ಸೆಪ್ಟೆಂಬರ್ 22 ರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಮಹಿಳೆ ತಾನು ಬುಕ್ ಮಾಡಿದ ಕ್ಯಾಬ್ ಚಾಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಮಹಿಳೆ ದೂರನ್ನು ಆಧರಿಸಿ ಜೀವನ್ ಭೀಮ್ ನಗರ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.
ಎಸ್ಪಿ ಶರಣಪ್ಪ, ಪೊಲೀಸ್ ಉಪ ಆಯುಕ್ತರು (ಪೂರ್ವ) ದೂರು ದಾಖಲಾದ ತಕ್ಷಣ ಮೂರು ತಂಡಗಳನ್ನು ರಚಿಸಿ ಕಾರ್ಯಚರಣೆ ನಡೆಸಿದ್ದಾರೆ. ಆರೋಪಿಯನ್ನು ಆಂಧ್ರಪ್ರದೇಶ ಮೂಲದ ದೇವರಾಜುಲು ಎಂದು ಗುರುತಿಸಿ ಆತನನ್ನು ಬಂಧಿಸಿದ್ದಾರೆ.
ಮುರುಗೇಶಪಾಳ್ಯದಲ್ಲಿ ವಾಸಿಸುತ್ತಿರುವ ಮಹಿಳೆ ನಗರದ ಪ್ರತಿಷ್ಠಿತ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದು, ತಾನು ಎಚ್ಎಸ್ಆರ್ ಲೇಔಟ್ನಿಂದ ಮುರುಗೇಶಪಾಳ್ಯವರೆಗಿನ taxi aggregatorರಿಂದ ಕ್ಯಾಬ್ ಬುಕ್ ಮಾಡಿದ್ದಾಗಿ ಹೇಳಿದ್ದಾರೆ. ಆಕೆಯ ಮನೆಯ ಮುಂದೆಯೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಸಂತ್ರಸ್ತೆ ಮತ್ತು ಚಾಲಕನ ನಡುವೆ ವಾಗ್ವಾದ ನಡೆದಿರುವುದು ಕಂಡುಬರುತ್ತದೆ. ದೇವರಾಜುಲು ತಾನು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ ಎಂದು ಹೇಳಿಕೊಂಡಿದ್ದಾನೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ಹಲವು ಅನುಮಾನಗಳಿದ್ದು, ಮಹಿಳೆ ಚಾಲಕನ ವಿರುದ್ದ ಕೂಗಾಡುವುದನ್ನು ಯಾಕೆ ಯಾರೂ ಕೇಳಲಿಲ್ಲ ಅಥವಾ ಕೇಳಿಸಿಕೊಂಡು ಏನಾಗಿದೆ ಎಂದು ನೋಡಿಲ್ಲ. ಪ್ರಯಾಣದ ದುಡ್ಡಿನ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದೆಯೇ ಎಂದು ತನಿಖೆಯ ಮೂಲಕ ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಎಸ್. ಮುರುಗನ್, ಹೆಚ್ಚುವರಿ ಪೊಲೀಸ್ ಆಯುಕ್ತರು (ಪೂರ್ವ), “ಮುರುಘೇಶಪಾಳ್ಯದಲ್ಲಿ ಮುಂಜಾನೆ 3.30 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಆಕೆ ತನ್ನ ಸ್ನೇಹಿತನ ಮನೆಯಿಂದ ಮನೆಗೆ ಮರಳಲು ಕ್ಯಾಬ್ ಬುಕ್ ಮಾಡಿದ್ದಳು. ಒಂದು ಪ್ರಕರಣ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ದಾಖಲಾಗಿದೆ- ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ, ತನಿಖೆಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಆರೋಪಿಯು ಕಾರಿನ ಮಾಲೀಕರೊಂದಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಅವರು taxi aggregatorಗೆ ವಾಹನವನ್ನು ಸೇರಿಸಿದ್ದು ಅವರು 2020ರ ಆರಂಭದಿಂದಲೂ ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮತ್ತು ಆರೋಪಿ ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವು ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ಜನಪ್ರಿಯ ಪ್ರವಾಸಿ ತಾಣ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಆಕೆಯ ಸ್ನೇಹಿತನ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದರು. ಕರ್ನಾಟಕ ಪೊಲೀಸರು ರೈಲು ಟಿಕೆಟ್ ನಂತಹ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ಐವರು ಅಪರಾಧಿಗಳನ್ನು ಬಂಧಿಸಿದ್ದರು. ತರುವಾಯ, ಅವರು ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ದತ್ತಾಂಶ ಪ್ರಕಾರ, 2020 ಕರ್ನಾಟಕದಲ್ಲಿ 3,246 ಹಲ್ಲೆ ಪ್ರಕರಣಗಳು ಮತ್ತು 446 ಲೈಂಗಿಕ ಕಿರುಕುಳ ಪ್ರಕರಣಗಳನ್ನು ವರದಿಯಾಗಿದೆ ಎಂದು ಬಹಿರಂಗಪಡಿಸಿದೆ. ಒಟ್ಟು 17,003 ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಆಂಧ್ರಪ್ರದೇಶವು 1,009 ಪ್ರಕರಣಗಳನ್ನು ಹೊಂದಿದೆ; ಏತನ್ಮಧ್ಯೆ, ತೆಲಂಗಾಣದಲ್ಲಿ 2,520 ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳು ಮತ್ತು 737 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದೆ.
ದಕ್ಷಿಣ ಭಾರತದ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡು ಒಟ್ಟು 3,054 ಪ್ರಕರಣಗಳನ್ನು ದಾಖಲಿಸಿದ್ದು, ಇದರಲ್ಲಿ ಕೇರಳ 2,353 ಮತ್ತು ತಮಿಳುನಾಡು 701 ಪ್ರಕರಣಗಳನ್ನು ದಾಖಲಿಸಿದೆ. ಎರಡು ರಾಜ್ಯಗಳಲ್ಲಿ 1,193 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿಯು 25 ಹಲ್ಲೆ ಪ್ರಕರಣ ಮತ್ತು ಲೈಂಗಿಕ ಕಿರುಕುಳದ ಶೂನ್ಯ ಪ್ರಕರಣಗಳನ್ನು ದಾಖಲಿಸಿದೆ ಎಂದು ಡೇಟಾ ಬಹಿರಂಗಪಡಿಸಿದೆ.