ಚಿಕ್ಕಮಗಳೂರಿಗೆತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿಯಾಗಿದೆ. ಬೆಂಗಳೂರಿನಿಂದ ಬಂದಿದ್ದ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ.

ವಿಜಯೇಂದ್ರ ಅವರ ವಾಹನದ ಮುಂಭಾಗ ಬೆಂಗಳೂರು ಬೆಂಗಾವಲು ವಾಹನ ಮತ್ತು ಹಿಂದೆ ಚಿಕ್ಕಮಗಳೂರಿನ ಬೆಂಗಾವಲು ವಾಹನ ಸಾಗಿಬರುತ್ತಿತ್ತು.ಈ ಬೆಂಗಾವಲು ವಾಹನಗಳ ಮಧ್ಯದಲ್ಲಿ ವಿಜಯೇಂದ್ರ ವಾಹನ ಇತ್ತು.
ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಲಿಕ್ಯಾ ಕ್ರಾಸ್ ಬಳಿ ಘಟನೆ ನಡೆದಿದೆ.