
ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ನಡೆದಿದೆ. ನಿನ್ನೆ ದೆಹಲಿಯಲ್ಲಿ ಮಾತನಾಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಅದು ನಮ್ಮ ಸ್ಟೇಟ್ ಸಬ್ಜೆಕ್ಟ್, ಕುಮಾರಸ್ವಾಮಿ ಹೋಮ್ ಮಿನಿಸ್ಟರ್ ಭೇಟಿ ಮಾಡಿ ಒಪ್ಪಿಗೆ ಕೊಡದಂತೆ ಪ್ರಯತ್ನ ಪಟ್ಟು ಪತ್ರ ಬರೆದಿದ್ದಾರೆ. ಇದು ರಾಜ್ಯದ ಸಬ್ಜೆಕ್ಟ್, ಅವರನ್ನು ಕೇಳುವ ಅವಶ್ಯಕತೆ ಇಲ್ಲ. ನಮಗೂ ಕಾನೂನು ಗೊತ್ತಿದೆ, ಹೇಗೆ ಇಂಪ್ಲಿಮೆಂಟ್ ಮಾಡಬೇಕು ಮಾಡ್ತೀವಿ. ರಾಮನಗರದ ಮೇಲೆ ಹೇಗೆ ಗಧಾ ಪ್ರಹಾರ ಆಗ್ತಿದೆ ಅನ್ನೋದಕ್ಕೆ ಇದೆಲ್ಲ ಸಾಕ್ಷಿ ಎನ್ನುವ ಮೂಲಕ ಕುಮಾರಸ್ವಾಮಿ ವಿರುದ್ಧ ಚಾಟಿ ಬೀಸಿದ್ದರು.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಯಾರ ವಿರೋದವೂ ಇರಲಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಟ್ಟಿರೋದಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದೆ. ಆದರೆ ಕೇಂದ್ರ ಸರ್ಕಾರ ಜನರ ವಿರೋಧ ಇದೆಯೆಂದು ತಡೆ ಮಾಡಿದೆ ಅನ್ನೋದು ಕೇಳಿದ್ದೇನೆ. ಜನರ ವಿರೋಧ ಇಲ್ಲ, ಜನ ನಾಯಕರ ವಿರೋಧ ಇದೆ. ಜನ ಏನ್ ವಿರೋಧ ಇಲ್ಲ, ನಾಯಕರು ರಾಜಕೀಯ ಕಾರಣಕ್ಕೆ ವಿರೋಧ ಮಾಡ್ತಿದ್ದಾರೆ. ಕೇಂದ್ರಕ್ಕೆ ಕೆಲವು ಅಧಿಕಾರ ಇರುತ್ತೆ. ರಾಜ್ಯಕ್ಕೆ ಕೆಲವು ಅಧಿಕಾರ ಇರುತ್ತದೆ. ಏನ್ ಮಾಡೋಕಾಗಲ್ಲ ಒತ್ತಾಯ ಮಾಡ್ಬಹುದು ಅಷ್ಟೇ. ರಾಜ್ಯಕ್ಕೆ ಅಧಿಕಾರ ಇದ್ದಿದ್ರೆ ಕೇಂದ್ರಕ್ಕೆ ಕಳಿಸುತ್ತಿರಲಿಲ್ಲ. ಜನರ ವಿರೋಧ ಏನಿಲ್ಲ ವಿರೋಧ ಪಕ್ಷಗಳು ವಿರೋಧ ಮಾಡ್ತವೆ ಅಷ್ಟೇ ಎಂದಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ರಾಮನಗರ ಜಿಲ್ಲೆ ಹೆಸರನ್ನು ಬದಲಾವಣೆ ಮಾಡಲು ಕುಮಾರಸ್ವಾಮಿ ಕಾರಣ ಎಂಬ ಆರೋಪ ವಿಚಾರವಾಗಿ ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ರಾಮನಗರ ಜನ್ಮ ಕೊಟ್ಟ ಜಿಲ್ಲೆ. ಅದರೊಂದಿಗೆ ಕುಮಾರಸ್ವಾಮಿಗೆ ಭಾವನಾತ್ಮಕ ಸಂಬಂಧ ಇದೆ. ರಾಜಕಾರಣ ಹರಿಯುವ ನೀರು, ನಿಂತ ನೀರಲ್ಲ. ಅವರ ಅವಧಿಯಲ್ಲೇ ರಾಮನಗರ ಜಿಲ್ಲೆ ಅಂತ ಘೋಷಣೆ ಆಗಿದ್ದು, ಅವರ ಕೊಡುಗೆ ಜಿಲ್ಲೆಗೆ ಅಪಾರ. ಇದು ಕಾಲ ಚಕ್ರ, ಆ ಭಾಗದ ಜನರೇ ಉತ್ತರ ಕೊಡ್ತಾರೆ. ರಾಮನಗರ, ರಾಮನಗರ ಜಿಲ್ಲೆಯಾಗಿಯೇ ಉಳಿಯಬೇಕು. ಬೆಂಗಳೂರು ನಗರ ವೇಗವಾಗಿಯೇ ಬೆಳೆದಿದೆ. ಗ್ರೇಟರ್ ಬೆಂಗಳೂರನ್ನ ಗ್ರೇಟೆಸ್ಟ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಬೆಂಗಳೂರನ್ನ ಒಡೆಯಲು ಹೊರಟಿದ್ದಾರೆ ಎಂದು ಜೆಡಿಎಸ್ನ ಶರವಣ ಟೀಕಿಸಿದ್ದಾರೆ.

ತಾಕತ್ ಇದ್ರೆ ಸ್ಥಳೀಯ ಚುನಾವಣೆ, ಬಿಬಿಎಂಪಿ ಚುನಾವಣೆ ನಡೆಸಿ, ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಸವಾಲ್ ಹಾಕಿದ್ದಾರೆ. ಹೆಸರನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಿಲ್ಲ ಎಂದು ಡಿ.ಕೆ ಶಿವಕುಮಾರ್ ಒಂದು ಕಡೆ ಹೇಳಿದ್ರೆ, ಕೇಂದ್ರದ ಒಪ್ಪಿಗೆ ಬೇಡ ಎನ್ನುವುದಾದರೆ ಕೇಂದ್ರಕ್ಕೆ ಯಾಕೆ ಕಳಿಸುತ್ತಿದ್ದೆವು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಅಂದರೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಿದೆ. ಕೇಂದ್ರದ ಸಮ್ಮತಿ ಇಲ್ಲದೆ ಹೆಸರು ಬದಲಾವಣೆ ಆಗುವುದಿಲ್ಲ. ಹೆಸರು ಬದಲಾವಣೆಗೆ ಸಾಮಾನ್ಯವಾಗಿ ಕೇಂದ್ರ ವಿರೋಧಿಸುವುದಿಲ್ಲ. ಆದರೆ ರಾಮನಗರ ಜಿಲ್ಲಾ ಹೆಸರು ರಾಜಕೀಯ ಕಾರಣಕ್ಕೆ ಜಟಾಪಟಿ ಸೃಷ್ಟಿಯಾಗಿದ್ದು, ಬದಲಾವಣೆ ಅಷ್ಟು ಸುಲಭದ ಮಾತಲ್ಲ.
