ವಿವಿಧ ಕಾರಣಗಳಿಂದ ತೆರವಾಗಿದ್ದ ಆರು ರಾಜ್ಯಗಳ ಏಳು ವಿಧಾನಸಭೆಗಳ ಉಪಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟ ಮಾಡಿದೆ.
ನಾಮಪತ್ರ ಸಲ್ಲಿಸಲು ಅಕ್ಟೋಬರ್ 14ರಂದು ಕೊನೆಯ ದಿನವಾಗಿದ್ದು ಹಿಂಪಡೆಯಲು ಅಕ್ಟೋಬರ್ 17 ಕೊನೆಯ ದಿನವಾಗಿರುತ್ತದೆ. ನವೆಂಬರ್ 3ರಂದು ಮತದಾನ ನಡೆಯಲಿದ್ದು ನವೆಂಬರ್ 6ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಮಹಾರಾಷ್ಟ್ರದ ಅಂಧೇರಿ ಪೂರ್ವ, ಬಿಹಾರದ ಮೊಕಾಮ ಹಾಗೂ ಗೋಪಿಗಂಜ್, ಹಾರಿಯಾಣದ ಅದಮ್ಪುರ, ತೆಲಂಗಾಣದ ಮುನಗೋಡೆ, ಉತ್ತರಪ್ರದೇಶದ ಗೋಲಾ ಗೋಕರ್ಣನಾಥ, ಒಡಿಶಾದ ಧಾಮನಗರ(SC)ಗೆ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
