• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಏಲಕ್ಕಿ ಬೆಳೆಗಾರರಿಗೂ ಬಂತು ಶುಕ್ರದೆಸೆ ; ಮಾರ್ಚ್‌ ವೇಳೆಗೆ ಕಿಲೋ ಗೆ 3500 ರೂ ತಲುಪಲಿದೆ..

ಪ್ರತಿಧ್ವನಿ by ಪ್ರತಿಧ್ವನಿ
November 18, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ, ಸಿನಿಮಾ
0
Share on WhatsAppShare on FacebookShare on Telegram

ಬೆಂಗಳೂರು ; ಸಂಬಾರ ಪದಾರ್ಥಗಳ ರಾಣಿ ಎಂದೇ ಕರೆಯಲ್ಪಡುವ ಘಮ ಘಮಿಸುವ ಏಲಕ್ಕಿ ಯ ಬೆಲೆ ದಿನೇ ದಿನೇ ಏರುಮುಖವಾಗಿ ಸಾಗುತ್ತಿದೆ. ಕಳೆದ ಮೂರು ತಿಂಗಳಿನಲ್ಲಿ ಕಿಲೋಗೆ 500 ರೂಪಾಯಿ ಏರಿಕೆ ದಾಖಲಿಸಿರುವ ಏಲಕ್ಕಿ ಈಗ ದೇಶೀ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯದಕ್ಕೆ ಕಿಲೋಗೆ 2500 ರೂಪಾಯಿಗಳಿಂದ 2800 ರೂಪಾಯಿಗಳವರೆಗೂ ಮಾರಾಟವಾಗುತ್ತಿದೆ.

ADVERTISEMENT

ಆದರೆ ಈ ವರ್ಷ ವಿಶ್ವದ ಮೂರನೇ ಅತೀ ದೊಡ್ಡ ಏಲಕ್ಕಿ ಉತ್ಪಾದಕ ದೇಶ ಆಗಿರುವ ಗ್ವಾಟೆಮಾಲಾದಲ್ಲಿ ಪ್ರತೀಕೂಲ ಹವಾಮಾನದ ಕಾರಣದಿಂದಾಗಿ ಉತ್ಪಾದನೆ ಶೇಕಡಾ 40 ರಿಂದ 50 ರಷ್ಟು ಕುಸಿಯಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸರಬರಾಜಿನ ಕೊರತೆ ಇರುವುದರಿಂದ ಸಹಜವಾಗಿಯೇ ಏರಿಕೆ ಆಗುತಿದ್ದು ಜನವರಿ-ಮಾರ್ಚ್‌ ವೇಳೆಗೆ ಕಿಲೋಗೆ 3500 ಮೀರಲಿದೆ ಎಂದು ಮಾರುಕಟ್ಟೆ ತಜ್ಞರು ಆಭಿಪ್ರಾಯಿಸಿದ್ದಾರೆ. .
ವಿಶ್ವದ ಒಟ್ಟು ಏಲಕ್ಕಿ ಉತ್ಪಾದನೆ ಸುಮಾರು 1.90 ಲಕ್ಷ ಟನ್‌ ಗಳಷ್ಟಿದ್ದು ಭಾರತ ಏಲಕ್ಕಿ ಉತ್ಪಾದನೆಯಲ್ಲಿ (41,000 ಟನ್‌ ) ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಇದ್ದರೂ ರಫ್ತು ಮಾಡುತ್ತಿರುವುದು 11 ಸಾವಿರ ಟನ್‌ ಗಳಷ್ಟು ಮಾತ್ರ ಆಗಿದೆ. ಭಾರತದಲ್ಲಿ ಧೇಶೀಯ ಬಳಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಇಂಡೋನೇಷ್ಯಾ ತನ್ನ 38 ಸಾವಿರ ಟನ್‌ ಉತ್ಪಾದನೆಯೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು ಗ್ವಾಟೆಮಾಲ ಸುಮಾರು 37 ಸಾವಿರ ಟನ್‌ ಉತ್ಪಾದನೆಯೊಂದಿಗೆ ತೃತೀಯ ಸ್ಥಾನದಲ್ಲಿದೆ. ಭಾರತದ ಏಲಕ್ಕಿ ರಫ್ತಿಗೆ ಕೊಲ್ಲಿ ರಾಷ್ಟ್ರಗಳೇ ಪ್ರಮುಖ ಗ್ರಾಹಕರಾಗಿದ್ದು ಭಾರತೀಯ ಏಲಕ್ಕಿ ರಫ್ತುದಾರರು ಫೆಬ್ರವರಿ 2025 ರ ವೇಳೆಗೆ ರಂಜಾನ್‌ ಹಬ್ಬಕ್ಕೂ ಮುಂಚಿತವಾಗಿ ಗಲ್ಫ್ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುವ ಭರವಸೆಯನ್ನು ಹೊಂದಿದ್ದಾರೆ,

ಗ್ವಾಟೆಮಾಲಾ 2024-25 ರ ಉತ್ಪಾದನೆಯು ಕಳೆದ ವರ್ಷಕ್ಕಿಂತ 44 ಪ್ರತಿಶತದಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ವರದಿಗಳನ್ನು ಉಲ್ಲೇಖಿಸಿ ರಫ್ತುದಾರರು ಹೇಳಿದ್ದಾರೆ. ಗ್ವಾಟೆಮಾಲಾದಲ್ಲಿ ಒಟ್ಟು ಉತ್ಪಾದನೆಯು 18,884 ಟನ್‌ಗಳಿಗೆ ಇಳಿದಿದೆ. ಭಾರತದಲ್ಲಿ ಕೇರಳ ರಾಜ್ಯವು ತನ್ನ ವಾರ್ಷಿಕ 20 ಸಾವಿರ ಟನ್‌ ಉತ್ಪಾದನೆಯೊಂದಿಗೆ ಮುಂಚೂಣಿಯಲ್ಲಿದೆ. ಕೇರಳ ಮಾರುಕಟ್ಟೆ ಅಧಿಕಾರಿಗಳ ಪ್ರಕಾರ ಗ್ವಾಟೆಮಾಲಾದಲ್ಲಿ ಮುಂದಿನ ಏಲಕ್ಕಿ ಉತ್ಪಾದನೆಯು ಸುಮಾರು 17,000 ರಿಂದ 20,000 ಟನ್‌ಗಳು ಎಂದು ಅಂದಾಜಿಸಲಾಗಿದೆ ಇದು ಕಳೆದ ಋತುವಿಗಿಂತ 40-50 ರಷ್ಟು ಕಡಿಮೆಯಾಗಿದೆ. ಗ್ವಾಟೆಮಾಲಾದಲ್ಲಿ ಮೊದಲ ಸುತ್ತಿನ ಕೊಯ್ಲು ಪೂರ್ಣಗೊಂಡಿದೆ.

ಆದರೆ, ಈ ಋತುವಿನಲ್ಲಿ ಭಾರತದ ಬೆಳೆ ಕೂಡ ಹವಾಮಾನದ ವೈಪರೀತ್ಯದ ಕಾರಣದಿಂದಾಗಿ ಶೇ.50ರಷ್ಟು ಕಡಿಮೆಯಾಗಿದೆ. ಗ್ವಾಟೆಮಾಲಾ ಏಲಕ್ಕಿ ಬೆಲೆಯು ಭಾರತೀಯ ಏಲಕ್ಕಿಗಿಂತ ಶೇಕಡ 30 ರಷ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಗ್ವಾಟೆಮಾಲ ಉತ್ಪಾದನೆ ಕೊರತೆಯಿಂದ ಸೃಷ್ಟಿಯಾಗುವ ಖಾಲಿ ಸ್ಥಾನಕ್ಕೆ ಭಾರತದ ಏಲಕ್ಕಿ ಬೆಳೆ ಭರ್ತಿ ಆಗಲಿದೆ. ಇದರಿಂದ ಮುಂದಿನ ನಾಲ್ಕೈದು ತಿಂಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಉತ್ತಮ ಪ್ರಮಾಣದಲ್ಲಿ ರಫ್ತು ಮಾಡಬಹುದಾಗಿದೆ. “2025 ರ ಜನವರಿಯಿಂದ ಮಾರ್ಚ್‌ನಲ್ಲಿ ಭಾರತೀಯ ಏಲಕ್ಕಿ ಬೆಲೆ ಪ್ರತಿ ಕೆಜಿಗೆ ₹ 3,500 ತಲುಪುತ್ತದೆ ಎಂದು ನಾವು ನಿರೀಕ್ಷಿಸಬಹುದು” ಎಂದು ಅವರು ಹೇಳಿದರು.

ಕೇರಳದ ಬೋಡದಿನಾಯಕನೂರಿನ ಏಲಕ್ಕಿ ರಫ್ತುದಾರರಾದ ಎಸ್‌ಕೆಎಂ ಧನವಂತನ್ ಮಾತನಾಡಿ, ರಂಜಾನ್ ಮಾರಾಟ ಇನ್ನೂ ಪ್ರಾರಂಬವಾಗಿಲ್ಲ , ಮತ್ತು ಭಾರತ ಮತ್ತು ಗ್ವಾಟೆಮಾಲಾ ಎರಡರಲ್ಲೂ ಬಿಗಿಯಾದ ಬೆಳೆ ಪರಿಸ್ಥಿತಿಯನ್ನು ಗಮನಿಸಿದರೆ, ಬೆಲೆ ಮತ್ತು ಪ್ರಮಾಣದಲ್ಲಿ ಬೇಡಿಕೆಯನ್ನು ಪೂರೈಸುವುದು ಸವಾಲಿನ ಸಂಗತಿಯಾಗಿದೆ. ಪ್ರಸ್ತುತ ಹೆಚ್ಚಿನ ಬೆಲೆಗಳು ನಿಯಮಿತ ಚಿಲ್ಲರೆ ಮಾರಾಟಕ್ಕೆ ಸರಿಹೊಂದುತ್ತವೆ ಮತ್ತು ಮುಂಬರುವ ತಿಂಗಳುಗಳಲ್ಲಿ ದೇಶೀಯ ಅಗತ್ಯಗಳನ್ನು ಪೂರೈಸಬಹುದು, ಅತಿಯಾದ ಬೆಲೆ ಏರಿಕೆಯು ಉದ್ಯಮವನ್ನು ಅಡ್ಡಿಪಡಿಸಬಹುದು, ರಫ್ತು ಪ್ರಮಾಣವನ್ನು ತೀವ್ರವಾಗಿ ಸೀಮಿತಗೊಳಿಸುತ್ತದೆ ಎಂದು ಅವರು ಹೇಳಿದರು.
ಭಾರತದಲ್ಲಿ ಉತ್ಪಾದನೆಯಾಗುವ ಏಲಕ್ಕಿಯು ಗಾತ್ರದಲ್ಲಿ ಸಣ್ಣದಾಗಿದ್ದು ಗುಣಮಟ್ಟದಲ್ಲಿ ಉತ್ತಮವಾಗಿದೆ, ಇದರ ಪರಿಮಳವೂ ಹೆಚ್ಚು. ಗ್ವಾಟೆಮಾಲ ಹಾಗೂ ಇಂಡೋನೇಷ್ಯಾದಲ್ಲಿ ಉತ್ಪತ್ತಿ ಆಗುವ ಏಲಕ್ಕಿಯ ಕಾಯಿ ಗಾತ್ರದಲ್ಲಿ ದೊಡ್ಡದಿರುತ್ತದೆ. ಅಲ್ಲಿ ಕಡಿಮೆ ದರ್ಜೆಯ ಏಲಕ್ಕಿಯನ್ನೂ ಉತ್ಪಾದಿಸಲಾಗುತ್ತಿದೆ. ಭಾರತದಲ್ಲಿ ಕಡಿಮೆ ದರ್ಜೆಯ ಏಲಕ್ಕಿ ಬಳಕೆದಾರರಿಗೆ ಸರಬರಾಜು ಮಾಡಲು ಗ್ವಾಟೆಮಾಲದ ಏಲಕ್ಕಿಯನ್ನೂ ಆಮದು ಮಾಡಿಕೊಳ್ಳಲಾಗುತ್ತಿದೆ. ಆಮದು ನೀತಿಯ ಪ್ರಕಾರ ಈ ಏಲಕ್ಕಿ ಬೆಲೆಯು ಕಿಲೋ ಗ್ರಾಂ ಗೆ 500 ರೂಪಾಯಿಗಳಿಗಿಂತ ಹೆಚ್ಚಾಗಿರಬೇಕು ಮತ್ತು ಇದಕ್ಕೆ ಶೇಕಡಾ 70 ರಷ್ಟು ಆಮದು ಶುಲ್ಕ ವಿಧಿಸಲಾಗುತ್ತಿದೆ. ಈಗ ಗ್ವಾಟೆಮಾಲದಲ್ಲಿಯೇ ಉತ್ಪಾದನೆ ಕೊರತೆ ಆಗಿರುವುದರಿಂದ ಆಮದೂ ಕೂಡ ಕಡಿಮೆಯಾಗಿ ಭಾರತೀಯ ಮಾರುಕಟ್ಟೆಯಲ್ಲಿ ಭಾರತದ ಏಲಕ್ಕಿ ಮಾರಾಟ ಮತ್ತಷ್ಟು ಹೆಚ್ಚಾಗಲಿದೆ ಇದು ಬೆಲೆ ಗಗನಮುಖಿ ಆಗಲು ಕಾರಣವಾಗಲಿದೆ.

ವರದಿ: ಕೋವರ್ ಕೊಲ್ಲಿ ಇಂದ್ರೇಶ್

Tags: ElakkiFormersGwatemalaKerala Market
Previous Post

ವೈಲ್ಡ್ ಕಾರ್ಡ್ ಎಂಟ್ರಿಗೆ ಕಂಟೆಸ್ಟಂಟ್ಸ್ ಶಾಕ್ – ಬಿಗ್ ಬಾಸ್ ಬಿಗ್ ಟ್ವಿಸ್ಟ್.!

Next Post

ನೀವು ಕೇಕ್ ಪ್ರಿಯರೆ.. ಹಾಗಾದರೆ ತಿನ್ನುವ ಮುನ್ನ ಯೋಚಿಸಿ.

Related Posts

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ
Top Story

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

by ಪ್ರತಿಧ್ವನಿ
December 14, 2025
0

ದರ್ಶನ್‌ ನಟನೆಯ ಬಹುನಿರೀಕ್ಷಿತ ಸಿನಿಮಾ  ಡೆವಿಲ್‌  ಯಶಸ್ಸಿನ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್( Vijayalakshmi  Darshan) ಅಭಿಮಾನಿಗಳ ಡಿ ಕಂಪನಿ ಯೂಟ್ಯೂಬ್ ಚಾನೆಲ್​​ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ...

Read moreDetails
ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿ & ಸ್ನೇಹಿತರ ಗಲಾಟೆ

ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿ & ಸ್ನೇಹಿತರ ಗಲಾಟೆ

December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
Next Post

ನೀವು ಕೇಕ್ ಪ್ರಿಯರೆ.. ಹಾಗಾದರೆ ತಿನ್ನುವ ಮುನ್ನ ಯೋಚಿಸಿ.

Recent News

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ
Top Story

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

by ಪ್ರತಿಧ್ವನಿ
December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!
Top Story

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

by ಪ್ರತಿಧ್ವನಿ
December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

December 14, 2025
ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿ & ಸ್ನೇಹಿತರ ಗಲಾಟೆ

ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿ & ಸ್ನೇಹಿತರ ಗಲಾಟೆ

December 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!