ಬೆಂಗಳೂರು: ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕೆಲ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ, ನಿಂದನೆ ಸಂದೇಶ ಮಾಡಿ ಹುಚ್ಚಾಟ ಮೆರೆದಿದ್ರು.. ಈ ಕಿರುಕುಳದ ವಿರುದ್ಧ ವಿಜಯಲಕ್ಷ್ಮಿ ಸಿಸಿಬಿ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ..

ವಿಜಯಲಕ್ಷ್ಮಿ ದೂರಿನ ಮೇರೆಗೆ ಸುಮಾರು 18 ಸೋಷಿಯಲ್ ಮೀಡಿಯಾ ಬಳಕೆದಾರರ ವಿರುದ್ಧ ಮೊನ್ನೆ ಸಿಸಿಬಿ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾಗ್ತಿದ್ದಂತೆ ತನಿಖೆಗೆ ಇಳಿದಿರೋ ಸಿಸಿಬಿಯ ಮೂರು ತಂಡಗಳು ಕಿಡಿಗೇಡಿಗಳು ಮಾಡಿದ್ದ ಮೆಸೆಜ್, ಕಾಮೆಂಟ್ ಗಳ ಪರಿಶೀಲನೆ ನಡೆಸಿದೆ. ಇನ್ಸಾಟ್ರಾಗ್ರಾಂ, ಫೇಸ್ ಬುಕ್ ಅಕೌಂಟ್ ಮಾಹಿತಿ ನೀಡುವಂತೆ ಮೆಟಾಗೆ ಪತ್ರ (ಇಮೇಲ್) ಬರೆದಿದೆ. ಹಾಗೆ 18 ಖಾತೆಗಳಲ್ಲಿ ಅಸಲಿ, ನಕಲಿ ಅಕೌಂಟ್ ಗಳ ಪರಿಶೀಲನೆ ನಡೀತಿದೆ

ಇನ್ನು FIR ದಾಖಲಾಗಿರೋ ಮಾಹಿತಿ ತಿಳಿದು ಕೆಲ ಅಕೌಂಟ್‌ಳನ್ನ ಬಳಕೆದಾರರು ಡಿಲಿಟ್ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಬಳಕೆದಾರರ ಮಾಹಿತಿ ಪೊಲೀಸರ ಕೈ ಸೇರಲಿದ್ದು, ಕೆಟ್ಟ ಕಾಮೆಂಟ್ ಹಾಕಿದವರಿಗೆ ಬಂಧನದ ಭೀತಿ ಎದುರಾಗಿದೆ













