
ಜಾತಿ ಜನಗಣತಿಯನ್ನ ಬಿಜೆಪಿಯವ್ರು ಆರಂಭದಿಂದ್ಲೂ ವಿರೋಧ ಮಾಡ್ತಿದ್ದಾರೆ. ಈಗಲೂ ಜಾತಿಜನಗಣತಿಯನ್ನ ಒಪ್ಪಲ್ಲ ಅಂತ ಕಡ್ಡಿಮುರಿದ ಹಾಗೆ ಮಾತಾಡ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳೋಕೆ ಜಾತಿ ಜನಗಣತಿ ಅಂತಿದ್ದಾರೆ.. ಜಾತಿ ಜನಗಣತಿನೂ ಜಾರಿಯಾಗಲ್ಲ.. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿನೂ ಇರಲ್ಲ ಅಂತ ಬಿಜೆಪಿ ನಾಯಕರು ನೇರಾನೇರ ವಾಗ್ದಾಳಿನೂ ಮಾಡಿದ್ದಾರೆ.. ಬಿಜೆಪಿ ನಾಯಕರು ಸಭೆ ಸೇರ್ತಿದ್ದು, ಜಾತಿ ಜನಗಣತಿ ಜಾರಿಗೆ ಸರ್ಕಾರ ಮುಂದಾದ್ರೆ ಅದನ್ನ ಹೇಗೆ ಕಟ್ಟಿಹಾಕಬೇಕು, ಹೇಗೆ ಹೋರಾಟ ನಡೆಸ್ಬೇಕು ಅನ್ನೋದನ್ನ ಇಂದಿನ ಸಭೆಯಲ್ಲಿ ನಿರ್ಣಯ ಮಾಡಲಿದ್ದಾರೆ..

ಇನ್ನು ರಾಜ್ಯ ರಾಜಕೀಯದಲ್ಲಿ ಜಾತಿ ಜನಗಣತಿ ವಾರ್ ಮುಂದುವರೆದಿದೆ. ಜಾತಿಗಣತಿ ವಿಚಾರವಾಗಿ ಮಾತ್ನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಕಾಂತರಾಜು ವರದಿ ಸರಿಯಿಲ್ಲ ಅಂತಾ ಕಾಂಗ್ರೆಸ್ ಪಕ್ಷದವ್ರೇ ಶೇಕಡ 60ರಷ್ಟು ಜನರು ಹೇಳ್ತಿದ್ದಾರೆ.. ಇದು ಕಾಗಕ್ಕ ಗೂಬಕ್ಕನ ವರದಿಯಾಗಿದೆ.. ಪ್ರಾಮಾಣಿಕವಾಗಿ ವರದಿಯನ್ನ ಮಾಡಿಲ್ಲವೆಂದು .. ವರದಿಯನ್ನ ತಿರಸ್ಕಾರ ಮಾಡಿ ಎಂದು ಸೋಮಣ್ಣ ಹೇಳಿದ್ದಾರೆ..

ಆರ್ ಅಶೋಕ್ ಮಾತನಾಡಿ, ಕಾಂತರಾಜು ವರದಿಗೆ ಕಾಂತರಾಜನೇ ಸೈನ್ ಹಾಕಿಲ್ಲ. ಆ ಕಾಂತರಾಜನ ಮುಖದಲ್ಲಿ ಕಾಂತಿಯೇ ಇಲ್ಲ. ಎಲ್ಲ ಸಿದ್ದರಾಮಯ್ಯ ಮಾಡಿಸಿರೋದು. ಜಾತಿಗಣತಿಗೆ ಪ್ರೊಡ್ಯುಸರ್ ಡೈರೆಕ್ಟರ್ ಎಲ್ಲವೂ ಸಿದ್ದರಾಮಯ್ಯ ಅವರದ್ದು. ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದು ತೋರಿಸಿದ್ದಾರೆ. ಎಲ್ಲಾ ಹಲಾಲ್ ಕಟ್ ಮಾಡಿ ಜನಸಂಖ್ಯೆ ಕಡಿಮೆ ಮಾಡಿದ್ದಾರೆ. ರೆಡ್ಡಿ, ಲಿಂಗಾಯತ ಬೇರೆ ಅವರು ಬೇರೆ. ಇವರು ಬೇರೆ ಮಾಡಿದ್ದಾರೆ. ಕೂಡು ಒಕ್ಕಲಿಗರು, ಸರ್ಪ ಒಕ್ಕಲಿಗರು, ಹಳ್ಳಿಕಾರ್ ಒಕ್ಕಲಿಗರನ್ಬ ಬೇರೆ ಮಾಡಿದ್ದಾರೆ. ಹೀಗೆ ವಿಭಜಿಸಿ ನಮ್ಮ ಸಂಖ್ಯೆ ಕಡಿಮೆ ಮಾಡಿದ್ದಾರೆ ಎಂದಿದ್ದಾರೆ. ಸಿದ್ದರಾಮಯ್ಯ ಕರ್ನಾಟಕವನ್ನ ಮಿನಿ ಪಾಕಿಸ್ತಾನ ಮಾಡಲು ಯಾವ ರೀತಿ ತಯಾರು ಮಾಡಬೇಕೋ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
