• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಂಗ್ರೆಸ್‌‌ ಹೈಕಮಾಂಡ್‌ ಅಂಗಳದಲ್ಲಿ ಸಂಪುಟ ಸರ್ಕಸ್‌.. ಯಾರಾಗ್ತಾರೆ ಅಧ್ಯಕ್ಷ..?

ಕೃಷ್ಣ ಮಣಿ by ಕೃಷ್ಣ ಮಣಿ
November 28, 2024
in Top Story, ಕರ್ನಾಟಕ, ದೇಶ, ರಾಜಕೀಯ
0
ಕಾಂಗ್ರೆಸ್‌‌ ಹೈಕಮಾಂಡ್‌ ಅಂಗಳದಲ್ಲಿ ಸಂಪುಟ ಸರ್ಕಸ್‌.. ಯಾರಾಗ್ತಾರೆ ಅಧ್ಯಕ್ಷ..?
Share on WhatsAppShare on FacebookShare on Telegram

ಕರ್ನಾಟಕದ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಸಂಪುಟಕ್ಕೆ ಸರ್ಜರಿ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಈಗಾಗಲೇ ದೆಹಲಿ ತಲುಪಿದ್ದು, ಶುಕ್ರವಾರ ಕಾಂಗ್ರೆಸ್‌‌ ವರಿಷ್ಠ ನಾಯಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ. 50-50 ಸೂತ್ರದಂತೆ ಕೆಲವು ಸಚಿವರಿಗೆ ಕೊಕ್ ಕೊಡಲು ನಿರ್ಧಾರ ಮಾಡಿದ್ದು, ಕಳಂಕಿತರು, ನಿಷ್ಕ್ರಿಯ ಸಚಿವರಿಗೆ ಕೊಕ್ ಕೊಟ್ಟು ಹೊಸ ಮುಖಗಳಿಗೆ ಅವಕಾಶ ನೀಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಯಾರು ಯಾರಿಗೆ ಕೊಕ್‌ ನೀಡ್ತಾರೆ..? ಯಾರಿಗೆ ಮಿನಿಸ್ಟರ್‌ಗಿರಿ ಸಿಗುತ್ತೆ ಅನ್ನೋ ಬಗ್ಗೆ ಭಾರೀ ಚರ್ಚೆ ನಡೆದಿದೆ.

ADVERTISEMENT

₹700 ಕೋಟಿ ಹಗರಣ ಆರೋಪಕ್ಕೆ ಗುರಿಯಾಗಿದ್ದ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ, ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಯೋಜನೆ & ಸಾಂಖ್ಯಿಕ ಸಚಿವ ಡಿ.ಸುಧಾಕರ್, ಆಹಾರ & ನಾಗರೀಕ ಸಚಿವ ಕೆ.ಹೆಚ್.ಮುನಿಯಪ್ಪ, ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು, ಪೌರಾಡಳಿತ ಖಾತೆ ಸಚಿವ ರಹೀಂಖಾನ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸಚಿವ ಸ್ಥಾನ ಕಳೆದುಕೊಳ್ತಾರೆ ಎನ್ನುವ ಮಾಹಿತಿ ಕಾಂಗ್ರೆಸ್‌ ಅಂಗಳದಿಂದಲೇ ಹೊರ ಬೀಳುತ್ತಿದೆ.

GT DeveGowda: ಕುಮಾರಸ್ವಾಮಿ, HD ರೇವಣ್ಣ ವಿರುದ್ಧ ಜಿಟಿ ದೇವೇಗೌಡ ವಾಗ್ದಾಳಿ..! #hdkumaraswamy #hdrevanna

ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಬಹುದು ಅನ್ನೋದನ್ನು ನೋಡೋದಾರೆ ಒಕ್ಕಲಿಗ ಕೋಟದಲ್ಲಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಹೈಕಮಾಂಡ್‌‌ ಕೋಟದಲ್ಲಿ ಪರಿಷತ್‌‌ ಸದಸ್ಯ ಬಿ.ಕೆ ಹರಿಪ್ರಸಾದ್, ಹಿಂದುಳಿದ ವರ್ಗದಲ್ಲಿ ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ, ವಾಲ್ಮೀಕಿ ಕೋಟದಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ, ಮುಸ್ಲಿಂ ಕೋಟದಲ್ಲಿ ಮೈಸೂರಿನ ನರಸಿಂಹರಾಜ ಶಾಸಕ ತನ್ವೀರ್ ಸೇಠ್, ಹಾಸನ ಜಿಲ್ಲೆಗೆ ಒಕ್ಕಲಿಗ ಕೋಟದಲ್ಲಿ ಅರಸಿಕೆರೆ ಶಾಸಕ ಶಿವಲಿಂಗೇಗೌಡ, ದಲಿತ ಕೋಟದಲ್ಲಿ ಕೆಜಿಎಫ್ ಶಾಸಕಿ ರೂಪಾ ಶಶಿಧರ್‌, ಎಸ್‌‌ಸಿ ಕೋಟದಲ್ಲಿ ಮಳವಳ್ಳಿ ಶಾಸಕ ಪಿ.ನರೇಂದ್ರ ಸ್ವಾಮಿ, ಒಕ್ಕಲಿಗ ಕೋಟದಲ್ಲಿ ಮಾಗಡಿ ಶಾಸಕ ಹೆಚ್‌.ಸಿ ಬಾಲಕೃಷ್ಣಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ.

ಇನ್ನು ಚನ್ನಪಟ್ಟಣ ಶಾಸಕ ಸಿ. ಪಿ. ಯೋಗೇಶ್ವರ್, ಬಂಗಾರಪೇಟೆ ಶಾಸಕ ಎಸ್​. ಎನ್​. ನಾರಾಯಣಸ್ವಾಮಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ಮುದ್ದೇಬಿಹಾಳ ಶಾಸಕ ಸಿ. ಎಸ್​. ನಾಡಗೌಡ ಕೂಡ ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ ಎನ್ನಲಾಗಿದ್ದು, ಶುಕ್ರವಾರ ಹೈಕಮಾಂಡ್‌ ಅಂಗಳದಲ್ಲಿ ಪಟ್ಟಿ ಫೈನಲ್‌ ಆಗಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಬದಲಾವಣೆ ಮಾಡುವ ಬಗ್ಗೆ ಚರ್ಚೆಗಳು ನಡೆಯುವ ಬಗ್ಗೆ ಕಾಂಗ್ರೆಸ್‌ ನಾಯಕರು ಆಶಯ ವ್ಯಕ್ತಪಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಎಂದು ಕೆ.ಎನ್‌ ರಾಜಣ್ಣ ಬಹಿರಂಗವಾಗಿ ಹೇಳಿದ್ದಾರೆ.

Tags: bsy cabinetCabinet circusCabinet Formationcircus commentcongresscongress cabinet in karnatakacongress cabinet ministerscongress karnatakacongress mlasKarnataka cabinetKarnataka Cabinet expansionkarnataka cabinet formationkarnataka cabinet listmodi cabinet remodi cabinet reshufflenawab malik on circus commentpunjab congress crisispunjab congress feudpunjab congress infightingthe circustrump cabinet
Previous Post

ಮುಡಾ ಕೇಸ್‌; ಸಿಎಂ ತಪ್ಪು ಸಾಬೀತಾದ್ರೆ ಜೀತಾ ಮಾಡುವ ಸವಾಲ್..

Next Post

ನಾನು ಸಚಿವ ಸ್ಥಾನಕ್ಕೋಸ್ಕರ ಯಾರ ಮನೆ ಬಾಗಿಲಿಗೂ ಹೋಗಲ್ಲ – ಕೊತ್ತೂರು ಮಂಜುನಾಥ್ ಅಚ್ಚರಿ ಹೇಳಿಕೆ ! 

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

February 8, 2026
Next Post
ನಾನು ಸಚಿವ ಸ್ಥಾನಕ್ಕೋಸ್ಕರ ಯಾರ ಮನೆ ಬಾಗಿಲಿಗೂ ಹೋಗಲ್ಲ – ಕೊತ್ತೂರು ಮಂಜುನಾಥ್ ಅಚ್ಚರಿ ಹೇಳಿಕೆ ! 

ನಾನು ಸಚಿವ ಸ್ಥಾನಕ್ಕೋಸ್ಕರ ಯಾರ ಮನೆ ಬಾಗಿಲಿಗೂ ಹೋಗಲ್ಲ - ಕೊತ್ತೂರು ಮಂಜುನಾಥ್ ಅಚ್ಚರಿ ಹೇಳಿಕೆ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada