ಕಳೆದ ಹಲವು ದಿನಗಳಿಂದ ರಾಜ್ಯ ಸಚಿವ ಸಂಪುಟ ಸಭೆ ಮಾಡಬೇಕು ಎಂದುಕೊಂಡರು ಮಾಡಲಾಗುತ್ತಿಲ್ಲ. ಇಂದು ಸಂಪುಟ ಸಭೆಗೆ ಮುಹೂರ್ತ ನಿಗಧಿಯಾದರೂ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.
ಹೌದು, ಮೇ.11ರಂದು 11 ಗಂಟೆಗೆ ವಿಧಾನಸೌಧದಲ್ಲಿ ನಿಗದಿಯಾಗಿದ್ದಂತ ಸಚಿವ ಸಂಪುಟ ಸಭೆ ಮತ್ತೆ ಮೇ.12ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ. ಮೇ.11ರಂದು 11 ಗಂಟೆಗೆ ವಿಧಾನಸೌಧದಲ್ಲಿ ನಿಗದಿಯಾಗಿದ್ದಂತ ಸಚಿವ ಸಂಪುಟ ಸಭೆಯನ್ನು, ಮತ್ತೆ ಮೇ.12, 2022ರ ಮಧ್ಯಾಹ್ನ 12 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.