ಡಿಎಲ್ಎಫ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಅಪರಾಧ ತನಿಖಾದಳ (ಸಿಬಿಐ)ನ ಆರ್ಥಿಕ ಅಪರಾಧ ಶಾಖೆಯ ಮೂಲಗಳ ಪ್ರಕಾರ 2018 ರ ಜನವರಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಲಾಲು ಪ್ರಸಾದ್ ಯಾದವ್ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಡಿಎಲ್ಎಫ್ ಗ್ರೂಪ್ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿಸಲಾಗಿತ್ತು.
ಏನಿದು ಡಿಎಲ್‌ಎಫ್ ಲಂಚ ಪ್ರಕರಣ
ಮುಂಬೈನ ಬಾಂದ್ರಾದಲ್ಲಿ ರೈಲ್ವೆ ಭೂ ಮತ್ತು ನವದೆಹಲಿ ರೈಲ್ವೆ ನಿಲ್ದಾಣದ ನವೀಕರಣ ಯೋಜನೆಗಳನ್ನು ಪಡೆಯುವ ಉದ್ದೇಶವನ್ನು ಡಿಎಲ್ಎಫ್ ಗ್ರೂಪ್ ಹೊಂದಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿ ಪ್ರದೇಶದಲ್ಲಿನ ಆಸ್ತಿಯನ್ನು ಡಿಎಲ್ ಎಫ್ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಗೆ ಲಂಚ ರೂಪದಲ್ಲಿ ನೀಡಿರುವುದಾಗಿ ವರದಿ ತಿಳಿಸಿತ್ತು.
ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿಯಲ್ಲಿನ 30 ಕೋಟಿ ಬೆಲೆಯ ಡಿಎಲ್‌ಎಫ್ ಗ್ರೂಪ್‌ನ ಆಸ್ತಿಯನ್ನು ರೈಲ್ವೆ ಸಚಿವ ಲಾಲು ಪ್ರಸಾದ್ ಕುಟುಂಬದವರು 4 ಲಕ್ಷ ರೂಗಳ ಶೇರ್ ವರ್ಗಾವಣೆ ಮಾಡಿಕೊಳ್ಳುವುದರ ಮೂಲಕ ಕಂಪನಿಯೊಂದನ್ನು ಪಡೆದುಕೊಂಡಿದ್ದರು. ಈ ಸಂಬಂಧ ಭ್ರಷ್ಟಾಚಾರ ಆರೋಪದ ಮೇಲೆ ಲಾಲು ಪ್ರಸಾದ್ ಯಾದವ್ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಡಿಎಲ್ಎಫ್ ಗ್ರೂಪ್ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆಯನ್ನು ಆರಂಭಿಸಲಾಗಿತ್ತು. ಎರಡು ವರ್ಷಗಳ ತನಿಖೆಯ ನಂತರ ಆರೋಪಕ್ಕೆ ಸಂಬಂಧಿಸಿದ ಪೂರಕ ಕೇಸ್ ಇಲ್ಲದ ಕಾರಣ ಪ್ರಾಥಮಿಕ ತನಿಖೆ ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತ ಬಿಹಾರದ ಮೇವು ಹಗರಣ ಸಂಬಂಧ ಜೈಲು ಸೇರಿದ ಲಾಲು ಪ್ರಸಾದ್ ಯಾದವ್ ಕಳೆದ ಏಪ್ರಿಲ್‌ನಿಂದ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.