ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ಮಂಗಳವಾರ ಮಂಡ್ಯ ಜಿಲ್ಲೆಯ ಪಿಇಎಸ್ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿ ತೋರಿದ ದಿಟ್ಟ ನಿಲುವಿಗೆ ಪ್ರಶಂಸೆಗೆ ಸುರಿಮಳೆ ಹಾಗೂ ಬಹುಮಾನ ನೀಡಲಾಗಿದೆ.
ಪಿಇಎಸ್ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳ ಸಮೂಹ ಮುಸ್ಲೀಂ ವಿದ್ಯಾರ್ಥಿನಿಯ ಹಿಂದೆ ʼಜೈ ಶ್ರೀರಾಮ್ʼ ಎಂದು ಅಣಕಿಸಿದ ಹಿನ್ನೆಲೆಯಲ್ಲಿ ಬಿಬಿ ಮುಸ್ಕಾನ್ ಖಾನ್ ಎಂಬ ವಿದ್ಯಾರ್ಥಿನಿ ಒಬ್ಬಂಟಿಯಾಗಿ ಕಾಲೇಜು ಕ್ಯಾಂಪಸ್ಸಿನಲ್ಲೇ ʼಅಲ್ಲಾಹು ಅಕ್ಬರ್ʼ ಎಂದು ಘೋಷಣೆ ಕೂಗಿ ತಿರುಗೇಟು ನೀಡಿದ್ದಳು.
ಬಿಬಿ ಮುಸ್ಕಾನ್ ಅವರ ದಿಟ್ಟ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿತ್ತು. ಅಸಂಖ್ಯ ಜನರು ಮುಸ್ಕಾನ್ ಕೈ ಮೇಲೆ ಮಾಡಿ ಕೂಗಿದ ಭಾವಚಿತ್ರವನ್ನು ಹಂಚಿಕೊಂಡು ಅವಳ ವ್ಯಕ್ತಿತ್ವನ್ನು ಬಣ್ಣಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಮುಸ್ಲಿಂ ಸಮುದಾಯದ ಜಮಾಅತ್ ಉಲ್ಮಾ ಐ ಹಿಂದ್ ಸಂಘಟನೆ ಬಿಬಿ ಮುಸ್ಕಾನ್ ಖಾನ್ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದೆ. ಈ ಕುರಿತು ತಮ್ಮ ಟ್ವೀಟರ್ ಖಾತೆಯಲ್ಲಿ ಹಾಕಿಕೊಂಡ ಪೋಸ್ಟರ್ ಈಗ ಎಲ್ಲಡೇ ವೈರಲ್ ಕೂಡ ಆಗುತ್ತಿದೆ.











