ಬಿಟ್ ಕಾಯಿನ್ (Bit coin), ಕ್ರಿಪ್ಟೋ ಕರೆನ್ಸಿ (Crypto currency) ಹಗರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಸೇರಿದಂತೆ ದೇಶದ 60 ಕಡೆ ಸಿಬಿಐ (CBI) ದಾಳಿ ನಡೆಸಿದೆ. ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್ ಸಿಆರ್, ನಾಂದೇಡ್, ಕೊಲ್ಲಾಪುರ ಸೇರಿ ಹಲವೆಡೆ ದಾಳಿ ನಡೆಸಿ ಶೋಧಕಾರ್ಯಕ್ಕೆ ಮುಂದಾಗಿದೆ.

ಈ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆಗೆ ಮುಂದಾಗಿದ್ದಾರೆ. ಬಿಟ್ ಕಾಯಿನ್, ಕ್ರಿಫ್ಟೋ ಕರೆನ್ಸಿ ಹಗರಣ ಸಂಬಂಧ ದೇಶದ ಹಲವು ರಾಜ್ಯಗಳಲ್ಲಿ ಎಫ್ಐಆರ್ ದಾಖಲಾಗಿತ್ತು.ಇದಾದ ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.ದೊಡ್ಡ ಮಟ್ಟದ ವಂಚನೆ ಹಾಗೂ ಮನಿ ಲಾಂಡರಿಂಗ್ ಆರೋಪದ ಹಿನ್ನೆಲೆಹಗರಣ ಸಂಬಂಧ ಸಿಬಿಐ ತನಿಖೆ ಕೈಗೊಂಡಿದೆ.

ಈ ಸಂಬಂಧ ನಿನ್ನೆ ಬೆಂಗಳೂರು ಸೇರಿ 60 ಕಡೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ನಡೆಸಲಾಗಿದೆ. ಈ ದಾಳಿ ವೇಳೆ ಕ್ರಿಪ್ಟೋ ವ್ಯಾಲೆಟ್‌ಗಳು, ಡಿಜಿಟಲ್ ಸಾಕ್ಷ್ಯಗಳು, ಡಿಜಿಟಲ್ ಸಾಧನಗಳು ಪತ್ತೆಯಾಗಿದೆ.ಇಮೇಲ್ ಮತ್ತು ಕ್ಲೌಡ್‌ನಲ್ಲಿದ್ದ ಸಾಕ್ಷ್ಯಗಳು ವಶಕ್ಕೆ ಪಡೆಯಲಾಗಿದೆ.