ಸಂಸದೆ ಸುಮಲತಾ (sumalatha) ದೆಹಲಿಗೆ (Delhi) ಭೇಟಿ ನೀಡಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಬಂದಮೇಲೆ ಸೈಲೆಂಟ್ (Silent) ಆಗಿದ್ದಾರೆ. ತಮ್ಮ ಸ್ಪರ್ಧೆ ಬಗ್ಗೆ ಏನನ್ನೂ ಖಚಿತವಾಗಿ ಹೇಳದೇ ಹಾಗೆ ಎಲೆಕ್ಷನ್ ರೇಸ್ ನಿಂದ ಹಿಂದೆ ಸರಿದಂತಿದೆ. ಇದು ಜೆಡಿಎಸ್ ಗೆ (jds) ದೊಡ್ಡ ಮುನ್ನಡೆಯಾಗಿದ್ದು , ಜನತಾದಳ ಗೆಲುವಿಗೆ ಇನ್ನಷ್ಟು ಸನಿಹವಾಗಿದೆ. ಆದ್ರೆ ಮಂಡ್ಯದಿಂದ (Mandya) ಜೆಡಿಎಸ್ ಅಭ್ಯರ್ಥಿ ಯಾರಗ್ತಾರೆ ಎಂಬುದು ಮಾತ್ರ ಇನ್ನೂ ಫೈನಲ್ ಆಗಿಲ್ಲ . ಜೆಡಿಎಸ್(jds) ಮೂಲಗಳ ಪ್ರಕಾರ ಹೆಚ್.ಡಿ.ಕೆ (HDK) ಸ್ಪರ್ಧೆ ಮಾಡೋದು ಕನ್ಫರ್ಮ್ ಎನ್ನಲಾಗಿದೆ. ಈ ಬೆಳವಣಿಗೆ ಸಿ.ಪಿ. ಯೋಗೇಶ್ವರ್ ಗೆ (C.P.Yogeshwar) ಟೆನ್ಶನ್ ಹೆಚ್ಚಿಸಿದೆ.
ಯಾಕಂದ್ರೆ ಈ ಬಾರಿ ವಿಧಾನಸಭಾ ಚುನಾವಣೆಗೆ ಕುಮಾರಸ್ವಾಮಿ (Kumaraswamy) ಚೆನ್ನಪಟ್ಟಣದಿಂದ (chennapattana ) ಸ್ಪರ್ಧೆ ಮಾಡಿ ಯೋಹೇಶ್ವರ್ ರನ್ನ ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಹೀಗಾಗಿ ಸಿ.ಪಿ.ವೈ (C.P.Y) ತಮ್ಮ ಕ್ಷೇತ್ರ ಕಳೆದುಕೊಳ್ಳುವಂತಾಗಿತ್ತು. ಇದೀಗ ಕುಮಾರಸ್ವಾಮಿ ಮಂಡ್ಯದಿಂದ(Mandya) ಪಾರ್ಲಿಮೆಂಟ್ ಚುನಾವಣೆಗೆ ಆಯ್ಕೆಯಾದ್ರೆ ಆಗ ಚೆನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಮತ್ತೆ ಬೈ ಎಲೆಕ್ಷನ್ (Bi-Election) ನಡೆಸಿ ಶಾಸರಕ ಆಯ್ಕೆ ಮಾಡಬೇಕಾಗುತ್ತದೆ. ಆದ್ರೆ ಆ ಸ್ಥಾನಕ್ಕೆ ನಿಖಿಲ್ (Nikhil) ರನ್ನ ನಿಲ್ಲಿಸಿದ್ರೆ ತನ್ನ ಕಥೆ ಏನು ಎಂಬ ಯೋಚನೆ ಯೋಗೇಶ್ವರ್ ರನ್ನ ಕಾಡ್ತಿದೆ.
ಹೌದು , ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಿದ್ರೆ ಮತ್ತೆ ಚನ್ನಪಟ್ಟಣ ತನ್ನ ಹಿಡಿತಕ್ಕೆ ಸಿಗಲಿದೆ ಅನ್ನೋ ಯೋಗೇಶ್ವರ್ (Yogeshwar) ಲೆಕ್ಕಾಚಾರ ಉಲ್ಟಾ ಆದಂತಿದೆ. ಈ ಬಗ್ಗೆ ಅಧಿಕೃತವಾಗಿ ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಆದ್ರೂ ಇಂಥದೊಂದು ವದಂತಿ ಯೋಗೇಶ್ವರ್ ನಿದ್ದೆಗೆಡಿಸಿದೆ. ಬಿಜೆಪಿ ಮತ್ತು ಜೆಡಿಎಸ್ (BJP & JDS) ಮೈತ್ರಿ ಮಾಡಿಕೊಂಡಿರೋದ್ರಿಂದ ಉಭಯ ನಾಯಕರು ಕೂತು ಮಾತಾಡಿ ಇದನ್ನ ಬಗೆಹರಿಸಿಕೊಳ್ತಾರ ಅಥವಾ ನಿಖಿಲ್ ರನ್ನೇ (Nikhil) ಮಂಡ್ಯದಿಂದ ಕಣಕ್ಕಿಳಿಸುತ್ತಾರಾ ಕಾದು ನೋಡಬೇಕಿದೆ.