ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ (Sandeshkhali) ಸಿಬಿಐ ದಾಳಿ ನಡೆಸಿರುವುದನ್ನು ಖಂಡಿಸಿ, ಟಿಎಂಸಿ ಪಕ್ಷ ತನಿಖಾ ತಂಡದ ವಿರುದ್ಧವೇ ದೂರು ಸಲ್ಲಿಸಿದೆ.
ಸಿಬಿಐ ಕಾರ್ಯಚರಣೆಯನ್ನೇ ಮಮತಾ ಪ್ರಶ್ನಿಸಿದ್ದಾರೆ. ಅಧಿಕಾರಿಗಳೇ ಶಸ್ತ್ರಾಸ್ತ್ರಗಳನ್ನು ತಂದು, ಅಲ್ಲಿಟ್ಟು ಆರೋಪ ಮಾಡುತ್ತಿರಬಹುದು. ಈ ಕುರಿತು ನಮಗೆ ಅನುಮಾನವಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಆದರೆ, ಟಿಎಂಸಿಯನ್ನು ಭಯೋತ್ಪಾದಕ ಸಂಘಟನೆಗೆ ಹೋಲಿಸಿರುವ ಬಿಜೆಪಿ, ಮಮತಾ ಬ್ಯಾನರ್ಜಿಯನ್ನು (Mamata Banerjee) ಬಂಧಿಸಿ ಎಂದು ಮನವಿ ಮಾಡಿದೆ.
ಇನ್ನೊಂದೆಡೆ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಿಷ್ಣೋಪುರದ ಭದ್ರತಾ ಪಡೆಗಳ ಶಿಬಿರದ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದ ಮಿಲಿಟೆಂಟ್‌ಗಳು ಸತತ 2 ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಿವೆ. ಹಿಂಸಾಚಾರದ ವೇಳೆ ಸಿಆರ್‌ಪಿಎಫ್ ಯೋಧರು ಸಹ ಪ್ರತಿದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸಿಆರ್‌ಪಿಎಫ್ ಹಾಗೂ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ.