ಶಾಂತಿನಗರದ ಬಿಟಿಎಸ್ ರೋಡ್ ಬ್ಲಾಕ್ ಮಾಡಿ ಪ್ರತಿಭಟನೆ ಸಾವಿರಾರು ಆಟೋ, ಕ್ಯಾಬ್ ಗಳನ್ನು ತಂದಿರುವ ಚಾಲಕರು, ಆಟೋ ಕ್ಯಾಬ್ ಗಳನ್ನು ರೋಡ್ ಗೆ ಅಡ್ಡಲಾಗಿ ಹಾಕಿ ಆಕ್ರೋಶ. ಈಗಾಗಲೇ ರಾಜ್ಯ ಸರ್ಕಾರ ಫೆಬ್ರವರಿಯಲ್ಲಿಯೇ ಓನ್ ಸಿಟಿ ಓನ್ ರೇಟ್ ಆದೇಶವನ್ನು ಹೊರಡಿಸಿದೆ, ಆದೇಶ ಆಗಿ ಆರು ತಿಂಗಳಾದ್ರು ಯಾವುದೇ ಅಗ್ರಿಗೇಟರ್ ಕಂಪನಿಗಳು ಆದೇಶವನ್ನು ಪಾಲನೆ ಮಾಡ್ತಿಲ್ಲ.
ಆರ್ ಟಿ ಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಚಾಲಕರಿಂದ ಆರ್ ಟಿ ಓ ಕಚೇರಿ ಮುಂದೆ ಬೃಹತ್ ಪ್ರತಿಭಟನೆ, ಈಗಾಗಲೇ ರಾಜ್ಯ ಸರ್ಕಾರ ಪ್ರಯಾಣಿಕರಿಗೆ ತೊಂದರೆ ಆಗಬಾರದು ಪ್ರಯಾಣಿಕರಿಂದ ದುಪ್ಪಟ್ಟು ದರ ತೆಗೆದುಕೊಳ್ಳಬಾರದು ಎಂದು ಆದೇಶ ನೀಡಿದೆ.
ಆದರೆ ಓಲಾ- ಉಬರ್ ಸೇರಿದಂತೆ ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ದುಪ್ಪಟ್ಟು ದರವನ್ನು ಪಡೆದುಕೊಳ್ಳುತ್ತಿದ್ರೂ ಕ್ರಮ ತೆಗೆದುಕೊಳ್ತಿಲ್ಲ, ಕೂಡಲೇ ಈ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಂದು ಪ್ರತಿಭಟನೆ.
ಆಟೋ ಕ್ಯಾಬ್ ಗಳನ್ನು ರೋಡ್ ಗೆ ಅಡ್ಡಲಾಗಿ ನಿಲ್ಲಿಸಿರುವುದರಿಂದ ಬಿಟಿಎಸ್ ರೋಡ್ ನಲ್ಲಿ ಟ್ರಾಫಿಕ್ ಜಾಮ್
ರೋಡ್ ನಲ್ಲಿ ನಿಂತ ಕೆ ಎಸ್ ಆರ್ ಟಿ ಸಿ ಬಿಎಂಟಿಸಿ ಸೇರಿದಂತೆ ವಾಹನಗಳು. ವಕೀಲ ನಟರಾಜ್ ಶರ್ಮ ನೇತೃತ್ವದಲ್ಲಿ ಪ್ರತಿಭಟನೆ.
ಚಾಲಕರ ಬೇಡಿಕೆಗಳು
1- ಓನ್ ಸಿಟಿ ಓನ್ ಫೇರ್ ಜಾರಿಯಾಗಬೇಕು.
2- ರಾಪಿಡೋ ಬೈಕ್ ಟ್ಯಾಕ್ಸಿ ನಿಲ್ಲಬೇಕು.
3- ಆರ್ ಟಿ ಓ ಅಧಿಕಾರಿಗಳು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಕಾರ್ಯಾಚರಣೆ ಮಾಡಬೇಕು.
4- ಪೋರ್ಟರ್ ಕಂಪನಿಯನ್ನು ಬ್ಯಾನ್ ಮಾಡಬೇಕು.
5- ಸ್ಕೂಲ್ ವಾಹನಗಳಿಗೆ ಪರ್ಮಿಟ್ ನೀಡಬೇಕು.