• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

CAAಗೆ ಒಂದು ವರ್ಷ; ಮರೆಯಾಗದ ಪ್ರತಿಭಟನೆ, ಗೋಲಿಬಾರ್‌ನ ಕರಾಳ ನೆನಪುಗಳು

by
December 11, 2020
in ಅಭಿಮತ
0
CAAಗೆ ಒಂದು ವರ್ಷ; ಮರೆಯಾಗದ ಪ್ರತಿಭಟನೆ
Share on WhatsAppShare on FacebookShare on Telegram

ಮೊದಲ ಬಾರಿ ಪ್ರಧಾನಿಯಾಗಿದ್ದಾಗ ದೇಶವನ್ನು‌ ಹಲವು ದಶಕಗಳ ಕಾಲ ಹಿಂದಕ್ಕೆ ಕರೆದೊಯ್ಯುವಂತಹ ಆರ್ಥಿಕ ನೀತಿಯನ್ನು ಅಳವಡಿಸಿದ ನರೇಂದ್ರ ಮೋದಿಯವರು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎರಡನೇ ಬಾರಿ ಭಾರಿ ಬಹುಮತದೊಂದಿಗೆ ಆಯ್ಕೆಯಾಗಿ ಮತ್ತೆ ಪ್ರಧಾನಿಯಾದಾಗ ವಿಭಜನಕಾರಿ ಮತ್ತು ದ್ವೇಷ ರಾಜಕಾರಣವನ್ನು ಪ್ರೋತ್ಸಾಹಿಸುವ ಕಾಯ್ದೆಗಳನ್ನು ಜಾರಿಗೆ ತಂದರು. ಅವುಗಳಲ್ಲಿ ಹಲವು ಕಾಯ್ದೆಗಳು ಸಂಸತ್ತಿನಲ್ಲಿ ಚರ್ಚೆಯನ್ನೂ ಕಾಣಲಿಲ್ಲ. ಪ್ರತಿ ಕಾಯ್ದೆ ಮಂಡಿಸುವಾಗಲೂ ಪ್ರಧಾನಿಯೊಬ್ಬರಿಗೆ ಇರಬೇಕಾದ ಸೂಕ್ಷ್ಮತೆ, ರಾಜಕೀಯ ಪ್ರೌಢಿಮೆ, ಗಂಬೀರತೆಗಳನ್ನೆಲ್ಲಾ ಬದಿಗಿಟ್ಟು ಒಬ್ಬ ಸಾಮಾನ್ಯ ಪಂಚಾಯತ್ ಸದಸ್ಯ ಪಾಲಿಸುವ ಶಿಷ್ಟಾಚಾರವನ್ನೂ ಪಾಲಿಸದೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರನ್ನು ಗೇಲಿ ಮಾಡುವ ಭಾಷಣ ಮಾಡುವುದು,ಆ ಮೂಲಕ ದೇಶದ ಗಮನವನ್ನು ಕ್ಷುಲ್ಲಕ ವಿಷಯಗಳೆಡೆಗೆ ಸೆಳೆಯುವ ಹುನ್ನಾರದಂತಿದ್ದವು ಅವರ ವರ್ತನೆಗಳು.

ADVERTISEMENT

Also Read: ಪೌರತ್ವ ಕಾನೂನು ವಿರುದ್ಧ `ದಂಗೆ’ಯೆದ್ದ INDIA

ಟ್ರಿಪಲ್ ತಲಾಖ್ ನಿಷೇಧ,ಆರ್ಟಿಕಲ್ 370 ರದ್ದು ಮುಂತಾದ ಕಾಯ್ದೆಗಳನ್ನು ಜಾರಿಗೆ ತಂದಾಗ ದೇಶದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು, ಗಲಾಟೆ ಭುಗಿಲೆದ್ದಿದ್ದವು. ಆದರೆ ಈ ದೇಶದ ಹದಿನಾಲ್ಕು ಪ್ರತಿಶತ ಜನರ ಅಸ್ತಿತ್ವವನ್ನೂ, ಪೌರತ್ವವನ್ನು ಪ್ರಶ್ನಿಸುವ, ಸಾರಾಸಗಟಾಗಿ ದೇಶದ ಪ್ರಜೆಗಳೇ ಅಲ್ಲ ಎಂದು ಘೋಷಿಸುವ ಪೌರತ್ವ ಕಾಯ್ದೆ ಜಾರಿಗೆ ಬಂದಾಗ ಇಡೀ ದೇಶ ಪ್ರಕ್ಷಬ್ಧವಾಯಿತು. ಪ್ರತಿಭಟನೆ, ಮುಷ್ಕರ, ಗಲಭೆ, ಸರ್ಕಾರ ಪ್ರಾಯೋಜಿತ ದೊಂಬಿ, ಪೊಲೀಸ್ ಗೋಲಿಬಾರ್‌‌ಗಳು ಸರ್ವೇ ಸಾಮಾನ್ಯವಾಗಿಬಿಟ್ಟವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೊದ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದ ನಿರಾಶ್ರಿತ ‌ಮತ್ತು ಶೋಷಿತ ಹಿಂದೂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧರಿಗೆ ಆಶ್ರಯ ನೀಡುವ ಯೋಜನೆ ಇದು ಎಂದಷ್ಟೇ ಪ್ರಚಾರ ಪಡೆದಿದ್ದ ಕಾಯ್ದೆ ಮುಂದೆ ದಾಖಲೆಗಳಿಲ್ಲದ ಭಾರತೀಯರನ್ನು ಡಿಟೆಂಷನ್ ಕ್ಯಾಂಪಿನಲ್ಲಿ ಇಡಲಾಗುವುದು ಎನ್ನುವವರೆಗೆ ಮುಂದುವರೆಯಿತು.

Also Read: ದೆಹಲಿ ಗಲಭೆ ಪ್ರಕರಣ; ಚಾರ್ಜ್‌ ಶೀಟ್‌ ನಲ್ಲಿ ʼಪೊಲೀಸ್‌ʼ ಬುದ್ಧಿ ತೋರಿದ ದೆಹಲಿ ತನಿಖಾ ತಂಡ

ತಲಾಂತರದಿಂದಲೂ ಇಲ್ಲೇ ವಾಸಿಸುತ್ತಿದ್ದವರ ಆಕ್ರೋಶ ಭುಗಿಲೆದ್ದದ್ದೇ ಆಗ. ಜಾತ್ಯಾತೀತ ತಳಹದಿಯ ಸಂವಿಧಾನದ ಮೇಲಿನ ಸರಕಾರದ ಅತಿದೊಡ್ಡ ಪ್ರಹಾರವನ್ನು ಎದುರಿಸಲು ದೊಡ್ಡ ಮಟ್ಟದ ಪ್ರತಿರೋಧವೇ ಎದುರಾಯಿತು. ಜೊಯೆಗೆ ಅಸ್ಸಾಮಿನ ಎನ್.ಆರ್.ಸಿಯ ಮೊದಲ ಪಟ್ಟಿಯಲ್ಲಿ ಸುಮಾರು 25 ಲಕ್ಷದಷ್ಟು ಗೂರ್ಖಾ ಸಮಯದಾಯದವರ ಹೆಸರೇ ಇರಲಿಲ್ಲ. ವಲಸಿಗರನ್ನು ಹೊರಹಾಕುವ ಹೆಸರಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ನೆಲೆಸಿದವರನ್ನು ಪರರನ್ನಾಗಿಸುವ ಹುನ್ನಾರವಿದು ಎನ್ನುವ ಕೂಗು ಅಸ್ಸಾಮಿನಲ್ಲಿ ಮೊದಲು ಎದ್ದಿದ್ದೇ ಈ ಪಟ್ಟಿ ಬಿಡುಗಡೆ ಆದ ಮೇಲೆ.ವಿಪರ್ಯಾಸವೆಂದರೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ದುರ್ಗಾ ಖಾತಿವಾಡ, ಸ್ವಾತಂತ್ರ್ಯ ಹೋರಾಟಗಾರ ಛಬಿಲಾಲ್ ಉಪಾಧ್ಯಾಯ ಅವರ ಕುಟುಂಬವೂ ಪಟ್ಟಿಯಲ್ಲಿರಲಿಲ್ಲ.

Also Read: ʼCAA ವಿರುದ್ಧದ ಪ್ರತಿಭಟನೆಯಲ್ಲಿ ಒಗ್ಗಟ್ಟು ಮೂಡಿಬರಲಿʼ 

ಭಾರತದ ಒಂದಿಡೀ ಸಮುದಾಯವನ್ನೇ ಕಾನೂನು ಬಾಹಿರ ವಲಸಿಗರು ಎಂದು ಬಿಂಬಿಸುವ ಹುನ್ನಾರದ ವಿರುದ್ಧವಾಗಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆ, ಮುಷ್ಕರ ನಡೆದಿದ್ದವು.‌ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಮಟ್ಟಹಾಕಲು ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು, ಆಡಳಿತ ವರ್ಗವನ್ನು ಬಳಸಿಕೊಂಡದ್ದು ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಂತೆ ದಾಖಲಾಗಲಿದೆ.

ಕರ್ನಾಟಕದ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಘಟನೆಗೆ ಸಂಬಂಧವೇ ಇಲ್ಲದ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡರು. ಪರಿಸ್ಥಿತಿಯ ನಿಯಂತ್ರಣಕ್ಕೆಂದು ನಿಯೋಜನೆಯಾಗಿದ್ದ ಪೊಲೀಸರೇ ‘ಒಂದು ಜೀವವೂ ಹೋಗಿಲ್ಲವಲ್ಲಾ’ ಎಂದು ಮಾತಾಡಿಕೊಳ್ಳುವುದು ರೆಕಾರ್ಡ್ ಆಗಿ, ಹಿಂದುತ್ವದ ಪ್ರತಿಪಾದಕರನ್ನು ಮೆಚ್ಚಿಸಲು ಗಲಭೆಯ ಹಿಂದೆ ಸ್ವತಃ ಸರಕಾರವೇ ಇದೆಯೇನೋ ಅನ್ನಿಸುವಂತೆ ಮಾಡಿತ್ತು.

Also Read: ‘ಯುವಜನರನ್ನು ತಡೆಯುವುದು ಸರ್ಕಾರದ ಅಂತ್ಯದ ಆರಂಭ’ – ಭವ್ಯ ನರಸಿಂಹಮೂರ್ತಿ  

ಬಿಜೆಪಿಯ ರಾಷ್ಟ್ರೀಯ ನಾಯಕರೇ ‘ಗೋಲಿ ಮಾರೋ’ದಂತಹ ಹೇಳಿಕೆಗಳನ್ನು ಕೊಟ್ಟು ದೆಹಲಿಯಲ್ಲಿ ಗಲಭೆಗೆ ಪ್ರಚೋದನೆ ಕೊಟ್ಟ ಘಟನೆಯೂ ನಡೆದಿತ್ತು. CAA ವಿರೋಧಿ ಮತ್ತು ಪರ ಪ್ರತಿಭಟನೆ, ರ‌್ಯಾಲಿಯ ಸಂದರ್ಭದಲ್ಲಿನ ದೆಹಲಿ ಗಲಭೆಯಲ್ಲಿ 45ಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಪೊಲೀಸರ ಮೇಲೆ ಕಲ್ಲು ತೂರಾಟ, ಗುಪ್ತಚರ ಇಲಾಖೆ ಅಧಿಕಾರಿ ಹತ್ಯೆ, ಪೆಟ್ರೋಲ್‌ ಬಾಂಬ್‌ ಎಸೆತ ಸೇರಿದಂತೆ ಸಾಕಷ್ಟು ಘಟನೆಗಳು ನಡೆದಿದ್ದವು. ಆ ಬಳಿಕ ಘರ್ಷಣೆಯನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿದ್ದ ಕಿಡಿಗೇಡಿಗಳು ಬಂದೂಕಿನಿಂದ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಬೆದರಿಸುವ ತಂತ್ರ, ಪ್ರತಿಭಟನಾಕಾಋ ಮೇಲೆಯೇ ಗಲಭೆಯ ಆರೋಪವನ್ನು ಹೊರಿಸುವ ಸಂಚು ನಡೆದಿತ್ತು . ಆಘಾತಕಾರಿ ಸಂಗತಿ ಎಂದರೆ ಇಡೀ ಘಟನೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಗಲಭೆಕೋರರ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳದೆ ಸುಮ್ಮನೆ ನಿಂತದ್ದು.

Also Read: NRC-CAA ವಿರುದ್ಧ ಹೋರಾಟಕ್ಕೆ ಹೊಸ ಆಯಾಮ ನೀಡಿದ ಮಂಗಳೂರು ಸಮಾವೇಶ

ಜಾಮಿಯಾ ಯುನಿವರ್ಸಿಯ ಕ್ಯಾಂಪಸ್ಸಿನೊಳಗೆ ನಿಯಮ ಮೀರಿ, ಮುಖ ಮುಚ್ಚಿಕೊಂಡ ಯುವಕನೊಬ್ಬ ಪೊಲೀಸರೆದುರೇ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸುತ್ತಿದ್ದುದು ಇಡೀ ದೇಶದಲ್ಲಿ ವಿವಾದ ಸೃಷ್ಟಿಸಿತ್ತು. ಜಾಮಿಯಾದ ವಿದ್ಯಾರ್ಥಿನಿ CAA ವಿರೋಧಿ ಹೋರಾಟಗಾರ್ತಿ ಸಫೂರಾ ಝರ್ಗಾರ್ ಇನ್ನೂ ಜೈಲಿನಲ್ಲೇ ಇದ್ದಾರೆ. ಗರ್ಭಿಣಿ ಎಂದೂ ಪರಿಗಣಿಸದೆ ಹೋರಾಟಗಾರರನ್ನು ಬಂಧಿಸಿರುವುದನ್ನು , ಕಠಿಣ UAPA ಕಾಯ್ದೆ ಹೇರಿರುವುದನ್ನು ಲಂಡನ್ ಸೇರಿದಂತೆ ವಿಶ್ವಾದ್ಯಂತ ವಿದ್ವಾಂಸರು ಖಂಡಿಸಿದ್ದಾರೆ.

Also Read: CAA ಬಗ್ಗೆ  ಜನರಿಗೆ ವಿವರ ನೀಡುವಷ್ಟು ಮಾಹಿತಿ ರಾಜ್ಯ ಕಾಂಗ್ರೆಸ್ಸಿಗರಿಗಿಲ್ಲ!

CAA ವಿರೋಧಿ ಅಭಿಯಾನಕ್ಕೆ ಕೈ ಜೋಡಿಸಿದ JNU ಕ್ಯಾಂಪಸ್ಸಿನಲ್ಲೂ ಮುಸುಕುಧಾರಿಗಳು ನುಗ್ಗಿ ದಾಂಧಲೆ ಎಬ್ಬಿಸಿದ್ದರು. ಅಲ್ಲೂ ಪೊಲೀಸರು ಗಲಭೆಕೋರರ ಬೆಂಬಲಕ್ಕೆ ಅಮಾಯಕರ ಮೇಲೆ ಕೇಸು ದಾಖಲಿಸಿ ಬಂಧಿಸಿದ್ದರು

ಒಂದು ಕಡೆಯಲ್ಲಿ ಪೊಲೀಸರ ಮತ್ತು ಪ್ರಭುತ್ವದ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟರೆ ಸಂವಿಧಾನದ ಮೌಲ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬಂತೆ ಭಾರತದ ವಿರುದ್ಧ ಇಡೀ ಪ್ರಪಂಚ ಧ್ವನಿ ಎತ್ತಿತು.

Also Read: CAA/NRCಯ ಕುರಿತು ಕೇಂದ್ರ ಗೊಂದಲ ಸೃಷ್ಟಿಸುತ್ತಿದೆ – ಕಣ್ಣನ್ ಗೋಪೀನಾಥನ್

ಅಮೆರಿಕದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಗೃಹ ಸಚಿವ ಅಮಿತ್ ಶಾ ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಅಮೆರಿಕದ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದರ ಬೆನ್ನಲ್ಲೇ ಭಾರತ ಮತ್ತು ಅಮೆರಿಕಾ ಎರಡು ರಾಷ್ಟ್ರಗಳ ಸಚಿವರ ಮಟ್ಟದ ದ್ವಿಪಕ್ಷೀಯ ಸಭೆ ರದ್ದಾಗಿತ್ತು. ಇನ್ನು ಅಮೆರಿಕದ ಆಗಿನ ಸಂಸದೆ ಪ್ರಮೀಳಾ ಜಯಪಾಲ್ ಅವರು ಜಮ್ಮು–ಕಾಶ್ಮೀರದಲ್ಲಿನ ಸ್ಥಿತಿಗತಿಯ ಕುರಿತು ಹಾಗೂ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ “ಭಾರತ ಸರ್ಕಾರವು ಭಿನ್ನಾಭಿಪ್ರಾಯಗಳನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ಬಾಂಗ್ಲಾ ಪ್ರಧಾನಿ ಕಾರ್ಯಾಲಯವು “ಭಾರತದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇದ್ದರೆ, ಅವರನ್ನು ಇಲ್ಲಿಗೆ ಕಳುಹಿಸಿ. ನಾವು ಅವರನ್ನು ಸ್ವಾಗತಿಸುತ್ತೇವೆ. ಆದರೆ, ಅದಕ್ಕೂ ಮುನ್ನ ಅವರೆಲ್ಲರೂ ಬಾಂಗ್ಲಾದೇಶದವರೇ ಎಂಬುದನ್ನು ಭಾರತವು ಸಾಬೀತುಪಡಿಸಬೇಕು. ಮತ್ತು ಭಾರತದಲ್ಲಿರುವ ಬಾಂಗ್ಲಾ ಅಕ್ರಮ ವಲಸಿಗರ ಪಟ್ಟಿ ನೀಡಿ” ಎಂದು ಪತ್ರ ಬರೆದಿದ್ದರು.

Also Read: CAA ಹಾಗೂ NRCಯ ಬೇರುಗಳನ್ನು ವಿವರಿಸಿದ ರಾಜಕೀಯ ವಿಶ್ಲೇಷಕ ಡಿ ಉಮಾಪತಿ

ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟವಾದ ‘ಇಸ್ಲಾಮಿಕ್ ಸಹಕಾರ ಸಂಘಟನೆ’’ (ಒಐಸಿ), “ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸವಾಗಬೇಕು. ಭಾರತದಲ್ಲಿನ ಬೆಳವಣಿಗೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ. ಈ ಬೆಳವಣಿಗೆಗಳು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಸ್ಥಿತಿಗತಿಯ ಮೇಲೆ ಪ್ರಭಾವ ಬೀರುತ್ತವೆ” ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಇನ್ನು ಕಾಯ್ದೆಯನ್ನು ಲೋಕಸಭೆಯಲ್ಲಿ ಮಂಡಿಸುವುದಕ್ಕೆ ಮುನ್ನವೇ ಐರೋಪ್ಯ ಒಕ್ಕೂಟವು, “ಭಾರತ ಮತ್ತು ಐರೋಪ್ಯ ರಾಷ್ಟ್ರಗಳು ಧಾರ್ಮಿಕ ಅಸಮಾನತೆಯನ್ನು ನಿರಾಕರಿಸುತ್ತವೆ. ಪೌರತ್ವ ತಿದ್ದುಪಡಿ ಕಾನೂನು ಭಾರತದ ಸಂವಿಧಾನಕ್ಕೆ ಬದ್ಧವಾಗಿರುತ್ತದೆ ಎಂದು ನಿರೀಕ್ಷಿಸಿದ್ದೇವೆ” ಎಂದು ಹೇಳಿತ್ತು.

Also Read: ದೇಶದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ CAA/NRC ಅನಗತ್ಯ – ಸಸಿಕಾಂತ್ ಸೆಂಥಿಲ್

ಇವೆಲ್ಲದರ ಮಧ್ಯೆ ದೆಹಲಿಯ ಶಾಹಿನ್ ಭಾಗ್‌ನಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ ಸಾವಿರಾರು ಜನರು ಒಂದೂವರೆ ತಿಂಗಳಿಗೂ ಹೆಚ್ಚಿನ ಕಾಲ ನಿರಂತರ ಪ್ರತಿಭಟನೆ ಮಾಡುವ ಮೂಲಕ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವನ್ನು ಖಂಡಿಸಿದ್ದರು. ಕೇಂದ್ರ ಸರ್ಕಾರದ ಮಂತ್ರಿಗಳು, ಬಿಜೆಪಿ ಸಂಸದರು ದೆಹಲಿಯ ಸಿಎಎ ಹೋರಾಟಗಾರರ ಬಗ್ಗೆ ಮಾಡದೆ ಇರುವ ಟೀಕೆಗಳೇ ಇಲ್ಲ. ಸ್ವತಃ ಬಿಜೆಪಿ ನಾಯಕರೇ ಅತ್ಯಂತ ಕೀಳು ಮಟ್ಟದ ಭಾಷಾ ಪ್ರಯೋಗ ಮಾಡಿದ್ದರು. ಶಾಹಿನ್ ಭಾಗ್ ಪ್ರತಿಭಟನೆಯನ್ನು ದೆಹಲಿಯ ಮತದಾನದಲ್ಲಿ ಬಳಸಿಕೊಂಡು ಹಿಂದೂ ಮತ ಕ್ರೋಢೀಕರಣ ಮಾಡುವ ತಂತ್ರವೂ ನಡೆಯಿತು. ಆದರೆ ಅವು ಯಾವುವೂ ಫಲ ನೀಡಲಿಲ್ಲ. ಈಗ 2020ನೇ ಸಾಲಿನ ವಿಶ್ವದ ಸ್ಪೂರ್ತಿದಾಯಕ ಮತ್ತು ಪ್ರಭಾವಶಾಲಿ 100 ಮಹಿಳೆಯರ ಪಟ್ಟಿಯನ್ನು ಅಂತರಾಷ್ಟ್ರೀಯ ಪ್ರಸಾರ ಸಂಸ್ಥೆ ಬಿಬಿಸಿ ಪ್ರಕಟಪಡಿಸಿದ್ದು, ಅದರಲ್ಲಿ ಶಾಹೀನ್‌ ಭಾಗ್‌ ಪ್ರತಿಭಟನೆಯನ್ನು ಮುನ್ನಡೆಸಿ, ಶಾಹಿನ್‌ ಬಾಗ್‌ ದಾದಿ ಎಂದೇ ಪ್ರಸಿದ್ದರಾಗಿರುವ 82 ವರ್ಷದ ಬಿಲ್ಕೀಸ್‌ ಬಾನು ಕೂಡ ಒಬ್ಬರು. ಇಡೀ CAA ಪ್ರತಿಭಟನೆಗೆ ನೈತಿಕ ಬೆಂಬಲ ನೀಡಿದ್ದೆ ಈ ಬಿಲ್ಕೀಸ್ ಬಾನು.

Also Read: CAA ಪ್ರತಿಭಟನೆಯಲ್ಲಿ ಅಶಾಂತಿ ಸೃಷ್ಟಿಸಲು ಉ.ಪ್ರ. ಪೊಲೀಸರ ಕುಮ್ಮಕ್ಕು?

ಕರೋನಾ ಲಾಕ್‌ಡೌನ್‌ ಬಳಿಕ ದೇಶಾದ್ಯಂತ ಪೌರತ್ವ ತಿದ್ದುಪಡಿ ವಿರುದ್ದದ ಹೋರಾಟ ನಿಧಾನವಾಗಿ ಕಡಿಮೆಯಾಗಿತ್ತು. ಆದರೆ ದೆಹಲಿಯ ಶಾಹಿನ್‌ ಭಾಗ್‌ನಲ್ಲಿ ನಡೆಯುತ್ತಿದ್ದ ನಿರಂತರ ಹೋರಾಟ ಮಾತ್ರ ಅಂತ್ಯವಾಗಿರಲಿಲ್ಲ. ನರೇಂದ್ರ ಮೋದಿ ಭಾರತದಲ್ಲಿ ಜನತಾ ಕರ್ಫ್ಯೂ ಆಚರಣೆ ಮಾಡಲು ಕರೆ ಕೊಟ್ಟಿದ್ದರಿಂದ ಶಾಹಿನ್‌ಭಾಗ್‌ನ ಹೋರಾಟಗಾರರು ಮಾರ್ಚ್‌ 31ರ ತನಕ ಹೋರಾಟಕ್ಕೆ ಮಧ್ಯಂತರ ಬ್ರೇಕ್ ನೀಡಲು ನಿರ್ಧರಿಸಿದ್ದರು. ಕರೋನಾ ಕಾಲದಲ್ಲಿ CAA ಸಂಬಂಧಿ ಯಾವ ಚಟುವಟಿಕೆಗಳೂ ನಡೆಯಲಿಲ್ಲ. ಈಗ ನಿಧಾನವಾಗಿ ಕರೋನಾ ಅಬ್ಬರ ಮುಗಿಯುತ್ತಿದೆ. ಮತ್ತೆ CAA ಮುನ್ನಲೆಗೆ ಬರುತ್ತಾ? ಈ ದೇಶದ ಸಂವಿಧಾನದ ಮೂಲ ತತ್ವವನ್ನೆ ಧಿಕ್ಕರಿಸಹೊರಟವರನ್ನು ಜನತಾ ಹೋರಾಟ ವಿರೋಧಿಸುತ್ತದಾ? ರೈತ ಚಳುವಳಿಯಂತೆಯೇ ಎಲ್ಲರನ್ನೂ ಒಳಗೊಂಡ ಮತ್ತೊಂದು ಚಳುವಳಿ ರೂಪುಗೊಳ್ಳುತ್ತದಾ? ಅಥವಾ CAAಯೂ ಬಿಜೆಪಿಯ ಒಂದು ಚಾಣಾಕ್ಷ ,ವಿಭಜನಕಾರಿ ನೀತಿಯಾಗಿದ್ದು ಎಂದೂ ಜಾರಿಗೆ ಬರದೆ ಆದರೆ ಕತ್ತಲಲ್ಲೂ ಮತ ತಂದುಕೊಡಬಲ್ಲ,ಅಧಿಕಾರ ದೊರಕಿಸಿಕೊಡಬಲ್ಲ ವಿಚಾರವಾಗಿಯೇ ಉಳಿದು ಬಿಡುತ್ತದಾ? CAA ಕಾಯ್ದೆ ಮಂಡನೆಯಾಗಿ ವರ್ಷವೊಂದು ಕಳೆಯುವ ಹೊತ್ತಿಗೆ ಎಲ್ಲ ಪ್ರಶ್ನೆಗಳೂ ಮೂಡುತ್ತವೆ.

Also Read: ತಿಹಾರ್‌ ಜೈಲಿನಿಂದಲೇ ʼರಂಝಾನ್‌ʼ ಆರಂಭಿಸುವಂತಾದ CAA ವಿರೋಧಿ ಗರ್ಭಿಣಿ ಹೆಣ್ಣು ಮಗಳು!

Previous Post

ಪ್ರಧಾನಿ ಮೋದಿ ಕುರಿತು ಯೂರೋಪ್‌ನಲ್ಲಿ ಸುಳ್ಳು ಪ್ರಚಾರ; ANI ಹಾಗೂ ಶ್ರೀವಾಸ್ತವ ಗ್ರೂಪ್‌ ವಿರುದ್ದ ಆರೋಪ

Next Post

ಅವನತಿಯತ್ತ ಸಾಗುತ್ತಿವೆ ಕುಲಕಸುಬುಗಳು

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಅವನತಿಯತ್ತ ಸಾಗುತ್ತಿವೆ ಕುಲಕಸುಬುಗಳು

ಅವನತಿಯತ್ತ ಸಾಗುತ್ತಿವೆ ಕುಲಕಸುಬುಗಳು

Please login to join discussion

Recent News

Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada