ರೇವ್ ಪಾರ್ಟಿಯಲ್ಲಿ ನಾನು ಭಾಗವಹಿಸಿಯೇ ಇಲ್ಲ ಎಂದು ವಿಡಿಯೋ ಹೇಳಿಕೆ ಹರಿಬಿಟ್ಟ ನಟಿ ಹೇಮಾಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ನಾನು ಹೈದರಾಬಾದ್‍ನಲ್ಲಿ ಇದ್ದೇನೆ. ಎಲ್ಲಿಯೂ ಹೋಗಿಲ್ಲ. ರೇವ್ ಪಾರ್ಟಿಯ ಎಲ್ಲ ಸುದ್ದಿಗಳು ಫೇಕ್ ಎಂದಿದ್ದ ಹೇಮಾಗೆ ನೋಟಿಸ್ ನೀಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್‍ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 27ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ.
ರೇವ್ ಪಾರ್ಟಿ ವಿಚಾರ ಬಯಲಾಗುತ್ತಿದ್ದಂತೆ ನಟಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ವೀಡಿಯೋದಲ್ಲಿ ನಾನು ಹೈದರಾಬಾದ್‍ನಲ್ಲಿ ಇರುವುದಾಗಿ ಹೈಡ್ರಾಮಾ ಮಾಡಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಹೇಮಾ ಡ್ರಗ್ಸ್ ಪಾರ್ಟಿಯಲ್ಲಿರುವುದನ್ನು ಖಚಿತ ಪಡಿಸಿದ್ದರು. ಹೇಮಾ ರಕ್ತದ ಮಾದರಿ ಪಡೆದು ಕಳುಹಿಸಲಾಗಿದೆ. ಸ್ಟೇಷನ್ ಬೇಲ್ ಮೇಲೆ ಹೇಮಾರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದರು. ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು.