• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟ ಜಾತಿ ಗಣತಿ ಮೂಲ ವರದಿ ನಾಯತ್ತೆ!

Any Mind by Any Mind
November 23, 2023
in ಕರ್ನಾಟಕ
0
ಡಿಕೆಶಿ ವಿರೋಧದ ನಡುವೆಯೂ ‘ಜಾತಿ ಗಣತಿ’ ಜಾರಿಗೆ ಮುಂದಾದ ಸಿದ್ದರಾಮಯ್ಯ: ಸರ್ಕಾರದೊಳಗೇ ಪರ-ವಿರೋಧ!
Share on WhatsAppShare on FacebookShare on Telegram

ADVERTISEMENT

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವ ಸಲುವಾಗಿ ಮಾಡಲಾಗಿರುವ ಜಾತಿ ಗಣತಿ ಸಮೀಕ್ಷೆಯ ಹಸ್ತ ಪ್ರತಿ (ಮೂಲಪ್ರತಿ)ಯೇ ನಾಪತ್ತೆ ಆಗಿರುವುದು ಕೆಲವು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಾಮಾಜಿಕ ಮತ್ತು ಆರ್ಥಿಕ ಬಲವರ್ಧನೆಯ ಭಾಗವಾಗಿ ೨೦೧೫ರಲ್ಲಿ ಆಗಿನ ಸಿದ್ದರಾಮಯ್ಯ ಅವರ ಸರ್ಕಾರ ಜಾತಿ ಗಣತಿಗೆ ಆದೇಶ ಹೊರಡಿಸಿತು.

೨೦೧೫ರಲ್ಲಿ ಕೈಗೊಳ್ಳಲಾದ ಜಾತಿ ಗಣತಿ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರ ಕಾರ್ಯಾವಧಿ ಇದೇ ನವೆಂಬರ್‌ ೨೬ರಂದು ಅಂತ್ಯವಾಗಲಿದೆ.

ಜಾತಿ ಗಣತಿ ವರದಿ ತಯಾರಿಕೆಗೆ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಈಗಿರುವ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸುವಂತೆ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ವರದಿ ನೀಡುವವರೆಗೆ ಆಯೋಗದ ಅವಧಿ ವಿಸ್ತರಣೆಗೆ ನಿರ್ಧರಿಸಲಾಗಿದೆ ಎಂದು ಸಿಎಂ ಅವರೂ ಹೇಳಿದ್ದಾರೆ.

ಆದರೆ ಜಾತಿ ಸಮೀಕ್ಷೆ ಕುರಿತ ವರದಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಹೊತ್ತಲ್ಲೇ ಕೆಲವು ಪ್ರಮುಖ ಪ್ರಶ್ನೆಗಳು ಕೇಳಲೇ ಬೇಕಿದೆ.

ಒಟ್ಟು ಸರ್ಕಾರಿ ವ್ಯವಸ್ಥೆ ನಡೆಯುತ್ತಿರುವ ರೀತಿ, ಸರ್ಕಾರದಲ್ಲಿ ಆಡಳಿತಾತ್ಮಕ ಗೌಪ್ಯತೆ ಕಾಪಾಡಬೇಕಾದ ಹಿನ್ನೆಲೆಯಲ್ಲಿ ನಾವು ಈ ಪ್ರಶ್ನೆಗಳು ಕೇಳಬೇಕು.

೨೦೨೧ರ ಆಗಸ್ಟ್‌ ೨೬ರಂದು ಆಗಲೂ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್‌ ಹೆಗ್ಡೆ ಮತ್ತು ಆಯೋಗದ ಸದಸ್ಯ ಕಾರ್ಯದರ್ಶಿ ಕೆ ಎ ದಯಾನಂದ ಅವರು ಕಾಂತರಾಜು ಆಯೋಗ ಸಿದ್ಧಪಡಿಸಿದ್ದ ವರದಿಯನ್ನು ಇಡಲಾಗಿದ್ದ ಮುಚ್ಚಿದ ಪೆಟ್ಟಿಗೆಗಳನ್ನು ತೆರೆದಾಗ ಅಂಕಿಅಂಶಗಳನ್ನು ಒಳಗೊಂಡ ಮುದ್ರಿತ ಪುಸ್ತಕಗಳು ಮತ್ತು ಮುಖ್ಯ ವರದಿಯ ಮುದ್ರಿತ ಪ್ರತಿ ಹಾಗೂ ಎರಡು ಸಿಡಿಗಳು ಇದ್ದವು.

ಆದರೆ ಒಂದೂವರೆ ತಿಂಗಳ ಬಳಿಕ ಅಂದರೆ ಅಕ್ಟೋಬರ್‌ ೫ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದ ಜಯಪ್ರಕಾಶ್‌ ಹೆಗ್ಡೆ ಅವರು ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಮುಚ್ಚಿದ ಪೆಟ್ಟಿಗೆಯಲ್ಲಿ ಲಭ್ಯ ಇಲ್ಲ.

ಅಲ್ಲದೇ ಮುದ್ರಿತ ಮುಖ್ಯ ವರದಿಯ ಪ್ರತಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿಯೂ ಇಲ್ಲ. ಹೀಗಾಗಿ ಹಸ್ತಪ್ರತಿಯನ್ನು ತಕ್ಷಣ ಆಯೋಗದ ಕಚೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲು ಸೂಚಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟನೆ ಕೋರಿದ್ದರು.

ಇದಾದ ಬಳಿಕ ಮರು ವರ್ಷ ಅಂದರೆ ೨೦೨೨ರ ಮಾರ್ಚ್‌ ೫ರಂದು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿರುವ ಕೆ ಎ ದಯಾನಂದ್‌ ಅವರು ಆಯೋಗ ಈ ಹಿಂದಿನ ಸದಸ್ಯ ಕಾರ್ಯದರ್ಶಿ ಎನ್‌ ವಿ ಪ್ರಸಾದ್‌ ಅವರಿಗೆ ಪತ್ರವನ್ನು ಬರೆಯುತ್ತಾರೆ.

ಮುಖ್ಯ ವರದಿಯ ಮೂಲ ಹಸ್ತಪ್ರತಿ ಕಚೇರಿಯಲ್ಲಿ ಲಭ್ಯ ಇಲ್ಲ. ವರದಿಯ ಝೆರಾಕ್ಸ್‌ ಪ್ರತಿಯ ಕುರಿತು ಯಾವುದೇ ಪತ್ರ ವ್ಯವಹಾರವಾಗಿಲ್ಲ. ಹೀಗಾಗಿ ಈ ಬಗ್ಗೆ ಹೆಚ್ಚಿನ ವಿವರಗಳ ಸಹಿತ ತಮ್ಮ ಅಭಿಪ್ರಾಯವನ್ನು ಆಯೋಗಕ್ಕೆ ನೀಡಬೇಕು ಎಂದು ಪತ್ರದಲ್ಲಿ ಬರೆಯುತ್ತಾರೆ.

ಯತ್ನಾಳ್‌ ಟ್ವೀಟ್‌:

ಹಸ್ತಪ್ರತಿ ಅಥವಾ ವರ್ಕ್‌ಶೀಟ್‌ ನಾಪತ್ತೆ ವರದಿ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

2015 ರಲ್ಲಿ ಕರ್ನಾಟಕ ಸರ್ಕಾರ 180 ಕೋಟಿ ಖರ್ಚು ಮಾಡಿ ಮಾಡಿದ ಸಮೀಕ್ಷೆಯ ಮೂಲ ಪ್ರತಿಯೇ ಕಳೆದುಹೋಗಿರುವುದು ಹಾಗು ಲಭ್ಯವಿರುವ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದೆ ಇರುವುದು ಆಯೋಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹಿಂದುಳಿದ ವರ್ಗಗಳ ಆಯೋಗ ಹಿಂದಿನ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯವರಿಗೆ ನೋಟಿಸ್ ನೀಡಿ ನಂತರ ರಾಜಕೀಯ ಒತ್ತಡಕ್ಕೆ ಮಣಿದು ತನಿಖೆಯನ್ನೇ ಅರ್ಧಕ್ಕೆ ಕೈಬಿಟ್ಟಿರುವುದು ಆಶ್ಚರ್ಯದ ಸಂಗತಿ.

ಈ ಕೂಡಲೇ ವರದಿ ನೈಜತೆಯ ಬಗ್ಗೆ ತನಿಖೆ ಮಾಡಬೇಕು ಹಾಗು ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು

ಎಂದು ಯತ್ನಾಳ್‌ ಕಿಡಿಕಾರಿ ಆಗ್ರಹಿಸಿದ್ದಾರೆ.

೧೬೮ ಕೋಟಿ ರೂಪಾಯಿ ವೆಚ್ಚದೊಂದಿಗೆ ಮಾಡಲಾದ ಅತ್ಯಂತ ಮಹತ್ವಪೂರ್ಣ ಜಾತಿ ಗಣತಿ ವರದಿ ಹಿನ್ನೆಲೆಯಲ್ಲಿ ಕೇಳಬೇಕಿರುವ ಪ್ರಶ್ನೆಗಳು:

ಪ್ರಶ್ನೆ ೧:

ಜಾತಿ ಸಮೀಕ್ಷೆಯ ಹಸ್ತ ಪ್ರತಿ ಅಥವಾ ಮೂಲ ಪ್ರತಿ ನಾಪತ್ತೆಯಾಗಿದ್ದು ಅಥವಾ ಕಳುವಾಗಿದ್ದು ಯಾರ ಅವಧಿಯಲ್ಲಿ..? ೨೦೧೮ಕ್ಕೋ ಮೊದಲೋ, ೨೦೧೯ಕ್ಕೂ ಮೊದಲೋ ಅಥವಾ ೨೦೧೯ರ ನಂತರವೋ..?

ಪ್ರಶ್ನೆ ೨:

ಸರ್ಕಾರದ ದಾಖಲೆಯಾಗಿರುವ ಸಮೀಕ್ಷಾ ವರದಿ ಸರ್ಕಾರ ಬಳಿಯಿಂದಲೇ ನಾಪತ್ತೆ ಆಗಲು ಹೇಗೆ ಸಾಧ್ಯ..? ಈ ಕೃತ್ಯ ನಡೆಸಿದವರು ಯಾರು..?

ಪ್ರಶ್ನೆ ೩:

ಮೂಲ ಪ್ರತಿ ಅಥವಾ ಹಸ್ತ ಪ್ರತಿ ನಾಪತ್ತೆಯಾಗಿದೆ ಎಂದು ೨೦೨೧ರಲ್ಲೇ ಆಯೋಗದ ಅಧ್ಯಕ್ಷರೇ ಖುದ್ದು ಪತ್ರ ಬರೆದರೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆ ಬಗ್ಗೆ ಯಾಕೆ ತನಿಖೆಗೆ ಆದೇಶ ನೀಡಲಿಲ್ಲ..?

ಪ್ರಶ್ನೆ ೪:
ರಾಜ್ಯ ಸರ್ಕಾರದ ಬಳಿಯೇ ಇರಬೇಕಿದ್ದ ಮೂಲ ಪ್ರತಿ ಅಥವಾ ಹಸ್ತ ಪ್ರತಿ ನಾಪತ್ತೆಯಾಗಿದ್ದರೂ ಯಾಕೆ ಆ ಬಗ್ಗೆ ಯಾಕೆ ಸರ್ಕಾರ ಪ್ರಕರಣ ದಾಖಲಿಸಲಿಲ್ಲ..?

ಪ್ರಶ್ನೆ ೫:

ಜಾತಿ ಸಮೀಕ್ಷಾ ಮೂಲ ಪ್ರತಿ ನಾಪತ್ತೆಯಾಗಿದೆ ಎಂಬ ಮಾಹಿತಿ ಇದ್ದರೂ ಆಗಿನ ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಕ್ರಮಕೈಗೊಳ್ಳದೇ ಸುಮ್ಮನಿದ್ದಿದ್ದು ಯಾಕೆ..?

ಪ್ರಶ್ನೆ ೬:

ಮೂಲ ಪ್ರತಿ ನಾಪತ್ತೆಯಾಗಿದ್ದರ ಬಗ್ಗೆ ಬಗ್ಗೆ ಮಾಹಿತಿ ಕೇಳಿದ್ದರೂ ಪ್ರತಿಕ್ರಿಯೆ ನೀಡದ ಐಎಎಸ್‌ ಅಧಿಕಾರಿ ಎನ್‌ ವಿ ಪ್ರಸಾದ್‌ ವಿರುದ್ಧ ಆಗಿನ ಬಿಜೆಪಿ ಸರ್ಕಾರ ಕ್ರಮಕೈಗೊಳ್ಳದೇ ಸಾರಿಗೆ ಇಲಾಖೆ ಕಾರ್ಯದರ್ಶಿಯಂತ ಪ್ರಮುಖ ಹುದ್ದೆಯನ್ನೇ ಕೊಟ್ಟು ರಕ್ಷಣೆ ಮಾಡಿದ್ದು ಯಾಕೆ..?

ಪ್ರಶ್ನೆ ೭:

ಸಾಮಾಜಿಕ ಮತ್ತು ಆರ್ಥಿಕ ಬಲವರ್ಧನೆಯ ಹಿನ್ನೆಲೆಯಲ್ಲಿ ನಡೆಸಲಾದ ಜಾತಿ ಸಮೀಕ್ಷ ವರದಿ ಜಾರಿಗೆ ಕೇವಲ ಐಎಎಸ್‌ ಅಧಿಕಾರಿಯೊಬ್ಬರು ಅಡ್ಡಗಾಲುವಷ್ಟರ ಮಟ್ಟಿಗೆ ಬಿಜೆಪಿ ಸರ್ಕಾರ ದುರ್ಬಲವಾಗಿತ್ತೇ..?

ಪ್ರಶ್ನೆ ೮:

ಸರ್ಕಾರದ ಕಡತಗಳೇ ಸರ್ಕಾರದಿಂದ ಕಾಣೆಯಾಗಿವೆ ಎನ್ನುವುದಾರೆ ಬಿಜೆಪಿ ಸರ್ಕಾರ ಎಷ್ಟರ ಮಟ್ಟಿಗೆ ಬಿಗಿಯಾಗಿತ್ತು..?

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

PSI ಪರೀಕ್ಷೆ ಬೆಂಗಳೂರಲ್ಲಿ ಮಾತ್ರ ಪರೀಕ್ಷೆ.. ಯಾರಿಗೆಲ್ಲಾ ಸಿಗುತ್ತೆ ಚಾನ್ಸ್‌..?

Next Post

ಕಂಬಳ ಹಿನ್ನೆಲೆ 3 ದಿನ ಭಾರಿ ಟ್ರಾಫಿಕ್ ಜಾಮ್ : ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚರಿಸಬೇಡಿ!

Related Posts

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?
Top Story

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

by ಪ್ರತಿಧ್ವನಿ
December 14, 2025
0

ಬೆಂಗಳೂರು: ಪ್ರೋಟಿನ್‌ ಮೂಲವಾಗಿರುವ ಮೊಟ್ಟೆ(Egg) ಅನೇಕರಿಗೆ ಬಹುಪ್ರಿಯ. ಕೇವಲ ನಾನ್‌ ವೆಜಿಟೇರಿಯನ್ಸ್‌ ಮಾತ್ರವಲ್ಲದೇ ಕೆಲ ವೆಜಿಟೇರಿಯನ್ಸ್‌ ಕೂಡ ಮೊಟ್ಟೆಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇದೀಗ ಮೊಟ್ಟೆ ಪ್ರಿಯರಿಗೆ...

Read moreDetails
ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

December 14, 2025
ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

December 14, 2025
ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿ & ಸ್ನೇಹಿತರ ಗಲಾಟೆ

ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿ & ಸ್ನೇಹಿತರ ಗಲಾಟೆ

December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

December 14, 2025
Next Post
ಕಂಬಳ ಹಿನ್ನೆಲೆ 3 ದಿನ ಭಾರಿ ಟ್ರಾಫಿಕ್ ಜಾಮ್ : ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚರಿಸಬೇಡಿ!

ಕಂಬಳ ಹಿನ್ನೆಲೆ 3 ದಿನ ಭಾರಿ ಟ್ರಾಫಿಕ್ ಜಾಮ್ : ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚರಿಸಬೇಡಿ!

Please login to join discussion

Recent News

BBK 12: ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್‌
Top Story

BBK 12: ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್‌

by ಪ್ರತಿಧ್ವನಿ
December 14, 2025
ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಮ್ಮ ಹೋರಾಟ: ಡಿ.ಕೆ ಶಿವಕುಮಾರ್
Top Story

ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಮ್ಮ ಹೋರಾಟ: ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 14, 2025
ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?
Top Story

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

by ಪ್ರತಿಧ್ವನಿ
December 14, 2025
ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್
Top Story

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 14, 2025
ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ
Top Story

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

by ಪ್ರತಿಧ್ವನಿ
December 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್‌

BBK 12: ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್‌

December 14, 2025
ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಮ್ಮ ಹೋರಾಟ: ಡಿ.ಕೆ ಶಿವಕುಮಾರ್

ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಮ್ಮ ಹೋರಾಟ: ಡಿ.ಕೆ ಶಿವಕುಮಾರ್

December 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!