ಭಾರತದ ನೆರೆಯ ರಾಷ್ಟ್ರಗಳಾದ ಅಫಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾ ದೇಶದಲ್ಲಿ ಅಲ್ಲಿನ ಮೂಲಭೂತವಾದಿಗಳಿಂದ ಧಾರ್ಮಿಕ ಕಿರುಕುಳಕ್ಕೀಡಾಗಿ ದೇಶದೊಳಗೆ ಅಕ್ರಮವಾಗಿ ನೆಲೆಸಿರುವ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಪೌರತ್ವ ನೀಡುವ ಈ ಕಾಯಿದೆಯ ಸಾಂವಿಧಾನಿದ ಚೌಕಟ್ಟಿನೊಳಗೇ ಇದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಇದು ಮುಸ್ಲಿಂ ವಲಸಿಗರನ್ನು ಮತ್ತು ಮುಸ್ಲಿಮೇತರ ಬಹುಸಂಖ್ಯಾತ ನೆರೆಯ ರಾಷ್ಟ್ರಗಳನ್ನು ತನ್ನ ವ್ಯಾಪ್ತಿಯಿಂದ ಹೊರಗಿಟ್ಟ ಕಾರಣ ಗಂಭೀರ ಚರ್ಚೆಗೆ ಗ್ರಾಸವಾಗಿತ್ತು.
ಧಾರ್ಮಿಕ ದೃಷ್ಟಿ ಕೋನವನ್ನು ತರುವ ಮೂಲಕ ಭಾರತೀಯ ಪೌರತ್ವದ ಪ್ರಮುಖ ಪರಿಕಲ್ಪನೆಗಳಿಗೆ ತಂದ ಬದಲಾವಣೆಗಳು, ನಾಗರಿಕರ ರಾಷ್ಟ್ರೀಯ ನೋಂದಣಿಯ ಬಗೆಗಿನ ಅನಿಶ್ಚಿತತೆಗಳು ಮತ್ತು ಅದರ ಸ್ಪಷ್ಟ ಪೂರ್ವಗಾಮಿ ರಾಷ್ಟ್ರೀಯ ಜನಸಂಖ್ಯಾ ದಾಖಲೆಯ ಬಗ್ಗೆ ಆತಂಕಗಳು ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಕ್ಕೆ ಗ್ರಾಸವಾದವು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
CAA-NPR-NRCಯನ್ನು ಪ್ರಶ್ನಿಸಿ ರಾಷ್ಟ್ರದಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಸುಮಾರು 140 ಕ್ಕೂ ಹೆಚ್ಚು ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದವು. ಅನೇಕ ರಾಜ್ಯ ಸರ್ಕಾರಗಳು CAA ಮತ್ತು NRC ಯನ್ನು ಕಾರ್ಯಗತಗೊಳಿಸದಿರಲು ನಿರ್ಧರಿಸಿದವು ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಕಾಯಿದೆಯ ಮೂಲಭೂತವಾಗಿ ತಾರತಮ್ಯದ ಸ್ವರೂಪದ ಬಗ್ಗೆ ಪ್ರತಿಕ್ರಿಯಿಸಲು ನಿರ್ಬಂಧಿಸಲ್ಪಟ್ಟವು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರು ಸಹ ಸುಪ್ರೀಂ ಕೋರ್ಟ್ನಲ್ಲಿ ಮಧ್ಯಪ್ರವೇಶಿಸಿ ಸಿಎಎ ಜಾರಿಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.ಈ ಶಾಸನವು ದೇಶಾದ್ಯಂತ ಸಾಮೂಹಿಕ ನಾಗರಿಕ ಪ್ರತಿಭಟನಾ ಆಂದೋಲನಗಳನ್ನು ಹುಟ್ಟುಹಾಕಿತು. ಆದರೆ ಸರ್ಕಾರವು ಸಿಆರ್ಪಿಸಿ ಸೆಕ್ಷನ್ 144 ಆದೇಶಗಳನ್ನು ಜಾರಿ ಮಾಡುವ ಮೂಲಕ, ಪೊಲೀಸ್ ದೌರ್ಜನ್ಯ, ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಇತ್ಯಾದಿ ಕ್ರಮಗಳ ಮೂಲಕ ಜನರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿತು.
ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತ್ವರಿತ ಮತ್ತು ಅಧಿಕೃತ ಘೋಷಣೆಗಾಗಿ ಅನೇಕರು ಸುಪ್ರೀಂ ಕೋರ್ಟ್ನತ್ತ ನೋಡುತ್ತಿದ್ದರೆ, ಸಿಜೆಐ ಬೊಬ್ಡೆ ನೇತೃತ್ವದ ಸುಪ್ರಿಂ ಕೋರ್ಟು ಶಬರಿಮಲೆ ದೇವಾಲಯದಲ್ಲಿ ಎದ್ದಿರುವ ಅಗತ್ಯ ಧಾರ್ಮಿಕ ಆಚರಣೆಗಳ ಪ್ರಶ್ನೆಗಳಿಗೆ ಆದ್ಯತೆ ನೀಡಲು ನಿರ್ಧರಿಸಿತು.
ಅದೇನೇ ಇದ್ದರೂ, ಒಂದು ವರ್ಷದ ಅವಧಿಯಲ್ಲಿ ಹೈಕೋರ್ಟ್ಗಳು ಜಾರಿಗೊಳಿಸಿದ ಆದೇಶಗಳ ಅವಲೋಕನವು ಪ್ರತಿಭಟನಾಕಾರರ ಮೂಲಭೂತ ಮಾನವ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಅವರು ಅಳವಡಿಸಿಕೊಂಡ ಪೂರ್ವಭಾವಿ ವಿಧಾನವನ್ನು ಪ್ರತಿಬಿಂಬಿಸುತ್ತದೆ. ವಾಕ್ ಸ್ವಾತಂತ್ರ್ಯ, ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದ ಹಕ್ಕನ್ನು ರಕ್ಷಿಸಲು ಪ್ರೇರೇಪಿಸಿವೆ. ವರದಿಗಳ ಪ್ರಕಾರ, ಹಿಂಸಾತ್ಮಕ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶದಾದ್ಯಂತ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ, ಸಾವಿರಾರು ಜನರನ್ನು ಬಂಧಿಸಲಾಯಿತು ಮತ್ತು ನೂರಾರು ಎಫ್ಐಆರ್ ದಾಖಲಿಸಲಾಗಿದೆ. ಅಲಿಗಢದ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಡಿಸೆಂಬರ್ 15 ರಂದು ನಡೆದ ಹಿಂಸಾತ್ಮಕ ಪ್ರತಿಭಟನೆ ಸಂದರ್ಭದಲ್ಲೂ ಹತ್ತಾರು ಪ್ರಕರಣಗಳನ್ನು ದಾಖಲಿಸಲಾಗಿದೆ.
ಕಳೆದ 2019 ರ ಡಿಸೆಂಬರ್ 13 ರಿಂದ ಎಎಂಯು ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಡಿಸೆಂಬರ್ 15 ರಂದು ಪ್ಯಾರಾ ಮಿಲಿಟರಿ ಫೋರ್ಸ್ ಮತ್ತು ರಾಜ್ಯ ಪೊಲೀಸರು ಯಾವುದೇ ಮತ್ತು ಸರಿಯಾದ ಕಾರಣಗಳಿಲ್ಲದೆ ತಮ್ಮ ಲಾಠಿಗಳಿಗೆ ಕೆಲಸ ಕೊಟ್ಟು AMU ವಿದ್ಯಾರ್ಥಿಗಳ ಮೇಲೆ ಟಿಯರ್ ಗ್ಯಾಸ್, ರಬ್ಬರ್ ಗುಂಡುಗಳನ್ನು ಹಾರಿಸುವ ಮೂಲಕ ದೌರ್ಜನ್ಯ ನಡೆಸಿದರು. ಈ ಘಟನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಮಾಡಿದ ಮನವಿಗೆ ಅಲಹಾಬಾದ್ ಹೈಕೋರ್ಟ್ ಡಿಸೆಂಬರ್ 19 ರಂದು ಉತ್ತರ ಪ್ರದೇಶ ಸರ್ಕಾರ ಮತ್ತು ಎಎಂಯು ಆಡಳಿತದಿಂದ ಪ್ರತಿಕ್ರಿಯೆ ಕೋರಿತು. ಇದಲ್ಲದೆ, ಈ ವಿಷಯದ ತುರ್ತನ್ನು ಪರಿಗಣಿಸಿ, ಮುಖ್ಯ ನ್ಯಾಯಾಧೀಶರ ನೇತೃತ್ವದ ವಿಭಾಗೀಯ ನ್ಯಾಯಪೀಠವು ಅಲಿಗಢ ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ನಿರ್ದೇಶನ ನೀಡಿ ಗಾಯಗೊಂಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ನೆರವು ಒದಗಿಸಲು ಆದೇಶಿಸಿತು.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಎಎಂಯುನಲ್ಲಿ ನಡೆದ ಪೊಲೀಸ್ ಹಿಂಸಾಚಾರದ ವಿಚಾರಣೆಯನ್ನು ತುರ್ತಾಗಿ ನಡೆಸಲು ಭಾರತದ ಮುಖ್ಯ ನ್ಯಾಯಮೂರ್ತಿ ನಿರಾಕರಿಸಿದರು. ಅಲ್ಲದೆ ಹಿಂಸಾಚಾರವನ್ನು ನಿಲ್ಲಿಸಿದರೆ ಮರುದಿನ ಸುಪ್ರೀಂ ಕೋರ್ಟ್ ಈ ವಿಷಯವನ್ನು ಆಲಿಸಲಿದೆ ಎಂದು ನ್ಯಾಯ ಮೂರ್ತಿಗಳು ಹಿರಿಯ ವಕೀಲೆ ಇಂದಿರಾ ಜೈಸಿಂಗ್ಗೆ ಅವರಿಗೆ ತಿಳಿಸಿದರು. ಮರುದಿನ, ಅಂದರೆ ಡಿಸೆಂಬರ್ 17, 2019 ರಂದು, ರಾಷ್ಟ್ರದಾದ್ಯಂತ ಹಿಂಸಾತ್ಮಕ ಘಟನೆಗಳು ನಡೆದಿದ್ದು ಎಲ್ಲವನ್ನೂ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಅಡಿಯಲ್ಲಿ ತನಿಖೆ ಮಾಡುವುದು ಕಾರ್ಯಸಾಧ್ಯವಲ್ಲ ಎಂಬ ಕಾರಣಕ್ಕೆ, ಆಯಾ ರಾಜ್ಯದ ಹೈಕೋರ್ಟ್ಗಳಲ್ಲಿ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟು ಸೂಚಿಸಿದೆ.
ಈ ಆಧೇಶದ ನಂತರ ಅಲಹಾಬಾದ್ ಹೈಕೋರ್ಟ್ ಪೊಲೀಸ್ ದೌರ್ಜನ್ಯ ಕುರಿತ ಆರೋಪಗಳ ತನಿಖೆಯನ್ನು 5 ವಾರಗಳಲ್ಲಿ ಮಾಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶಿಸಿತು. ಫೆಬ್ರುವರಿ 24 ರಂದು ಪೋಲೀಸರೇ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಹೈ ಕೋರ್ಟು ಉತ್ತರ ಪ್ರದೇಶ ಡಿಜಿಪಿ ಅವರಿಗೆ ತಪ್ಪಿತಸ್ಥ ಪೋಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಆದೇಶಿಸಿತು. ಇದಲ್ಲದೆ ಎಎಂಯು ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಡಾ ಕಫೀಲ್ ಖಾನ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂದಿಸಲಾಯಿತು. ವೈದ್ಯರ ತಾಯಿ ನುಸ್ರತ್ ಪರ್ವೀನ್ ಅವರು ಜೂನ್ ಒಂದರಂದು ಸುಪ್ರೀಂ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದಾಗ ಕೋರ್ಟು ವಿಚಾರಣೆ ನಡೆಸದೆ ಹೈಕೋರ್ಟಿನಲ್ಲಿ ಅರ್ಜಿ ಅಲ್ಲಿಸುವಂತೆ ಸೂಚಿಸಿತು. ಅಲಹಾಬಾದ್ ಹೈ ಕೋರ್ಟು ಕಫೀಲ್ ರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿತು.
ಇದಲ್ಲದೆ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ಗಲಭೆಯಲ್ಲಿ ಪಾಲ್ಗೊಂಡ ಆರೋಪಿಗಳ ಹೆಸರು ಮತ್ತು ಚಿತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಡಿಯಲ್ಲಿ ಪ್ರಕಟಿಸುವ ಪ್ರಕ್ರಿಯೆಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ ಅಲಹಾಬಾದ್ ಹೈ ಕೋರ್ಟು ಇದಕ್ಕೆ ತಡೆ ನೀಡಿದೆ.
ಇನ್ನೊಂದು ಪ್ರಕರಣದಲ್ಲಿ ಬಾಂಬೆ ಹೈ ಕೋರ್ಟು ಸರ್ಕಾರ ಪ್ರತಿಭಟನೆ ನಡೆಸದಂತೆ ಹೇರಿದ್ದ ಸೆಕ್ಷನ್ 144 ನ್ನೆ ತೆಗೆದು ಹಾಕಿ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕನ್ನು ಎತ್ತಿ ಹಿಡಿಯಿತು. ಅಲ್ಲದೆ ಬ್ರಿಟಿಷರ ವಿರುದ್ದ ಪ್ರತಿಭಟನೆ ನಡೆಸಿದಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿತು. ಇನ್ನೊಂದು ಪ್ರಕರಣದಲ್ಲಿ ಪ್ರತಿಭಟನಕಾರರನ್ನು ದೇಶ ವಿರೋಧಿಗಳೆಂದು ಕರೆಯುವುದನ್ನು ಟೀಕಿಸಿತು. ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ಪೋಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟ ಘಟನೆಗೆ ಸಂಬಂದಿಸಿದಂತೆ ಪೋಲೀಸ್ ದೌರ್ಜನ್ಯದ ಕುರಿತು ತನಿಖೆ ನಡೆಸುವಂತೆ ರಾಜ್ಯ ಹೈ ಕೋರ್ಟು ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೆ ಪೋಲೀಸರು ಬಂದಿಸಿದ್ದ 22 ಪ್ರತಿಭಟನಾಕಾರರನ್ನು ಫೆಬ್ರುವರಿ 17 ರಂದು ಬಿಡುಗಡೆಗೊಳಿಸಿದೆ. ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ದ್ಯೋತಕ ಎಂದೂ ಹೈ ಕೋರ್ಟು ಅಭಿಪ್ರಾಯಪಟ್ಟಿದೆ.
ಸರ್ಕಾರಗಳು ವಿವಿಧ ಕಠಿಣ ಕ್ರಮಗಳ ಮೂಲಕ ಪ್ರತತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದರೂ ದೇಶದ ಹೈ ಕೋರ್ಟುಗಳು ಪ್ರತಿಭಟನಾಕಾರರ ಹಕ್ಕುಗಳನ್ನು ಎತ್ತಿ ಹಿಡಿದಿರುವುದು ಪ್ರಜಾಪ್ರಭುತ್ವ ಜೀವಂತವಾಗಿರುವ ದ್ಯೋತಕವಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಸುಪ್ರಿಂ ಕೋರ್ಟು ನಿಜಕ್ಕೂ ಹೈಕೋರ್ಟುಗಳ ಸರಿಸಮಾನಾಗಿನ್ಯಾಯ ಹಂಚಿಕೆ ಮಾಡಿದೆಯೇ ಎಂಬುದು ಮಾತ್ರ ಪ್ರಶ್ನಾರ್ಹ ವಿಚಾರವಾಗಿದೆ.
ಕೃಪೆ: ಲೈವ್ ಲಾ