ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಸನಾಲಯವು ವಿಚಾರಣೆಗೆ ಹಾಜರಾಗುವಂತೆ ನೋಡಿಸ್ ನೀಡಿದ್ದು ಸೋಮವಾರ ವಿಚಾರಣೆಯನ್ನ ಎದುರಿಸಿದ್ದಾರೆ.
ಇನ್ನು ರಾಹುಲ್ ವಿಚಾರಣೆಗೆ ಹಾಜರಾಗುವ ಮುನ್ನ ಎಐಸಿಸಿ ಮುಖ್ಯ ಕಚೇರಿಯಿಂದ ಇಡಿ ಕಚೇರಿವರೆಗು ಕಾಂಗ್ರೆಸ್ ನಾಯಕರು ಜೊತೆಗೆ ತೆರೆಳಲಿದ್ದೇವೆ ಎಂದು ಸುದ್ದಿಗೋಷ್ಠಿ ಮಾಡಿ ತಿಳಿಸಿದ್ದರು. ಈ ವೇಳೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಕನ್ನಡಿಗ ಬಿ.ವಿ.ಶ್ರೀನಿವಾಸ್ ಪೊಲೀಸರಿಂದ ತಪ್ಪಿಸಿಕೊಂಡು ಒಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇನ್ನು ಈ ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಶ್ರೀನಿವಾಸ್ ಭಾನುವಾರ ರಾತ್ರಿಯಿಂದ ಪೊಲೀಸರು ಕೇಂದ್ರ ಸರ್ಕಾರದ ಎಜೆಂಟರಂತೆ ವರ್ತಿಸುತ್ತಿದ್ದಾರೆ. ನನ್ನನ್ನು ಹಾಗು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆ ಹೋಗದಂತೆ ಹಲವು ಭಾರೀ ಬಂಧಿಸಲು ಪ್ರಯತ್ನಿಸಿದ್ದರು. ಅದರೆ, ನಾವು ಯಾರು ಇದಕ್ಕೆ ಜಗ್ಗುವ ಜನರಲ್ಲ ಎಂದಿದ್ದಾರೆ.
ಮುಂದುವರೆದು, ಪೊಲೀಸರು ನಮ್ಮನ್ನು ಬಂಧಿಸಲು ನಾವೇನಾದ್ರು ಕಳ್ಳತನ ಮಾಡಿದ್ವ ಇನ್ನೊಂದನ್ನ ಮಾಡಿದ್ವ ಆಡಳಿತರೂಢ ಬಿಜೆಪಿ ಸರ್ಕಾರ ವಿನಾಕಾರಣ ದ್ವೇಷ ರಾಜಕಾರಣ ಮಾಡುತ್ತಿದೆ ನಾವು ಇದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಕೂರುವವರಲ್ಲ ಎಂದು ಎಚ್ಚರಿಸಿದ್ದಾರೆ.
ನಾವು ಈ ಹಿಂದೆ ಗ್ಯೂರೆಲ್ಲಾ ವಾರ್ ಫೇರ್ ಟೆಕ್ಷಿಕ್ ಉಪಯೋಗಿಸಿ ಬಂಧಿಸುವುದಕ್ಕೆ ಬಂದಾಗಲೆಲ್ಲ ನಾವು ಚಳೆಹಣ್ಣನ್ನು ತಿನ್ನಿಸಿ ಎಸ್ಕೇಪ್ ಆಗಿದ್ದೀನಿ ಎಂದು ಹೇಳಿದ್ದಾರೆ.
ಇದೇ ವೇಳ ದೆಹಲಿ ಪೊಲೀಸರು ಸಂಸದರನ್ನು ಬಂಧಿಸಿ ಎಐಸಿಸಿ ಕಚೇರರಿ ವಾಪಸ್ ಬಿಡುವುದಾಗಿ ಸುಳ್ಳು ಹೇಳಿ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡ ಬಗ್ಗೆ ಕಿಡಿಕಾರಿದ ಶ್ರೀನಿವಾಸ್ ಬಿಜೆಪಿಯವರು ಪ್ರಜಾಪ್ರಭುತ್ವದ ಕಗ್ಗೊಲೆಯನ್ನ ಮಾಡುತ್ತಿದ್ದಾರೆ ದೇಶದ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸದರಿಗೆ ಇವರು ಈ ರೀತಿ ಮಾಡಿದ್ದರೆ ನಮ್ಮಂತಹವರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
ನಾವು ಸಹ ರಾಜಕಾರಣ ಮಾಡುವುದಕ್ಕೆ ಬಂದಿರುವುದು ನಿಮ್ಮ ಹಾಗೇ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವುದಕ್ಕಲ್ಲ. ಹಲವರನ್ನು ನೀವು ಗೃಹ ಬಂಧನದಲ್ಲಿಟ್ಟಿದ್ದೀರಿ ಇದು ಹೀಗೆ ಆದರೆ, ಸರಿ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.






