ಬಾಗಲಕೋಟೆ: ಕಾರಿಗೆ ಬೆಂಕಿ ತಗುಲಿ ವ್ಯಕ್ತಿಯೊಬ್ಬರು ಸಜೀವವಾಗಿ ದಹನಗೊಂಡಿರುವ ಘಟನೆ ನಡೆದಿದೆ.
![](https://pratidhvani.com/wp-content/uploads/2022/08/730cbf2e2455c64c961be8e18e793f6b_3-Things-a-Fire-Needs-2000-c-90-1024x682.jpg)
ಈ ಘಟನೆ ಜಿಲ್ಲೆಯ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಕಾರಿಗೆ ಆಕಸ್ಮಿಕ ಬೆಂಕಿ ತಗುಲಿತ್ತು. ಪರಿಣಾಮ ಕಾರಿನಲ್ಲಿದ್ದ ಸಂಗನಗೌಡ ಗೌಡರ್(50) ಎಂಬುವವರು ಸಜೀವ ದಹನವಾಗಿದ್ದಾರೆ. ಈ ಕಾರು ಬಾಗಲಕೋಟೆಯಿಂದ ಚಿಕ್ಕಮಾಗಿ ಮಾರ್ಗವಾಗಿ ತೆರಳುತ್ತಿತ್ತು. ಎನ್ನಲಾಗಿದೆ. ಈ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಿಂದ ಹೊರ ಬರಲಾಗದೆ ವ್ಯಕ್ತಿ ಸಜೀವವಾಗಿ ದಹನಗೊಂಡಿದ್ದಾರೆ. ಈ ಕುರಿತು ಬಾಗಲಕೋಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.