ಕಂಬಳಿ ಹುಳ ನೋಡೋದಕ್ಕೆ ಚಿಕ್ಕದಾಗಿದ್ದರು ಅದರ ಸ್ಪರ್ಶದಿಂದ ನಮಗೆ ಆಗುವ ತೊಂದರೆ ಜಾಸ್ತಿನೇ ಇರುತ್ತೆ ಹಾಗಾಗಿ ಗಿಡ ಮರಗಳಲ್ಲಾಗಲಿ ಅಥವಾ ಎಲ್ಲೇ ಕೂಡ ಕಂಬ್ಳಿ ಹುಳವನ್ನು ನೋಡಿದ್ರೆ ಜನ ಸ್ವಲ್ಪ ಭಯ ಬೀಳ್ತಾರೆ.. ಎಲ್ಲಾದು ನಮ್ಮ ಮೈಗೆ ತಾಗಿದ್ರೆ ಏನಪ್ಪಾ ಮಾಡೋದು ಅಂತ ಅದನ್ನ ದೂರ ಬಿಸಾಡ್ತಾರೆ…ನಮ್ಮ ಮೈಗೆ ಕಂಬಳಿ ಹುಳ ಸ್ಪರ್ಶಿಸಿದಾಗ ತುರಿಕೆ ಸ್ಟಾರ್ಟ್ ಆಗುತ್ತೆ ಉರಿ ಆಗುತ್ತದೆ.
ಬೇಸಿಗೆ ಸಮಯದಲ್ಲಿ ಕಂಬಳಿ ಹುಳದ ಕಾಟ ಹೆಚ್ಚಿರುತ್ತದೆ.. ಕಂಬಳಿ ಹುಳುಗಳ ದೇಹದ ಮೇಲೆ ಇರುವ ರೋಮಗಳನ್ನು ನಮ್ಮ ದೇಹ ಸ್ಪರ್ಶಿಸಿದರೆ, ಅದು ಸ್ಪರ್ಶಿಸಿದ ಜಾಗದಲ್ಲಿ ಅಲರ್ಜಿ ಅಥವಾ ಸೋಂಕನ್ನು ಉಂಟು ಮಾಡುತ್ತದೆ. ತೋಟದಲ್ಲಿ, ಗಿಡ ಮರಗಳು ಹೆಚ್ಚಿದ್ದ ಸ್ಥಳದಲ್ಲಿ ಮನೆಯ ಹೆಂಚಿನ ಮೇಲೆ ಹೀಗೆ ಒಂದಿಷ್ಟು ಜಾಗದಲ್ಲಿ ಕಂಬಳಿ ಹುಳುಗಳನ್ನ ನಾವು ನೋಡ್ಬಹುದು..ಕಂಬಳಿ ಹುಳುಗಳು ನಮಗೆ ಸ್ಪರ್ಶಿಸಿದ್ರು ಕೂಡ ತೊಂದರೆ ಜಾಸ್ತಿ ಇರುತ್ತದೆ.. ಅಂತ ಸಂದರ್ಭದಲ್ಲಿ ತುರಿಕೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಏನೆಲ್ಲ ಮಾಡಬಹುದು ಅನ್ನೋದರ ಡಿಟೇಲ್ಸ್ ಇಲ್ಲಿದೆ..
ತುಳಸಿ ಎಲೆ
ಕಂಬಳಿ ಹುಳ ನಿಮ್ಮ ಮೈಗೆ ಸ್ಪರ್ಶಿಸಿದಾಗ ತುರಿಕೆ ಜಾಸ್ತಿ ಆಗುವುದು ಖಂಡಿತ ಇಂತಹ ಸಂದರ್ಭದಲ್ಲಿ ತುಳಸಿ ಎಲೆಗಳನ್ನ ಕಂಬಳಿ ಹುಳ ಸ್ಪರ್ಶಿದ ಜಾಗಕ್ಕೆ ಚೆನ್ನಾಗಿ ಉಜ್ಜಿದರೆ ಊರಿ ಕಡಿಮೆಯಾಗುತ್ತದೆ. ಜೊತೆಗೆ ಕಂಬಳಿ ಹುಳುಗಳ ರೋಮಗಳು ಕೂಡ ಬಿತ್ತು ಹೋಗುತ್ತವೆ .ಪ್ರತಿಯೊಬ್ಬರ ಮನೆಯಲ್ಲೂ ಕೂಡ ತುಳಿಸಿಬಿಡು ಇರೋದ್ರಿಂದ ಈ ಒಂದು ಹ್ಯಾಕ್ ನ ನೀವು ಟ್ರೈ ಮಾಡಬಹುದು.
ತಲೆ ಕೂದಲು
ತಲೆ ಕೂದಲನ್ನ ಕಂಬಳಿ ಹುಳ ಸ್ಪರ್ಶಿಸಿದ ಜಾಗಕ್ಕೆ ಉಜ್ಜುವುದರಿಂದ ಬೇಗನೆ ಕಂಬಳಿ ಹುಳದ ರೋಮಗಳು ಬಿದ್ದು ಹೋಗುತ್ತದೆ. ರೋಮಗಳು ಬಿದ್ದು ಹೋದರೆ ತುರಿ ಅಥವ ತುರಿಕೆ ಬೇಗನೆ ಕಡಿಮೆಯಾಗುತ್ತದೆ..
ತೆಂಗಿನ ಎಣ್ಣೆ
ಕಂಬಳಿ ಹುಳದ ಸ್ಪರ್ಶದಿಂದಾಗಿ ಉರಿ ಅಥವ ತುರಿಕೆ ಹೆಚ್ಚಾದಾಗ..ತೆಂಗಿನ ಎಣ್ಣೆಯನ್ನ ಸ್ವಲ್ಪ ಬೀಸಿ ಮಾಡಿ ಹಚ್ಚುವುದರಿಂದ ನೋವು ಬೇಗ ಕಡಿಮೆ ಆಗುತ್ತದೆ..