ಕೆನಡಾ ದೇಶದ ಬರ್ನಾಬಿ ನಗರವು ಹತ್ಯೆಗೀಡಾದ ಭಾರತೀಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಗೌರವಾರ್ಥವಾಗಿ ಸೆಪ್ಟೆಂಬರ್ 5 ಅನ್ನು “ಗೌರಿ ಲಂಕೇಶ್ ದಿನ”ವೆಂದು ಘೋಷಿಸಿದೆ.
ಧೈರ್ಯಶಾಲಿ ಸಂಪಾದಕಿ ಗೌರಿ ಲಂಕೇಶ್ ಅವರನ್ನು 2017 ರಲ್ಲಿ ಬೆಂಗಳೂರಿನಲ್ಲಿ ಬಲಪಂಥೀಯ ಉಗ್ರರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಸ್ತುತ ನವದೆಹಲಿಯಲ್ಲಿ ಹಿಂದೂ ರಾಷ್ಟ್ರೀಯವಾದಿ ಬಿಜೆಪಿ ಸರ್ಕಾರದ ನಡೆಸುತ್ತಿರುವ ಮೂಢನಂಬಿಕೆ ಮತ್ತು ಬೆಳೆಯುತ್ತಿರುವ ಮತಾಂಧತೆಯ ವಿರುದ್ಧ ಅವರು ನಿರಂತರವಾಗಿ ಬರೆದಿದ್ದರು.
2014 ರಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ರಾಜಕೀಯ ಭಿನ್ನಮತೀಯರ ಮೇಲೆ ದಾಳಿಗಳು ಹೆಚ್ಚಾಗಿದೆ. ತನ್ನ ಬರಹಗಳ ಮೂಲಕ,ಗೌರಿ ಲಂಕೇಶ್ ಅವರು ಅಧಿಕಾರದಲ್ಲಿರುವವರನ್ನು ಸವಾಲು ಹಾಕಿ ಪ್ರಶ್ನಿಸಿದರು ಮತ್ತು ಹಿಂಸೆಯ ವಿರುದ್ಧ ಧ್ವನಿ ಎತ್ತಿದರು.
ಆಕೆಯ ಸಾವಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕೆಲವು ಬೆಂಬಲಿಗರು ಸಂತಸ ವ್ಯಕ್ತಪಡಿಸಿದ್ದರು.
ಆಗಸ್ಟ್ 27 ಶುಕ್ರವಾರ, ಬರ್ನಾಬಿ ನಗರವು ಸೆಪ್ಟೆಂಬರ್ 5 ಅನ್ನು “ಗೌರಿ ಲಂಕೇಶ್ ದಿನ”ವೆಂದು ಘೋಷಿಸಿದೆ.

ಮೇಯರ್ ಮೈಕ್ ಹರ್ಲೆ ಅವರು ಗೌರಿ ಲಂಕೇಶ್ ಅವರನ್ನು “ಸತ್ಯ ಮತ್ತು ನ್ಯಾಯಕ್ಕಾಗಿ ನಿಂತ ಧೈರ್ಯಶಾಲಿ ಭಾರತೀಯ ಪತ್ರಕರ್ತೆ. ದಮನದ ವಿರುದ್ಧ ಮತ್ತು ಮಾನವ ಹಕ್ಕುಗಳ ಪರವಾದ ಹೋರಾಟದಲ್ಲಿ ತನ್ನ ಪ್ರಾಣವನ್ನು ತ್ಯಜಿಸಿದರು” ಎಂದಿದ್ದಾರೆ.
ಕಳೆದ ವರ್ಷ ಬರ್ನಾಬಿ ನಗರವು ಜಸ್ವಂತ್ ಸಿಂಗ್ ಖಲ್ರಾ ಅವರನ್ನು ಗೌರವಿಸಲು ಒಂದು ದಿನವನ್ನು ಘೋಷಿಸಿತ್ತು. ಪಂಜಾಬ್‌ನಲ್ಲಿ ಸಿಖ್ ಉಗ್ರಗಾಮಿತ್ವವನ್ನು ಕೊನೆಗೊಳಿಸುವ ಹೆಸರಿನಲ್ಲಿ ಅಪಹರಣ ಮತ್ತು ನಿರ್ಮೂಲನೆ ಮಾಡಿದವರ ಪ್ರಕರಣಗಳನ್ನು ದಾಖಲಿಸಿದ್ದಕ್ಕಾಗಿ ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ಖಲ್ರಾ ಅವರನ್ನು ಭಾರತೀಯ ಪೊಲೀಸರು ಕೊಂದಿದ್ದರು. ಖಲ್ರಾ ಅವರನ್ನು ಸೆಪ್ಟೆಂಬರ್ 6, 1995 ರಂದು ಅಮೃತಸರದಲ್ಲಿರುವ ಆತನ ಮನೆಯಿಂದ ಅಪಹರಿಸಿ, ನಂತರ ಕೊಲೆ ಮಾಡಲಾಗಿತ್ತು.
2017 ರ ಸೆಪ್ಟೆಂಬರ್ 5 ರಂದು ಬೆಂಗಳೂರಿನ ಅವರ ನಿವಾಸದ ಮುಂದೆ ಗುಂಡಿಕ್ಕಿ ಹತ್ಯೆ ಮಾಡಿದ್ದರು.