಟ ನಟಿಯರು ಆಗಮಿಸುತ್ತಿದ್ದಾರೆ.

ಆದ್ರೆ ಈಗ ಹಿಸ ಚರ್ಚೆ ಆರಂಭವಾಗಿದ್ದು, ಈ ನಾಮಕರಣದ ಕಾರ್ಯಕ್ರಮದಲ್ಲಿ ನಟ ದರ್ಶನ್ (Actor darshan) ಭಾಗಿ ಆಗ್ತಾರಾ ಇಲ್ವಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಮೊನ್ನೆ ಮೊನ್ನೆಯಷ್ಟೇ ನಡೆದ ಬೆಳವಣಿಗೆ.
ಹೌದು ಕೆಲವು ದಿನಗ ಮುಂಚೆ ನಟ ದರ್ಶನ್ ತಮ್ಮ ಇನ್ಸ್ಟಾಗ್ರಾಂ (Instagram) ಖಾತೆಯಿಂದ ನಟಿ ಸುಮಲತಾ, ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ (Aviva) ಅವರನ್ನು ಅನ್‌ಫಾಲೋ ಮಾಡಿ ಭಾರೀ ಸುದ್ದಿಯಾಗಿದ್ದರು.

ಆ ಬಳಿಕ ಸುಮಲತಾ ಅವರ ಪೋಸ್ಟ್ ಒಂದು ಭಾರೀ ವೈರಲ್ ಆಗಿತ್ತು . ಈ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸುಮಲತಾ ಅವರು, ನನ್ನ ಪೋಸ್ಟ್ ದರ್ಶನ್ ಕುರಿತು ಆಗಿರಲಿಲ್ಲ ಎಂದು ಹೇಳಿದ್ದರು. ಆದ್ರೆ ದರ್ಶನ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.ಈ ಕಾರಣದಿಂದ ಅಂಬರೀಶ್ ಕುಟುಂಬದ ಮೇಲೆ ದರ್ಶನ್ ದೂರವಾಗಿದ್ದಾರೆ ಎಂಬ ಚರ್ಚೆಯಿದೆ.